More

    ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ: ಸೂಚ್ಯಂಕ ಕುಸಿತದಲ್ಲಿ ರಿಲಯನ್ಸ್ ನಷ್ಟ, ಟಾಟಾಗೆ ಲಾಭ

    ಮುಂಬೈ: ಏಷ್ಯಾ ಮತ್ತು ಐರೋಪ್ಯ ಮಾರುಕಟ್ಟೆಗಳ ದುರ್ಬಲ ಪ್ರವೃತ್ತಿಗಳ ನಡುವೆಯೇ ರಿಲಯನ್ಸ್ ಇಂಡಸ್ಟ್ರೀಸ್, ಭಾರ್ತಿ ಏರ್‌ಟೆಲ್ ಮತ್ತು ಮಾರುತಿ ಕಂಪನಿಯ ಷೇರುಗಳ ಮಾರಾಟದಿಂದಾಗಿ ಬೆಂಚ್‌ಮಾರ್ಕ್ ಸೂಚ್ಯಂಕ ಸೋಮವಾರ 354 ಅಂಕಗಳ ಕುಸಿತ ಕಂಡಿತು.

    30-ಷೇರುಗಳ ಬಿಎಸ್‌ಇ ಸೂಚ್ಯಂಕವು 354.21 ಅಂಕಗಳು ಅಥವಾ ಶೇಕಡಾ 0.49 ರಷ್ಟು ಕುಸಿದು 71,731.42 ಕ್ಕೆ ಸ್ಥಿರವಾಯಿತು. ದಿನದ ನಡುವಿನ ವಹಿವಾಟಿನಲ್ಲಿ ಇದು ಗರಿಷ್ಠ 72,385.93 ಮತ್ತು ಕನಿಷ್ಠ 71,602.14 ಮುಟ್ಟಿತು.

    ನಿಫ್ಟಿ ಸೂಚ್ಯಂಕ 82.10 ಅಂಕಗಳು ಅಥವಾ 0.38 ರಷ್ಟು ಕುಸಿದು 21,771.70 ಕ್ಕೆ ತಲುಪಿತು.

    ಬಜಾಜ್ ಫೈನಾನ್ಸ್, ಭಾರ್ತಿ ಏರ್‌ಟೆಲ್, ಮಾರುತಿ, ಬಜಾಜ್ ಫಿನ್‌ಸರ್ವ್, ಎಚ್‌ಸಿಎಲ್ ಟೆಕ್ನಾಲಜೀಸ್, ಟೈಟಾನ್, ಹಿಂದೂಸ್ತಾನ್ ಯೂನಿಲಿವರ್, ಜೆಎಸ್‌ಡಬ್ಲ್ಯೂ ಸ್ಟೀಲ್, ಅಲ್ಟ್ರಾಟೆಕ್ ಸಿಮೆಂಟ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಗಳ ಷೇರುಗಳು ಪ್ರಮುಖವಾಗಿ ಹಿನ್ನಡೆ ಕಂಡವು.

    ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ಶುಕ್ರವಾರ ನಿವ್ವಳ ಲಾಭದಲ್ಲಿ 7,100 ಕೋಟಿ ರೂ. ತಲುಪಿ, ಎರಡು ಪಟ್ಟು ಜಿಗಿತವನ್ನು ವರದಿ ಮಾಡಿದ ನಂತರ ಟಾಟಾ ಮೋಟಾರ್ಸ್ ಕಂಪನಿಯ ಷೇರುಗಳು ಅಂದಾಜು 6 ಪ್ರತಿಶತದಷ್ಟು ಜಿಗಿದಿವೆ.

    ಸನ್ ಫಾರ್ಮಾ, ಪವರ್ ಗ್ರಿಡ್, ಮಹೀಂದ್ರಾ ಮತ್ತು ಮಹೀಂದ್ರಾ, ಟಾಟಾ ಸ್ಟೀಲ್, ಎನ್‌ಟಿಪಿಸಿ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಗಳ ಷೇರುಗಳು ಲಾಭ ಗಳಿಸಿದವು.

    ಏಷ್ಯಾದ ಮಾರುಕಟ್ಟೆಗಳಲ್ಲಿ, ಟೋಕಿಯೊ ಲಾಭ ಕಂಡರೆ, ಸಿಯೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ಹಿನ್ನಡೆ ಅನುಭವಿಸಿದವು. ಐರೋಪ್ಯ ಮಾರುಕಟ್ಟೆಗಳು ಸ್ವಲ್ಪಮಟ್ಟಿಗೆ ಕುಸಿತ ಕಂಡವು. ಶುಕ್ರವಾರ ಅಮೆರಿಕದ ಮಾರುಕಟ್ಟೆಗಳು ಲಾಭ ಕಂಡಿವೆ.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ 70.69 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಶುಕ್ರವಾರ ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ 440.33 ಅಂಕ ಏರಿಕೆಯಾಗಿ 72,085.63 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 156.35 ಅಂಕ ಏರಿಕೆಯಾಗಿ 21,853.80 ಕ್ಕೆ ತಲುಪಿತ್ತು.

    ಇಂಡಿಗೋ ಲಾಭ 111% ಹೆಚ್ಚಳ; ರೂ. 3300ರಿಂದ 4145ಕ್ಕೆ ಹೆಚ್ಚಲಿದೆ ಷೇರು ಬೆಲೆ: ಮೂರು ದಲ್ಲಾಳಿ ಸಂಸ್ಥೆಗಳ ಭವಿಷ್ಯ

    ಒಂದೇ ವರ್ಷದಲ್ಲಿ 873% ಲಾಭ ನೀಡಿದ ಷೇರು: ಸೋಮವಾರ 10% ಅಪ್ಪರ್​ ಸರ್ಕ್ಯೂಟ್​ ಹಿಟ್​ಗೆ ಕಾರಣವಾದ ಗುಡ್​ ನ್ಯೂಸ್​ ಏನು?

    Paytm ಷೇರು 3 ದಿನಗಳಲ್ಲಿ 41% ಕುಸಿತ: ಮುಖೇಶ ಅಂಬಾನಿ ಕಣ್ಣುಬಿದ್ದ ತಕ್ಷಣವೇ Jio ಫೈನಾನ್ಷಿಯಲ್ ಷೇರು ಒಂದೇ ದಿನದಲ್ಲಿ 14% ಏರಿಕೆ, ಏನಿದು ಲೆಕ್ಕಾಚಾರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts