More

    ವಿದ್ಯಾರ್ಥಿಗಳಿಗೆ ಶುಭಸುದ್ದಿ: ಶೀಘ್ರವೇ ಏಕಕಾಲದಲ್ಲಿ 2 ಪದವಿ ವ್ಯಾಸಂಗ ಮಾಡುವ ಅವಕಾಶ ನಿಮ್ಮದಾಗಲಿದೆ…

    ನವದೆಹಲಿ: ಏಕಕಾಲದಲ್ಲಿ ಎರಡು ಪದವಿ ಕೋರ್ಸ್​ಗಳ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಶುಭ ಸುದ್ದಿ. ಅಂಥದ್ದೊಂದು ಪ್ರಸ್ತಾವನೆಗೆ ಯೂನಿವರ್ಸಿಟಿ ಗ್ರಾಂಟ್ಸ್​ ಕಮಿಷನ್​ (ಯುಜಿಸಿ) ಒಪ್ಪಿಗೆಯನ್ನು ಸೂಚಿಸಿದೆ. ಒಂದರಲ್ಲೇ ಎರಡು ಪದವಿ ಅಥವಾ ವಿಭಿನ್ನ ಮಾದರಿಯಲ್ಲಿ ಎರಡು ಪದವಿ ಪಡೆಯುವ ವಿದ್ಯಾರ್ಥಿಗಳ ಕನಸು ಶೀಘ್ರವೇ ನನಸಾಗಲಿದೆ.

    ಇದನ್ನೂ ಓದಿ: ಸೆಪ್ಟೆಂಬರ್​ವರೆಗೂ ಶಾಲೆ, ಕಾಲೇಜು ಬೇಡ: ವಿವಿಗಳಿಗೆ ಯುಜಿಸಿ ಶಿಫಾರಸು, ಜುಲೈ-ಆಗಸ್ಟ್​ನಲ್ಲಿ ಎಸ್ಸೆಸ್ಸೆಲ್ಸಿ, ವೃತ್ತಿಪರ ಕೋರ್ಸ್ ಪರೀಕ್ಷೆ

    ಭಾರತದಲ್ಲಿ ವಿದ್ಯಾರ್ಥಿಗಳು ಏಕಕಾಲದಲ್ಲಿ ಎರಡು ಪದವಿ ವ್ಯಾಸಂಗ ಮಾಡುವುದಕ್ಕೆ ಅನುಕೂಲವಾಗುವ ಪ್ರಸ್ತಾವನೆಯನ್ನು ಇತ್ತೀಚಿನ ಸಭೆಯಲ್ಲಿ ಯುಜಿಸಿ ಅಂಗೀಕರಿಸಿದೆ. ಒಂದೇ ಸ್ಟ್ರೀಮ್​ಗೆ ಸಂಬಂಧಿಸಿದ ಎರಡು ವಿಷಯಗಳು ಅಥವಾ ವಿಭಿನ್ನ ವಿಷಯಗಳ ಪದವಿಯನ್ನು ವ್ಯಾಸಂಗ ಮಾಡಬಹುದು. ಆದಾಗ್ಯೂ, ಒಂದು ಕೋರ್ಸನ್ನು ವಿದ್ಯಾರ್ಥಿಗಳು ರೆಗ್ಯುಲರ್ ಕಾಲೇಜು ಮೂಲಕ ವ್ಯಾಸಂಗ ಮಾಡಿದರೆ, ಇನ್ನೊಂದನ್ನು ಆನ್​ಲೈನ್ ಡಿಸ್ಟೆನ್ಸ್ ಲರ್ನಿಂಗ್ ಮಾಡ್ ಮೂಲಕ ಮಾಡಬೇಕಾಗುತ್ತದೆ. ಈ ಸಂಬಂಧ ಅಧಿಸೂಚನೆಯೂ ಶೀಘ್ರವೇ ಪ್ರಕಟವಾಗಲಿದೆ ಎಂದು ಯುಜಿಸಿ ಸೆಕ್ರಟರಿ ರಜನೀಶ್ ಜೈನ್ ತಿಳಿಸಿದ್ದಾರೆ.

    ಇದನ್ನೂ ಓದಿ: ಕಾಲೇಜುಗಳನ್ನು ಸೆಪ್ಟಂಬರ್​ನಿಂದ ಆರಂಭಿಸಿ, ಸರ್ಕಾರ ನೇಮಿಸಿದ ಸಮಿತಿಯಿಂದಲೇ ಯುಜಿಸಿಗೆ ಶಿಫಾರಸು

    ಕಳೆದ ವರ್ಷ ಉಪಾಧ್ಯಕ್ಷ ಭೂಷಣ್ ಪಟವರ್ಧನ್​ ಅಧ್ಯಕ್ಷತೆಯ ಸಮಿತಿಯೊಂದನ್ನು ಯುಜಿಸಿ ರಚಿಸಿದ್ದಲ್ಲದೆ, ಎರಡು ಪದವಿಗಳನ್ನು ಏಕಕಾಲಕ್ಕೆ ಮಾಡುವ ವಿಚಾರ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿತ್ತು. ಆದಾಗ್ಯೂ, ಇದೇ ಮೊದಲ ಸಲ ಆಯೋಗ ಈ ವಿಷಯವನ್ನು ಪರಿಶೀಲಿಸುತ್ತಿರುವುದಲ್ಲ. 2012ರಲ್ಲೂ ಇಂಥದ್ದೇ ಒಂದು ಸಮಿತಿಯನ್ನು ರಚಿಸಿತ್ತು. ಶಿಫಾರಸನ್ನೂ ಪಡೆದಿತ್ತಾದರೂ ನಂತರ ಅದು ಮೂಲೆಗುಂಪಾಯಿತು. ಅಂದು ಹೈದರಾಬಾದ್ ಯೂನಿವರ್ಸಿಟಿಯ ಉಪಕುಲಪತಿ ಫುರ್ಕಾನ್ ಕ್ವಾಮರ್​ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿತ್ತು.

    ಇದನ್ನೂ ಓದಿ:  ಯುಜಿಸಿ ನೆಟ್ ಎಕ್ಸಾಂ ಜೂನ್​ 15-20ರ ತನಕ: ಬುಲೆಟಿನ್​ ಪ್ರಕಟಿಸಿದ ಎನ್​ಟಿಎ

    ರೆಗ್ಯುಲರ್ ಮಾಡ್​ನಲ್ಲಿ ಎರಡು ಪದವಿ ವ್ಯಾಸಂಗ ಮಾಡುವುದು ಸಾಧ್ಯವಾಗದೇ ಹೋಗಬಹುದು. ಅದರಿಂದ ಆಡಳಿತಾತ್ಮಕ ಮತ್ತು ಇತರೆ ಸಮಸ್ಯೆಗಳು ಉದ್ಭವಿಸಬಹುದು. ರೆಗ್ಯುಲರ್ ಮಾಡ್​ನಲ್ಲಿ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿ ಸರ್ಟಿಫಿಕೇಟ್ ಕೋರ್ಸ್, ಡಿಪ್ಲೊಮಾ, ಅಡ್ವಾನ್ಸ್ಡ್​ ಡಿಪ್ಲೊಮಾ, ಪಿಜಿ ಡಿಪ್ಲೊಮಾ ಕೋರ್ಸ್​ಗಳನ್ನು ಏಕಕಾಲದಲ್ಲಿ ಮಾಡುವುದಕ್ಕೆ ಅವಕಾಶ ನೀಡಬಹುದು ಎಂದು ಅಂದಿನ ಸಮಿತಿ ತಿಳಿಸಿತ್ತು. (ಏಜೆನ್ಸೀಸ್)

    ಸಂಶೋಧನಾರ್ಥಿಗಳಿಗೆ ಯುಜಿಸಿ ಸಹಾಯ ಹಸ್ತ: ಪ್ರಬಂಧ ಮಂಡನೆಗೆ 6 ತಿಂಗಳ ಕಾಲಾವಧಿ ವಿಸ್ತರಣೆಗೆ ಚಿಂತನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts