More

    ರಾಜ್ಯ ಪ್ರವಾಸೋದ್ಯಮಕ್ಕೆ ‘ಕಿಕ್ ಸ್ಟಾರ್ಟ್’: ಲವ್ ಯುವರ್ ಲೋಕಲ್ ಪರಿಕಲ್ಪನೆ

    ಮುಂದಿನ ಯೋಜನೆಗಳು
    1

    ಚಿತ್ರದುರ್ಗ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿರುವ ಪ್ರಮುಖ ಪಾರಂಪರಿಕ ಪ್ರವಾಸಿತಾಣಗಳನ್ನು ಗುರುತಿಸಿ ಪ್ರವಾಸಿ ಮೂಲಸೌಲಭ್ಯ ಅಭಿವೃದ್ಧಿಪಡಿಸಲು ಪ್ರಸ್ತಾವನೆಯನ್ನು ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯಕ್ಕೆ ಸಲ್ಲಿಸಲಾಗಿದೆ.

    2 2020-25ರ ಪ್ರವಾಸೋದ್ಯಮ ನೀತಿ ಮುಂದಿನ ತಿಂಗಳು ಜಾರಿಗೆ ಬರಲಿದ್ದು, ಈ ಮೂಲಕ ಸ್ಥಳೀಯರಿಗೆ ಉದ್ಯೋಗ, ಪ್ರವಾಸಿತಾಣಗಳ ಸರ್ವಾಂಗೀಣ ಅಭಿವೃದ್ಧಿ, ಮೂಲಸೌಕರ್ಯಗಳಿಗೆ ಒತ್ತು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಇಲಾಖೆಯಿಂದ ವಿವಿಧ ಯೋಜನೆ ಜಾರಿ.

    3 ಪ್ರಾದೇಶಿಕ ಮಟ್ಟದಲ್ಲಿ ಆಹಾರ ಮೇಳಗಳನ್ನು ನಡೆಸಿ, ಆಹಾರ ಪ್ರಿಯರನ್ನೂ ಸೆಳೆಯುವ ಮೂಲಕ ಖಾದ್ಯಗಳ ಪ್ರವಾಸೋದ್ಯಮ ಬೆಳೆಸಲು ಅವಕಾಶವಿದೆ. ಹೀಗೆ ಹಲವು ಬಗೆಯ ಪ್ರವಾಸೋದ್ಯಮವನ್ನು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಚಿಂತನೆ.

    4 ರಾಜ್ಯದಲ್ಲಿ ಈವರೆಗೆ 319 ಪ್ರವಾಸಿ ತಾಣ ಗುರುತಿಸಲಾಗಿದೆ. ಆ ಪೈಕಿ ಪ್ರಮುಖವಾಗಿರುವ 20 ವಿಶ್ವವಿಖ್ಯಾತ ಪ್ರವಾಸಿತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಲಿನಕ್ಷೆ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿ ಅನುಷ್ಠಾನ ಮಾಡಲಾಗುವುದು.

    5 ಆದಿವಾಸಿ ಮತ್ತು ಬಂಜಾರ ಕಲ್ಚರಲ್ ಹೆರಿಟೇಜ್ ನಿಮಾಣದ ಕಲ್ಪನೆಗೆ ಚಾಲನೆ ನೀಡಲಾಗಿದೆ. ಕೃಷಿ, ತೋಟಗಾರಿಕೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಜಂಟಿ ಸಹಯೋಗದಲ್ಲಿ ಕೃಷಿ ಸಂಸ್ಕೃತಿಯನ್ನು ಪ್ರವಾಸಿಗರಿಗೆ ಕಟ್ಟಿಕೊಡಲು ಅಗ್ರೀ ಟೂರಿಸಂ ಯೋಜನೆ ರೂಪಿಸಲಾಗುತ್ತಿದೆ.

    6 10 ವರ್ಷಗಳಿಂದ ಸ್ಥಗಿತಗೊಳಿಸಲಾಗಿದ್ದ ಗೋಲ್ಡನ್ ಚಾರಿಯೆಟ್ ರೈಲು ಸಂಚಾರ ಮರು ಚಾಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಭಾರತೀಯ ರೈಲ್ವೆ ನಿಗಮದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

    ಬೆಂಗಳೂರು: ಕರೊನಾ ಹಾಗೂ ಲಾಕ್​ಡೌನ್​ನಿಂದ ಕಳಾಹೀನವಾಗಿರುವ ಪ್ರವಾಸೋದ್ಯಮಕ್ಕೆ ‘ಕಿಕ್ ಸ್ಟಾರ್ಟ್’ ನೀಡಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ.
    ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಕ್ರೀಡಾ ಖಾತೆ ಸಚಿವರಾಗಿ ಒಂದು ವರ್ಷದಲ್ಲಿ ಮಾಡಿರುವ ಸಾಧನೆಗಳು ಹಾಗೂ ಮುಂದೆ ಕೈಗೊಳ್ಳಲಿರುವ ಯೋಜನೆ ಕುರಿತಂತೆ ಸುದ್ದಿಗೋಷ್ಟಿ ನಡೆಸಿದ ಸಿ.ಟಿ.ರವಿ, ಕರೊನಾದಿಂದ ಆದ ಸಮಸ್ಯೆ ಮತ್ತು ಮುಂದಿನ ಪ್ರಯತ್ನಗಳನ್ನು ವಿವರಿಸಿದರು.

    ಇದನ್ನೂ ಓದಿ: ಕರೊನಾ ಗುಡ್‌ನ್ಯೂಸ್‌: ಸಕ್ರಿಯ ಪ್ರಕರಣಗಳಿಗಿಂತ ಬಿಡುಗಡೆಯಾದವರು ಎರಡೂವರೆ ಪಟ್ಟು

    ಸ್ಥಗಿತಗೊಂಡಿರುವ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸುವ ಹಾಗೂ ಸ್ಥಳೀಯ ಪ್ರವಾಸಿತಾಣಗಳನ್ನು ದೇಸಿ ಪ್ರವಾಸಿಗರಿಗೆ ಪರಿಚಯಿಸುವ ‘ಲವ್ ಯುವರ್ ಲೋಕಲ್’ ಪರಿಕಲ್ಪನೆ ಜಾರಿಗೆ ತರಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಇದನ್ನೂ ಓದಿ: ಪೊಲೀಸರಿಂದ ವಿಶೇಷ ಕಾರ್ಯಾಚರಣೆ

    ಕರೊನಾದಿಂದ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ನಷ್ಟವಾಗಿದೆ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಆರ್ಥಿಕ ಹಿನ್ನಡೆ ಉಂಟಾಗಿದೆ. ಆದರೆ, ಶೀಘ್ರವೇ ಈ ಕ್ಷೇತ್ರ ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದ ಅವರು, ಪ್ರವಾಸಿಗರನ್ನು ಆಕರ್ಷಿಸಲು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ. ಪ್ರವಾಸಿತಾಣಗಳಲ್ಲಿರುವ ಆಹ್ಲಾದಕರ ಹವಾಮಾನ, ಕಾಸೊ್ಮೕಪಾಲಿಟಿನ್ ಸಂಸ್ಕೃತಿ, ಅತ್ಯುನ್ನತ ಆಡಳಿತ ಪ್ರಕ್ರಿಯೆ, ಹೂಡಿಕೆಗಿರುವ ವಿಫುಲ ಅವಕಾಶ, ಉದ್ಯೋಗ ಸೃಷ್ಟಿ ಸೇರಿ ಹತ್ತು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಉದ್ದೇಶವಿದೆ ಎಂದರು.

    ಇದನ್ನೂ ಓದಿ: 4ನೇ ಸುತ್ತಿನ ಪ್ರಾದೇಶಿಕ ಸಂಪರ್ಕ ಯೋಜನೆ-78 ಹೊಸ ವಾಯುಮಾರ್ಗಕ್ಕೆ ಒಪ್ಪಿಗೆ

    ಲಭ್ಯವಿರುವ ಸಂಪನ್ಮೂಲ ಬಳಸಿ ರಾಜ್ಯದ ಪ್ರವಾಸಿತಾಣಗಳಿಗೆ ದೇಶ-ವಿದೇಶಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿ, ಮುಂದಿನ ಮೂರು ವರ್ಷದೊಳಗೆ ದೇಶದಲ್ಲೇ ಕರ್ನಾಟಕ ಪ್ರವಾಸೋದ್ಯಮವನ್ನು ಮೊದಲ ಮೂರು ಸ್ಥಾನದೊಳಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

    ಇದನ್ನೂ ಓದಿ: ತನ್ನ ಎರಡೂ ಕಿವಿಯನ್ನು ಕತ್ತರಿಸಿ, ಭದ್ರವಾಗಿ ಜಾರ್​​ನಲ್ಲಿ ಇಟ್ಟವನ ತಲೆಬುರುಡೆ ನೋಡಿ…!

    ರಾಜ್ಯದಲ್ಲಿರುವ 25000ಕ್ಕೂ ಹೆಚ್ಚು ಐತಿಹಾಸಿಕ ಮಹತ್ವವುಳ್ಳ ಸ್ಮಾರಕಗಳು, ದೇವಸ್ಥಾನಗಳನ್ನು ಸಂರಕ್ಷಣೆ ಯೋಜನೆಯಡಿ ಪುನರುಜ್ಜೀವನಗೊಳಿಸುವುದು, ಜಾಗತಿಕ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ ಆಯೋಜಿಸುವುದು, ಜೋಗ ಜಲಪಾತವನ್ನು ಸಮಗ್ರವಾಗಿ ಅಭಿವೃದ್ಧಿ ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಪ್ರವಾಸಿ ಮೂಲಸೌಕರ್ಯ ನಿಮಾಣ, ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ, ಬದಾಮಿ, ಶ್ರೀರಂಗಪಟ್ಟಣ ಕೋಟೆ ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಮೖಸೂರಿನಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಕಾರವನ್ನು 75.00 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕಗೊಳಿಸಲು ವರದಿ ತಯಾರಿಸಲಾಗಿದೆ.

    ಇದನ್ನೂ ಓದಿ: ಈ 5 ವರ್ಷದ ಬಾಲಕ ಅಮ್ಮನ ಜೀವ ಉಳಿಸಿದ್ದು ‘ಆಟಿಕೆ ಆ್ಯಂಬುಲೆನ್ಸ್​’ನಿಂದ; ಸಮಯಪ್ರಜ್ಞೆಗೆ ಶ್ಲಾಘನೆ

    ಬದಾಮಿ, ವಿಜಯಪುರ, ಹಂಪಿ ಹಾಗೂ ಬೇಲೂರಿನಲ್ಲಿ ಪ್ರವಾಸಿಗರ ಸೌಕರ್ಯಕ್ಕಾಗಿ 79.98 ಕೋಟಿ ರೂ. ಅಂದಾಜು ವೆಚ್ಚದಲ್ಲಿ ತಾರಾ ಹೋಟೆಲ್ ಗಳನ್ನು ನಿರ್ವಿುಸಲು ಸಮಗ್ರ ಯೋಜನಾ ವದಿ ಸಿದ್ಧಪಡಿಸಲಾಗಿದ್ದು, ಸದ್ಯದಲ್ಲಿಯೇ ಕಾಮಗಾರಿ ಶಂಕುಸ್ಥಾಪನೆ ನೆರವೆರಿಸಲಾಗುವುದು.

    ಇದನ್ನೂ ಓದಿ: ‘ಗ್ರೂಪ್ ಆಫ್​ 23’ ಮೇಲೆ ‘ಕೈ’ಕಮಾಂಡ್​ ಸರ್ಜಿಕಲ್ ಸ್ಟ್ರೈಕ್​ !: ಸಿಬಲ್​ ಕಳವಳ

    ಸಿದ್ದಗಂಗಾಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಹುಟ್ಟೂರಾದ ರಾಮನಗರ ಜಿಲ್ಲೆಯ ವೀರಾಪುರ ಹಾಗು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಹುಟ್ಟೂರಾದ ರಾಮನಗರ ಜಿಲ್ಲೆಯ ಬಾನಂದೂರಿನಲ್ಲಿ ಪಾರಂಪರಿಕ ಸಾಂಸೃ್ಕಕ ಕೇಂದ್ರಗಳನ್ನು ಸ್ಥಾಪನೆ, ಚಿತ್ರದುರ್ಗ ಜಿಲ್ಲೆಯಲ್ಲಿರುವ ಶ್ರೀ ಮುರುಘಾ ಮಠದ ಆವರಣದಲ್ಲಿ 325 ಅಡಿ ಎತ್ತರದ ಶ್ರೀ ಜಗಜೊ್ಯೕತಿ ಬಸವೇಶ್ವರರ ಕಂಚಿನ ಪುತ್ಥಳಿಯನ್ನು 20.00 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ, ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿ 60.00 ಕೋಟಿ ರೂ. ವೆಚ್ಚದಲ್ಲಿ ಕಲಾಕ್ಷೇತ್ರಗಳನ್ನು ನಿರ್ವಿುಸುವುದಾಗಿ ಸಚಿವರು ತಿಳಿಸಿದರು.

    ಇದನ್ನೂ ಓದಿ: ಅವಾಕ್ಸ್​ ಖರೀದಿಗೆ 147.81 ಶತಕೋಟಿ ಡಿಫೆನ್ಸ್ ಡೀಲ್?| 200 ಟ್ಯಾಕ್ಟಿಕಲ್​ ಡ್ರೋನ್​ಗಳು ಸೇರಲಿವೆ ಸೇನೆ

    ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಮೖಸೂರಿನಲ್ಲಿ ಸ್ಥಾಪಿಸಲು ನಿರ್ಧರಿಸಿದ್ದು, ಮೈಸೂರು ವಿಶ್ವ ವಿದ್ಯಾಲಯಕ್ಕೆ ಸೇರಿದ ಜಾಗದಲ್ಲಿ ಕಟ್ಟಡ ನಿರ್ವಿುಸಲು ಉದ್ದೇಶಿಸಲಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಕ್ರಿಯಾಲ್ ರನ್ನು ಖುದ್ದು ಭೇಟಿಯಾಗಿ ಕೂಡಲೇ ಸ್ವಾಯತ್ತ ಕೇಂದ್ರ ಸ್ಥಾಪನೆಗೆ ಅನುಮೋದನೆ ನೀಡುವಂತೆ ಕೋರಲಾಗಿದೆ. ಕೇಂದ್ರ ಸರ್ಕಾರ ಇದಕ್ಕೆ ಶೀಘ್ರದಲ್ಲೇ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

    ₹ 2.35 ಲಕ್ಷ ಕೋಟಿ ತೆರಿಗೆ ಕೊರತೆ: ರಾಜ್ಯಗಳ ಎದುರು ಎರಡು ಆಯ್ಕೆಗಳನ್ನಿಟ್ಟ ಕೇಂದ್ರ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts