More

    ತಾಯಿಯ ಹೆಸರಲ್ಲಿ ಒಂದೊಳ್ಳೆಯ ಕೆಲಸ ಮಾಡುವುದಕ್ಕೆ ಹೊರಟಿದ್ದಾರೆ ಸೋನು …

    ಮುಂಬೈ: ಲಾಕ್​ಡೌನ್​ ಪ್ರಾರಂಭವಾದಾಗಿನಿಂದ ಸಂಕಷ್ಟದಲ್ಲಿರುವ ಸಾವಿರಾರು ಜನರ ನೆರವಿಗೆ ಸೋನು ಸೂದ್​ ಬಂದಿದ್ದಾರೆ. ಆರಂಭದಲ್ಲಿ ವಲಸೆ ಕಾರ್ಮಿಕರ ನೆರವಿಗೆ ಬಂದ ಸೋನು, ಅವರೆಲ್ಲರನ್ನೂ ತಮ್ಮ ಸ್ವಂತ ಊರುಗಳಿಗೆ ಕಳಿಸಿಕೊಟ್ಟರು.

    ಈಗ ಸೋನು ಹೊಸದಾಗಿ ಅವರು ಏನು ಮಾಡಿದ್ದಾರೆ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಏಕೆಂದರೆ, ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳಿಸಿಕೊಟ್ಟ ನಂತರ, ಸೋನು ಸುಮ್ಮನೆ ಕೈಕಟ್ಟಿ ಕುಳಿತಿಲ್ಲ. ತೀರಾ ಇತ್ತೀಚೆಗೆ, ಅಥ್ಲೀಟ್​ ಒಬ್ಬರಿಗೆ ಶೂಸ್​ ಕೊಡಿಸುವುದರ ಜತೆಗೆ ಐಎಎಸ್​ ಆಕಾಂಕ್ಷಿಯೊಬ್ಬರಿಗೆ ಪುಸ್ತಕಗಳನ್ನು ಕೊಡಿಸುವುದಾಗಿ ಅವರು ಪ್ರಾಮಿಸ್​ ಮಾಡಿದ್ದಾರೆ.

    ಇದನ್ನೂ ಓದಿ: ಕಂಗನಾ ಬಿಲ್ಡಿಂಗ್​ ರಿಪೇರಿ ಮಾಡಿಸೋಕೆ ಅಂಬಾನಿಗಳು 200 ಕೋಟಿ ಕೊಡ್ತಾರಾ?

    ಈಗ ಅವರು, ಇನ್ನೊಂದು ರೀತಿಯಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದಕ್ಕೆ ಮುಂದಾಗಿದ್ದಾರೆ. ಅದೇನೆಂದರೆ, ದೇಶದಲ್ಲಿ ಇದೀಗ ಆನ್​ಲೈನ್​ ಕ್ಲಾಸ್​ಗಳು ಶುರುವಾಗಿದ್ದು, ಆನ್​ಲೈನ್​ ಮೂಲಕ ಶಿಕ್ಷಣ ಪಡೆಯುತ್ತಿರುವ ಹಲವು ವಿದ್ಯಾರ್ಥಿಗಳಿಗೆ ಸ್ಕಾಲರ್​ಶಿಪ್​ ಕೊಡುವುದಕ್ಕೆ ಸೋನು ನಿರ್ಧರಿಸಿದ್ದಾರೆ.

    ತಮ್ಮ ತಾಯಿ ಪ್ರೊಫೆಸರ್​ ಸರೋಜ್​ ಸೂದ್​ ಹೆಸರಿನಲ್ಲಿ ಸ್ಕಾಲರ್​ಶಿಪ್​ ಕೊಡುವುದಕ್ಕೆ ತೀರ್ಮಾನಿಸಿರುವ ಸೋನು, ಯಾಕೆ ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ವಿಷ್ಣುವರ್ಧನ್​ ಅವರ ನೆನಪಲ್ಲಿ 500 ಗಿಡ ನೆಟ್ಟ ವಿಷ್ಣು ಸೇನಾ

    ಈ ಕುರಿತು ಮಾತನಾಡಿರುವ ಅವರು, ‘ಸಂಕಷ್ಟದಲ್ಲಿರುವ ಹಲವರು ಶಿಕ್ಷಣ ಮುಂದುವರೆಸುವುದಕ್ಕೆ ಕಷ್ಟಪಡುತ್ತಿದ್ದಾರೆ. ಕೆಲವರ ಹತ್ತಿರ ಆಂಡ್ರಾಯ್ಡ್​ ಫೋನ್​ಗಳಿಲ್ಲ. ಇನ್ನೂ ಕೆಲವರ ಬಳಿ ಶಿಕ್ಷಣಕ್ಕೆ ದುಡ್ಡಿಲ್ಲ. ಹಾಗಾಗಿ ದೇಶಾದ್ಯಂತ ಇರುವ ಹಲವು ವಿಶ್ವವಿದ್ಯಾಲಯಗಳ ಜತೆಗೆ ಟೈಅಪ್​ ಮಾಡಿಕೊಂಡಿದ್ದು, ನಮ್ಮ ತಾಯಿಯ ಹೆಸರಿನಲ್ಲಿ ಸ್ಕಾಲರ್​ಶಿಪ್​ ಕೊಡುವುದಕ್ಕೆ ತೀರ್ಮಾನಿಸಿದ್ದೇನೆ. ಅಗತ್ಯವಿರುವವರು ಈ ಸ್ಕಾಲರ್​ಶಿಪ್​ ಬಳಸಿಕೊಳ್ಳಬಹುದು’ ಎಂದು ಸೋನು ಹೇಳಿದ್ದಾರೆ.

    ಇನ್ನು ಸೋನು ಅವರ ತಾಯಿ ಸರೋಜ್​ ಅವರು ಪಂಜಾಬ್​ನ ಮೋಗದಲ್ಲಿ ಉಚಿತವಾಗಿ ಶಿಕ್ಷಣ ನೀಡುತ್ತಿದ್ದರಂತೆ. ತಮ್ಮ ಕೆಲಸವನ್ನು ಮುಂದಕ್ಕೆ ತೆಗೆದುಕೊಂಡು ಹೋಗು ಎಂದು ಅವರು ಈ ಹಿಂದೆ ಸೋನುಗೆ ಹೇಳಿದ್ದು, ಅದಕ್ಕೀಗ ಸರಿಯಾದ ಸಮಯ ಎಂದು ಭಾವಿಸಿರುವ ಅವರು ಸ್ಕಾಲರ್​ಶಿಪ್​ ನೀಡುವುದಕ್ಕೆ ತೀರ್ಮಾನಿಸಿದ್ದಾರೆ.

    ‘ರೈಡರ್​​’ ಮೋಷನ್​ ಪೋಸ್ಟರ್​ಗೆ ಒಂದು ಮಿಲಿಯನ್​ ಹಿಟ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts