More

    ₹ 2.35 ಲಕ್ಷ ಕೋಟಿ ತೆರಿಗೆ ಕೊರತೆ: ರಾಜ್ಯಗಳ ಎದುರು ಎರಡು ಆಯ್ಕೆಗಳನ್ನಿಟ್ಟ ಕೇಂದ್ರ ಸರ್ಕಾರ

    ನವದೆಹಲಿ: ರಾಜ್ಯಗಳ ಜಿಎಸ್​ಟಿ ರೆವೆನ್ಯೂ ಕೊರತೆ ಆಗಿರುವ ಬಗ್ಗೆ ಇಂದು ನಡೆದ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಚರ್ಚೆ ಆಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಗುರುವಾರ ಜಿಎಸ್​ಟಿ ಕೌನ್ಸಿಲ್ ಸಭೆ ನಡೆದಿತ್ತು. ಜಿಎಸ್​ಟಿ ರೆವೆನ್ಯೂ ಕೊರತೆ ನೀಗಿಸುವುದಕ್ಕಾಗಿ ಕೇಂದ್ರ ಸರ್ಕಾರ ಎರಡು ಆಯ್ಕೆಗಳನ್ನು ರಾಜ್ಯಗಳ ಮುಂದಿಟ್ಟಿದೆ.

    ಇದನ್ನೂ ಓದಿ: ‘ಗ್ರೂಪ್ ಆಫ್​ 23’ ಮೇಲೆ ‘ಕೈ’ಕಮಾಂಡ್​ ಸರ್ಜಿಕಲ್ ಸ್ಟ್ರೈಕ್​ !: ಸಿಬಲ್​ ಕಳವಳ

    ರೆವೆನ್ಯೂ ಕೊರತೆ ನೀಗಿಸುವ   2 ಆಯ್ಕೆಗಳು

    1 ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಜತೆಗೆ ಸಮಾಲೋಚನೆ ನಡೆಸಿದ ಬಳಿಕ ವಿಶೇಷವಾದ ಗವಾಕ್ಷಿ ಮೂಲಕ ರಾಜ್ಯಗಳಿಗೆ ಸಮಂಜಸವಾದ ಬಡ್ಡಿದರದಲ್ಲಿ 97,000 ಕೋಟಿ ರೂಪಾಯಿ ಸಾಲದ ನೆರವು ಒದಗಿಸುವುದು. ಇದನ್ನು ರಾಜ್ಯಗಳು ಐದು ವರ್ಷಗಳ ನಂತರ (ಜಿಎಸ್​​ಟಿ ಅನುಷ್ಠಾನದ ದಿನದಿಂದ) ಸೆಸ್​ ಸಂಗ್ರಹಿಸಿ ಅದರ ಮೂಲಕ ಮರುಪಾವತಿಸಬೇಕು.

    2 ಕೊರತೆ ಉಂಟಾಗಿರುವ 2.35 ಲಕ್ಷ ಕೋಟಿ ರೂಪಾಯಿಯನ್ನು ವಿಶೇಷ ಗವಾಕ್ಷಿ ಮೂಲಕ ಸಾಲದ ರೂಪದಲ್ಲಿ ಪಡೆಯುವುದು ಎರಡನೇ ಆಯ್ಕೆ.

    ಒಂದೊಮ್ಮೆ ರಾಜ್ಯಗಳು ಮೊದಲ ಆಯ್ಕೆಯನ್ನು ಅನುಸರಿಸಿದರೆ, ಪರಿಹಾರದ ವಿಚಾರ ಉಳಿದುಕೊಳ್ಳಲಿದೆ. ಹಾಗಾಗಿ ಕಡಿಮೆ ಸಾಲ ಪಡೆಯುವುದು ಮತ್ತು ನಂತರದಲ್ಲಿ ಸೆಸ್ ಪಡೆಯುವುದು ಅಥವಾ ಹೆಚ್ಚು ಸಾಲ ಪಡೆಯುವುದು ಮತ್ತು ಸೆಸ್ ಸಂಗ್ರಹಿಸಿ ಟ್ರಾನ್ಸಿಷನ್ ಅವಧಿಯಲ್ಲಿ ಸಂಗ್ರಹಿಸಿದ ಸೆಸ್ ಮೂಲಕ ಮರುಪಾವತಿಸುವುದು ಎಂಬ ಎರಡು ಆಯ್ಕೆಗಳು ರಾಜ್ಯಗಳ ಮುಂದಿವೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

    ಇದನ್ನೂ ಓದಿ: ಹುಲಿ ಕೊಂದು ಉಗುರಿಗಾಗಿ ಕಾಲು ಕತ್ತರಿಸಿದ ಹಂತಕರು

    ಜಿಎಸ್​ಟಿ ಸಂಗ್ರಹದ ನಿರೀಕ್ಷೆಗಿಂತ 2.35 ಲಕ್ಷ ಕೋಟಿ ರೂಪಾಯಿ ಕೊರತೆ ಉಂಟಾಗಿದೆ. ಇದರಲ್ಲಿ 97,000 ಕೋಟಿ ರೂಪಾಯಿ ಕೊರತೆ ಕೋವಿಡ್ 19 ಸೋಂಕಿನ ಕಾರಣಕ್ಕೆ ಆಗಿದೆ. ಈ ವಿಷಯ ಸಭೆಯಲ್ಲಿ ಚರ್ಚೆಗೆ ಒಳಗಾಗಿದ್ದು, ರಾಜ್ಯಗಳ ಎದುರು ಎರಡು ಆಯ್ಕೆಗಳನ್ನು ಜಿಎಸ್​ಟಿ ಕೌನ್ಸಿಲ್ ಮುಂದಿಟ್ಟಿದೆ. ಈ ಪ್ರಸ್ತಾವನೆಗೆ ಬಗ್ಗೆ ಚಿಂತನೆ ನಡೆಸಿ ಪ್ರತಿಕ್ರಿಯಿಸುವುದಕ್ಕೆ ಏಳು ದಿನಗಳ ಅವಧಿ ಎಂದು ರೆವೆನ್ಯೂ ಸೆಕ್ರೆಟರಿ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ. (ಏಜೆನ್ಸೀಸ್)

    4ನೇ ಸುತ್ತಿನ ಪ್ರಾದೇಶಿಕ ಸಂಪರ್ಕ ಯೋಜನೆ-78 ಹೊಸ ವಾಯುಮಾರ್ಗಕ್ಕೆ ಒಪ್ಪಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts