More

  ಲೋಕಸಭೆ ಚುನಾವಣೆ ಪ್ರಕ್ರಿಯೆ ಆರಂಭ

  ಕೋಲಾರ: ಲೋಕಸಭೆ ಚುನಾವಣೆ ಪ್ರಕ್ರಿಯೆಗಳು ಆರಂಭವಾಗಿದ್ದು, ಶಾಂತಿಯುತವಾಗಿ ಚುನಾವಣೆ ನಡೆಸಲು ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಽಕಾರಿಯೂ ಆದ ಜಿಲ್ಲಾಧಿಕಾರಿ ಅಕ್ರಂಪಾಷಾ ಹೇಳಿದರು.

  ನಗರ ಹೊರವಲಯದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುರುವಾರದಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಶುರುವಾಗಿದ್ದು, ರಾಜಕೀಯ ಪಕ್ಷಗಳ ಮುಖಂಡರು ಚುನಾವಣೆ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ತಿಳಿಸಿದರು.
  ಮತದಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲಾಗಿದ್ದು, ಇನ್ನು ಯಾರಾದರು ಮತ ನೋಂದಣಿ ಮಾಡಿಸಿಕೊಳ್ಳದೆ ಇರುವವರು ನಾಮಪತ್ರ ಸಲ್ಲಿಸುವ ಕೊನೇ ದಿನಾಂಕದ ತನಕ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
  ಚುನಾವಣೆ ಸಂಬಂಧ ಈಗಾಗಲೇ ಕ್ಷೇತ್ರದ ಗಡಿಭಾಗದಲ್ಲಿ ಚೆಕ್‌ಪೋಸ್ಟ್ಗಳನ್ನು ತೆರೆಯಲಾಗಿದ್ದು, ವಾಹನಗಳನ್ನು ಶೋಧನೆ ನಡೆಸಲಾಗುತ್ತಿದೆ. ದಾಖಲೆಗಳು ಇಲ್ಲದೆ ಹಣ ಹೊಂದಿದ್ದರೆ, ಸಾಮಗ್ರಿಗಳನ್ನು ಸಾಗಿಸುತ್ತಿದ್ದರೆ ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

  ಅಭ್ಯರ್ಥಿಗಳು ನಮೂನೆ 2ಎ ರಲ್ಲಿ ನಾಮಪತ್ರ ಸಲ್ಲಿಸಬೇಕು, ಅಭ್ಯರ್ಥಿ ವಯಸ್ಸು 25 ವರ್ಷ ಮೇಲ್ಪಟ್ಟಿರಬೇಕು. ಏ. 4 ಕೊನೇ ದಿನಾಂಕವಾಗಿದ್ದು, ಮಧ್ಯಾಹ್ನ 4 ಗಂಟೆಗೊಳಗೆ ಸಲ್ಲಿಸಬಹುದು. ಮಾನ್ಯತೆ ಪಡೆದಿರುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರದ ಒಬ್ಬ ಮತದಾರನ ಸೂಚಕರಾಗಿರಬೇಕು. ಬೇರೊಂದು ಕ್ಷೇತ್ರದಿಂದ ಬಂದವರಾಗಿದ್ದರೆ ಆ ಕ್ಷೇತ್ರದ ಮತದಾರರ ಪಟ್ಟಿಯ ಪ್ರಮಾಣೀಕೃತ ಪ್ರತಿ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.

  ಒಬ್ಬ ಉಮೇದುದಾರ ಕನಿಷ್ಠ 4 ನಾಮಪತ್ರಗಳನ್ನು ಸಲ್ಲಿಸಬಹುದು, ರಿಟರ್ನಿಂಗ್ ಅಧಿಕಾರಿಯ ಕಚೇರಿಯೊಳಗೆ 5 ಮಂದಿಗೆ ಮಾತ್ರ ಪ್ರವೇಶ, ಪ್ರಮಾಣದ ಎಲ್ಲ ಕಾಲಂಗಳನ್ನು ಭರ್ತಿ ಮಾಡಬೇಕು. ಎಲ್ಲ ಪುಟಗಳಿಗೂ ಉಮೇದುದಾರನ ಸಹಿ ಹಾಗೂ ನೋಟರಿ ಇರಬೇಕು. ಘೋಷಿಸಿಕೊಂಡಿರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ನಮೂನೆ-ಸಿಯಲ್ಲಿ ಮೂರು ದಿನಗಳ ಕಾಲ ಮುದ್ರಿಸಬೇಕು. ಜತೆಗೆ ದೂರದರ್ಶನದಲ್ಲೂ ಬಿತ್ತರಿಸಬೇಕು. ಒಂದು ವೇಳೆ ಸರ್ಕಾರಿ ವಸತಿಗೆ ಸಂಬಂಸಿದಂತೆ ಬಾಡಿಗೆ, ವಿದ್ಯುತ್ ಶಕ್ತಿ ಶುಲ್ಕ, ನೀರಿನ ಶುಲ್ಕ, ದೂರವಾಣಿ ಶುಲ್ಕ ಸೇರಿದಂತೆ ಸರ್ಕಾರಕ್ಕೆ ಬಾಕಿಇದ್ದಲ್ಲಿ ಕೂಡಲೇ ಅದನ್ನು ಹಿಂದುರಿಗಿಸಬೇಕು. ಬಾಕಿ ಪ್ರಮಾಣಪತ್ರವನ್ನು ಪ್ರಾಽಕಾರದಿಂದ ಪ್ರಮಾಣೀಕರಿಸಬೇಕು ಎಂದು ಹೇಳಿದರು.

  ಸುವಿಧ ಪೋರ್ಟಲ್‌ನಲ್ಲೂ ಅವಕಾಶ
  ಉಮೇದುದಾರ ಸುವಿಧ ಪೋರ್ಟಲ್ (http://suvidha.eci.gov.in) ಮೂಲಕವು ನಾಮತ್ರ ಸಲ್ಲಿಸಲು ಅವಕಾಶವಿದೆ. ಅಫಿಡೇವಿಟ್, ಠೇವಣಿ ಪಾವತಿಸಬಹುದು. ನಾಮಪತ್ರವನ್ನು ಆನ್‌ಲೈನ್ ಮೂಲಕ ಸಲ್ಲಿಸಿದ್ದಲ್ಲಿ ಕ್ಯೂಆರ್ ಕೋಡ್‌ನೊಂದಿಗೆ ಮುದ್ರಿತ ಪ್ರತಿ ಪಡೆದುಕೊಂಡು ಸಹಿ ಮಾಡಿ ಎಲ್ಲ ದಾಖಲೆಗಳೊಂದಿಗೆ ಚುನಾವಣಾಽಕಾರಿಗಳಿಗೆ ನಿಗದಿತ ಅವಽಯೊಳಗೆ ಸಲ್ಲಿಸಬೇಕು. ಚುನಾವಣಾಽಕಾರಿಗೆ ನೇರವಾಗಿ ನಾಮಪತ್ರ ಸಲ್ಲಿಸಿದ್ದರೆ ಆನ್‌ಲೈನ್ ಮೂಲಕ ಸಲ್ಲಿಸಲು ಅವಕಾಶವಿರುವುದಿಲ್ಲ. ಸುವಿಧ ತಂತ್ರಾAಶದಲ್ಲಿ ಸಲ್ಲಿಸಿದ ನಾಮಪತ್ರದ ದಾಖಲೆಗಳನ್ನು ಏ.೩ರೊಳಗೆ ಚುನಾವಣೆ ಕಚೇರಿಗೆ ತಲುಪಿಸಬೇಕು ಎಂದು ಜಿಲ್ಲಾಽಕಾರಿ ಅಕ್ರಂಪಾಷಾ ಹೇಳಿದರು.

  144 ಸೆಕ್ಷನ್ ಜಾರಿ
  ಮಾ.28ರಿಂದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜಿಲ್ಲಾಽಕಾರಿಗಳ ಕಾರ್ಯಾಲಯದ ಆವರಣದಲ್ಲಿ ಕಾನೂನು ಮತ್ತು ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೆಕ್ಷನ್ 144ರ ನಿಷೇಧಾಜ್ಞೆ ಜಾರಿ ಆದೇಶಿಸಲಾಗಿದೆ ಎಂದು ಜಿಲ್ಲಾಽಕಾರಿ ಅಕ್ರಂಪಾಷಾ ಹೇಳಿದರು. ಜಿಲ್ಲಾಽಕಾರಿಗಳ ಕಚೇರಿ ಆವರಣದ 10೦ ಮೀ. ವ್ಯಾಪ್ತಿಯಲ್ಲಿ ಷರತ್ತುಗಳನ್ನು ವಿಽಸಿ ನಿಷೇಧಾಜ್ಞೆ ಹೊರಡಿಸಲಾಗಿದೆ. ರಾಜಕೀಯ ಅಭ್ಯರ್ಥಿಗಳು ಮೆರವಣಿಗೆ ಅಥವಾ ೫ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದರು. ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡು, ಕೂಗಾಡುವುದು, ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ, ನೈತಿಕತೆ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗಿರುವುದನ್ನು ನಿರ್ಬಂಽಸಲಾಗಿದೆ ಎಂದು ಮಾಹಿತಿ ನೀಡಿದರು.

  100 ಸಾವಿರ ಸಿಬ್ಬಂದಿ ನಿಯೋಜನೆ
  ಚುನಾವಣೆ ಪ್ರಕ್ರಿಯೆ ನಡೆಸಲು 10 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ. ಎಪಿಆರ್‌ಒ, ಪಿಆರ್‌ಒ ಹೀಗೆ ವಿವಿಧ ರೀತಿಯ ಸಿಬ್ಬಂದಿ ನಿಯೋಜಿಸಿ, ಒಂದು ಹಂತದ ತರಬೇತಿ ನೀಡಲು ಕ್ರಮವಹಿಸಲಾಗಿದೆ. ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ, ಅಽಕಾರಿಗಳು ಗೈರಾದರೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಒಂದು ಕರ್ತವ್ಯಲೋಪ ಎಸಗಿದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ ಎಂದು ಅಕ್ರಂಪಾಷಾ ಎಚ್ಚರಿಸಿದರು.

  ಸೂಕ್ತ ಬಂದೋಬಸ್ತ್ ವ್ಯವಸ್ಥೆಗೆ ಕ್ರಮ
  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಮಾತನಾಡಿ, ಚುನಾವಣೆ ಸಂಬಂದ ಅಗತ್ಯ ಬಂದೋಬಸ್ತ್ಗೆ ಕ್ರಮವಹಿಸಲಾಗಿದೆ. ಜಿಲ್ಲಾಽಕಾರಿ ಸುತ್ತು ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಚುನಾವಣೆ ಸಂಬಂಧ ರೌಡಿಶೀಟರ್‌ಗಳನ್ನು ಕರೆಯಿಸಿ ಪರೇಡ್ ನಡೆಸಲಾಗಿದೆ. ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಸಲಾಗಿದೆ. ಅಭ್ಯರ್ಥಿಗಳು ಮೆರವಣಿಗೆ, ಸಭೆ ನಡೆಸಲು ಏಕಗವಾಕ್ಷಿಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ನಿಯಮ ಉಲ್ಲಂಘಿಸಿದ್ದಲ್ಲಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಹೇಳಿದರು. ಭದ್ರತಾ ದೃಷ್ಟಿಯಿಂದ ಈಗಾಗಲೇ ೨೫ ಕಡೆ ರೂಟ್‌ಮಾರ್ಚ್ಗಳನ್ನು ನಡೆಸಲಾಗಿದೆ. ಇನ್ನು ಹೆಚ್ಚುವರಿ ಸಿಬ್ಬಂದಿ ಆಗಮಿಸಲಿದ್ದಾರೆ ಎಂದರು.

  ಚುನಾವಣೆ ವೇಳಾಪಟ್ಟಿ
  ಮಾ.೨೮: ನಾಮಪತ್ರ ಸಲ್ಲಿಕೆ ಪ್ರಾರಂಭ.
  ಏ.೫: ನಾಮಪತ್ರಗಳ ಪರಿಶೀಲನೆ.
  ಏ.೨೬: ಮತದಾನ.
  ಜೂ.೪: ಮತಗಳ ಏಣಿಕೆ.
  ಜೂ.೬: ಚುನಾವಣಾ ಪ್ರಕ್ರಿಯೆ ಮುಕ್ತಾಯ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts