More

    ಇನ್ನು ಏಕಕಾಲದಲ್ಲೇ ಡಬಲ್ ಡಿಗ್ರಿ ಪಡೆಯಲು ಸಾಧ್ಯ; ಶೀಘ್ರದಲ್ಲೇ ಯುಜಿಸಿ ಅಧಿಸೂಚನೆ

    ಬೆಂಗಳೂರು: ಬೆಳಗಿನ ತರಗತಿ ಮೂಲಕ ಒಂದು ಪದವಿ, ಸಂಜೆ ಕಾಲೇಜಿನ ಮೂಲಕ ಮತ್ತೊಂದು ಪದವಿಯನ್ನು ಏಕಕಾಲದಲ್ಲಿ ಪಡೆಯುವುದು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸಾಧ್ಯವಾಗಲಿದೆ.

    ಪದವಿ ಮಾತ್ರವಲ್ಲದೆ, ಡಿಪ್ಲೊಮಾ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆಯಬಹುದು ಎಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಅಧ್ಯಕ್ಷ ಜಗದೀಶ ಕುಮಾರ್ ತಿಳಿಸಿದ್ದಾರೆ. ಯುಜಿಸಿ ಈ ನಿಟ್ಟಿನಲ್ಲಿ ನಿಯಮಾವಳಿಗಳನ್ನು ರೂಪಿಸಿದ್ದು, ಒಂದೆರಡು ದಿನಗಳಲ್ಲಿ ಅಧಿಸೂಚನೆ ಪ್ರಕಟವಾಗಲಿದೆ ಎಂದು ಮಂಗಳವಾರ ನಡೆಸಿದ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಒಂದೇ ವಿವಿಯಿಂದ ಅಥವಾ ಬೇರೆ ಬೇರ ವಿಶ್ವವಿದ್ಯಾಲಯದಿಂದ ಈ ಪದವಿಗಳನ್ನು ಪಡೆದುಕೊಳ್ಳುವ ಅವಕಾಶ ಇರಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಭೌತಿಕ ಸ್ವರೂಪದಲ್ಲಿ ಮಾತ್ರವಲ್ಲದೆ, ಆನ್​ಲೈನ್, ದೂರ ಶಿಕ್ಷಣದ ಅಥವಾ ಇವುಗಳ ಸಂಯೋಜಿತ ವಿಧಾನದಲ್ಲಿ ಎರಡು ಪದವಿಗಳ ವ್ಯಾಸಂಗ ನಡೆಸಬಹುದು ಎಂದು ಹೇಳಿದ್ದಾರೆ.

    ಮುಖ್ಯಾಂಶಗಳು

    • ಒಂದೇ ವಿಶ್ವವಿದ್ಯಾಲಯದಿಂದ ಪಡೆಯಬಹುದು
    • ಬೇರೆ ಬೇರೆ ವಿವಿಗಳಿಗೂ ದಾಖಲಾಗಬಹುದು
    • ಭೌತಿಕ ಸ್ವರೂಪದಲ್ಲಿ ಪಡೆಯುವ ಅವಕಾಶ
    • ದೂರಶಿಕ್ಷಣ, ಆನ್​ಲೈನ್​ಗೂ ನಿರ್ಬಂಧವಿಲ್ಲ
    • ರಾಷ್ಟ್ರೀಯ ಶಿಕ್ಷಣ ಅನ್ವಯ ನಿಯಮಾವಳಿ ರಚನೆ

    ಆಯ್ಕೆಗಳೇನು?

    • ಎರಡೂ ಪದವಿಗಳನ್ನು ಭೌತಿಕ (ಫಿಜಿಕಲ್ ಮೋಡ್) ಅಥವಾ ರೆಗ್ಯುಲರ್ ವಿಧಾನದಲ್ಲಿ ಪಡೆಯಬಹುದು
    • ಒಂದನ್ನು ಭೌತಿಕ ಸ್ವರೂಪ, ಇನ್ನೊಂದನ್ನು ದೂರ ಶಿಕ್ಷಣ ಮೂಲಕ
    • ಭೌತಿಕ ಸ್ವರೂಪ ಹಾಗೂ ಆನ್​ಲೈನ್
    • ದೂರ ಶಿಕ್ಷಣ ಹಾಗೂ ಆನ್​ಲೈನ್
    • ಎರಡನ್ನೂ ದೂರ ಶಿಕ್ಷಣ ಅಥವಾ ಎರಡನ್ನೂ ಆನ್​ಲೈನ್ ಮೂಲಕ ಪಡೆಯಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts