More

    ವಿಧಾನ ಪರಿಷತ್ತು ಸಚಿವಾಲಯ ಹುದ್ದೆ ಭರ್ತಿಗೆ ಅಧಿಸೂಚನೆ

    ಬೆಂಗಳೂರು ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದಲ್ಲಿನ ವಿವಿಧ ವೃಂದಗಳ 28 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ವಿಧಾನ ಪರಿಷತ್ತು ಅಧಿಸೂಚನೆ ಪ್ರಕಟಿಸಿದೆ.

    ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ. ಮಾ.24ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಏ.23 ಕೊನೆಯ ದಿನವಾಗಿದೆ. ಶುಲ್ಕ ಪಾವತಿಸಲು ಏ.25 ಕೊನೆಯ ದಿನವಾಗಿದೆ.

    ಹುದ್ದೆಗಳು:
    ಸೀನಿಯರ್ ಪ್ರೋಗ್ರಾಮರ್ 2 ಹುದ್ದೆ, ಜೂನಿಯರ್ ಪ್ರೋಗ್ರಾಮರ್- 2 ಹುದ್ದೆ, ಜೂನಿಯರ್ ಕನ್ಸೋಲ್ ಆಪರೇಟರ್- 4 ಹುದ್ದೆ, ಕಂಪ್ಯೂಟರ್ ಆಪರೇಟರ್-4 ಹುದ್ದೆ, ಸಹಾಯಕ- 3 ಹುದ್ದೆ, ಕಿರಿಯ ಸಹಾಯಕ- 8 ಹುದ್ದೆ, ದತ್ತಾಂಶ ನಮೂದು ಸಹಾಯಕ/ಬೆರಳಚ್ಚುಗಾರರು- 5 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

    ಸೀನಿಯರ್ ಪ್ರೋಗ್ರಾಮರ್, ಜೂನಿಯರ್ ಪ್ರೋಗ್ರಾಮರ್, ಜೂನಿಯರ್ ಕನ್ಸೋಲ್ ಆಪರೇಟರ್ ಮತ್ತು ಕಂಪ್ಯೂಟರ್ ಆಪರೇಟರ್ ಹುದ್ದೆಗಲಿಗೆ ಕಂಪ್ಯೂಟರ್‌ಸೈನ್ಸ್, ಮಾಹಿತಿ ವಿಜ್ಞಾನ, ಎಲೆಕ್ಟ್ರಾನಿಕ್ಸ್ ಆೃಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ಪದವೀಧರರು ಅರ್ಜಿ ಸಲ್ಲಿಸಬಹುದು. ಉಳಿದ ಹುದ್ದೆಗಳಿಗೆ ಸಾಮಾನ್ಯ ಪದವಿ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.

    ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು http://kea.kar.nic.in
    ಮತ್ತು https://cetonline.karnataka.gov.in
    ಭೇಟಿ ನೀಡಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts