More

    ಯುಜಿಸಿ ನೆಟ್ ಎಕ್ಸಾಂ ಜೂನ್​ 15-20ರ ತನಕ: ಬುಲೆಟಿನ್​ ಪ್ರಕಟಿಸಿದ ಎನ್​ಟಿಎ

    ನವದೆಹಲಿ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್​ಟಿಎ) ಸೋಮವಾರ ಯುಜಿಸಿ ನೆಟ್ ಎಕ್ಸಾಂಗೆ ಸಂಬಂಧಿಸಿದ ಬುಲೆಟಿನ್ ಪ್ರಕಟಿಸಿದೆ. ಇದರಂತೆ, ಜೂನ್ 15-20ರ ತನಕ ಎಕ್ಸಾಂ ನಡೆಯಲಿದ್ದು, ಜುಲೈ 5 ರಂದು ಫಲಿತಾಂಶ ಪ್ರಕಟವಾಗಲಿದೆ.

    ಯುಜಿಸಿ ನೆಟ್​ ಜೂನ್ 2020ಕ್ಕೆ ಸಂಬಂಧಿಸಿದ ಆನ್​ಲೈನ್​ ನೋಂದಣಿ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ಏಪ್ರಿಲ್​ 16ರ ತಡರಾತ್ರಿ 11.50ರ ತನಕ ಚಾಲ್ತಿಯಲ್ಲಿ ಇರಲಿದೆ. ಅರ್ಜಿ ಶುಲ್ಕ ಪಾವತಿಸುವುದಕ್ಕೆ ಏಪ್ರಿಲ್ 17 ಕೊನೇ ದಿನವಾಗಿದ್ದು, ಕ್ರೆಡಿಟ್ ಕಾರ್ಡ್​/ಡೆಬಿಟ್ ಕಾರ್ಡ್​/ನೆಟ್​ಬ್ಯಾಂಕಿಂಗ್​/ಪೇಟಿಎಂಗಳ ಮೂಲಕ ಶುಲ್ಕ ಪಾವತಿಸಬಹುದು. ಪರೀಕ್ಷೆಗೆ ಸಂಬಂಧಿಸಿದ ಅಡ್ಮಿಟ್ ಕಾರ್ಡ್​ ಮೇ 15ರಂದು ಬಿಡುಗಡೆಯಾಗಲಿದೆ. ದೇಶದ ವಿವಿಧ ಕೇಂದ್ರಗಳಲ್ಲಿ ಜೂನ್​ 15 ರಿಂದ 20ರ ತನಕ ಎಕ್ಸಾಂ ನಡೆಯಲಿದೆ.

    ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಜ್ಯೂನಿಯರ್​ ರಿಸರ್ಚ್​ ಫೆಲೋಷಿಪ್​ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಅರ್ಹತೆಗಾಗಿ ಯುಜಿಸಿ ನೆಟ್ ಎಕ್ಸಾಂ ಅನ್ನು ಎನ್​ಟಿಎ ನಡೆಸುತ್ತದೆ. ಇದರಲ್ಲಿ ಎರಡು ಪೇಪರ್​ಗಳಿರುತ್ತವೆ. ಎರಡೂ ಪರೀಕ್ಷೆಗಳು ಕಂಪ್ಯೂಟರ್ ಬೇಸ್ಡ್​ ಟೆಸ್ಟ್ ಮಾಡ್​ನಲ್ಲಿದ್ದು ತಲಾ ಮೂರು ಗಂಟೆ ಅವಧಿಯದ್ದಾಗಿರುತ್ತದೆ.

    ಜನರಲ್ ಕೆಟಗರಿಯ ಅಭ್ಯರ್ಥಿಗಳು 1,000 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಜನರಲ್​ ನಲ್ಲಿ ಆರ್ಥಿಕವಾಗಿ ಹಿಂದುಳಿದವರು, ಒಬಿಸಿ, ಎನ್​ಸಿಎಲ್​ ಕೆಟಗರಿಯವರು 500 ರೂಪಾಯಿ ಶುಲ್ಕ ಪಾವತಿಸಿದರೆ ಸಾಕು. ಮೀಸಲು ಕೆಟಗರಿಯವರು 250 ರೂಪಾಯಿ ಶುಲ್ಕ ಪಾವತಿಸಿದರಾಯಿತು. ಶುಲ್ಕದ ಜತೆಗೆ ಜಿಎಸ್​ಟಿ ಪ್ರತ್ಯೇಕವಾಗಿರುತ್ತದೆ.

    ಮಾನ್ಯತೆ ಪಡೆದ ಯೂನಿವರ್ಸಿಟಿ, ಶಿಕ್ಷಣ ಸಂಸ್ಥೆಗಳಲ್ಲಿ ಮಾಸ್ಟರ್ ಡಿಗ್ರಿ ಅಥವಾ ಸ್ನಾತಕೋತ್ತರ ಪದವಿಯನ್ನು ಶೇಕಡ 55 ಅಂಕಗಳೊಂದಿಗೆ (ಮೀಸಲು ಕೆಟಗರಿಯವರಿಗೆ ಶೇಕಡ 50 ಅಂಕ) ಉತ್ತೀರ್ಣರಾದವರು ಈ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿ ಇರುವವರು, ಅಂತಿಮ ವರ್ಷದ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವವರು ಕೂಡ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ.

    ಹೆಚ್ಚಿನ ಮಾಹಿತಿ ಮತ್ತು ಆನ್​ಲೈನ್ ಅರ್ಜಿ ಸಲ್ಲಿಕೆಯ ಲಿಂಕ್ ಇಲ್ಲಿದೆ

    ಪೂರ್ತಿ ಪ್ರಪಂಚವೇ ಮನೆಯೊಳಗೆ ಕುಳಿತಿದ್ದರೂ ಭಾರತದಲ್ಲಿ ಸಾಧ್ಯವಿಲ್ಲ ವರ್ಕ್​ ಫ್ರಮ್​ ಹೋಮ್​ ಸೌಲಭ್ಯ

    ಸಿದ್ಧಿಯಿಂದ ಸಾಧನೆ ಸಾಧ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts