More

    ಕರೊನಾ ಗುಡ್‌ನ್ಯೂಸ್‌: ಸಕ್ರಿಯ ಪ್ರಕರಣಗಳಿಗಿಂತ ಬಿಡುಗಡೆಯಾದವರು ಎರಡೂವರೆ ಪಟ್ಟು

    ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 9386 ಹೊಸ ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಇಲ್ಲಿಯವರೆಗೆ ಸೋಂಕಿತರಾಗಿರುವವರ ಸಂಖ್ಯೆ 3 ಲಕ್ಷದ 9 ಸಾವಿರದ 792.|

    ಈ ಪೈಕಿ ಕಳೆದ 24 ಗಂಟೆಗಳಲ್ಲಿ 141 ಮಂದಿ ಮೃತಪಟ್ಟಿದ್ದು, ಸೋಂಕಿಗೆ ಈವರೆಗೆ 5,232 ಮಂದಿ ಬಲಿಯಾಗಿದ್ದಾರೆ.

    ಇಂದು ಒಂದೇ ದಿನ ಬಿಡುಗಡೆಯಾದವರ ಸಂಖ್ಯೆ 7866. ಈ ಮೂಲಕ ಮೊದಲ ದಿನದಿಂದ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 2 ಲಕ್ಷದ 19 ಸಾವಿರದ 554.

    ಇದನ್ನೂ ಓದಿ: ಕರೊನಾ ಶ್ವಾಸಕೋಶಕ್ಕಷ್ಟೇ ಸೀಮಿತವಾಗಿಲ್ಲ: ವೈರಸ್‌ ಭಯಾನಕತೆ ಬಿಚ್ಚಿಟ್ಟಿದ್ದಾರೆ ಏಮ್ಸ್‌ ತಜ್ಞರು

    84,987 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 747 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಂಕಿ ಅಂಶವನ್ನು ನೋಡಿದರೆ ರಾಜ್ಯದಲ್ಲಿ ಸಕ್ರೀಯ ಪ್ರಕರಣಗಳಿಗಿಂತ ಬಿಡುಗಡೆಯಾಗಿ ಹೋಗಿರುವ ಸೋಂಕಿತರ ಪ್ರಮಾಣ ಎರಡೂವರೆ ಪಟ್ಟು ಇರುವುದು ತಿಳಿಯುತ್ತದೆ.

    ಇವತ್ತು ಒಂದೇ ದಿನ 29,04 ಮಂದಿ ರ್‍ಯಾಪಿಡ್‌ ಟೆಸ್ಟ್‌ ಮೂಲಕ ಸೋಂಕು ಇದೆಯೋ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡಲಾಗಿದೆ. ಬೇರೆ ವಿಧಾನದಲ್ಲಿ 39,183 ಮಂದಿಗೆ ಪರೀಕ್ಷೆ ಮಾಡಲಾಗಿದೆ.

    ಇನ್ನು ಭಾರತದ ಸುದ್ದಿ ಹೇಳುವುದಾದರೆ ಇದುವರೆಗೆ ಭಾರತದಲ್ಲಿ 3.31 ದಶಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಈ ಪೈಕಿ 2.52 ದಶಲಕ್ಷ ಮಂದಿ ಗುಣಮುಖರಾಗಿದ್ದಾರೆ. ಸೋಂಕಿಗೆ ಇಲ್ಲಿಯವರೆಗೆ 60,472 ಮಂದಿ ಜೀವ ಕಳೆದುಕೊಂಡಿದ್ದಾರೆ.

    ಕರ್ನಾಟಕದ ವಿವಿಧ ಜಿಲ್ಲೆಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ:

    ಕರೊನಾ ಗುಡ್‌ನ್ಯೂಸ್‌: ಸಕ್ರಿಯ ಪ್ರಕರಣಗಳಿಗಿಂತ ಬಿಡುಗಡೆಯಾದವರು ಎರಡೂವರೆ ಪಟ್ಟು ಕರೊನಾ ಗುಡ್‌ನ್ಯೂಸ್‌: ಸಕ್ರಿಯ ಪ್ರಕರಣಗಳಿಗಿಂತ ಬಿಡುಗಡೆಯಾದವರು ಎರಡೂವರೆ ಪಟ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts