More

    ಪೀಣ್ಯ ಕೈಗಾರಿಕಾ ಸಮಸ್ಯೆಗೆ ಪರಿಹಾರ: ಪೀಣ್ಯ ಕೈಗಾರಿಕಾ ಸಂಘದ ಜತೆ ಆರ್. ಮಂಜುನಾಥ್ ಸಂವಾದ

    ಬೆಂಗಳೂರು: ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದ ವೇಳೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಹಲವು ವರ್ಷಗಳಿಂದ ಕಾಡುತ್ತಿದ್ದ ನೂರಾರು ಸಮಸ್ಯೆ ಪರಿಹರಿಸಿದ್ದೇನೆ. ಈ ಬಾರಿ ಮತ್ತೆ ಶಾಸಕನಾದರೆ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸುವುದೇ ನನ್ನ ಮೊದಲ ಕೆಲಸ ಎಂದು ಜೆಡಿಎಸ್ ಅಭ್ಯರ್ಥಿ ಆರ್. ಮಂಜುನಾಥ್ ಭರವಸೆ ನೀಡಿದ್ದಾರೆ.

    ಪೀಣ್ಯ ಕೈಗಾರಿಕಾ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾನು ಶಾಸಕನಾಗಿ ಆಯ್ಕೆಯಾದಾಗ ಕೈಗಾರಿಕಾ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಕೂಡಲೇ ಸಮಸ್ಯೆ ಬಗೆಹರಿಸಿದ್ದೇನೆ. ಇನ್ನೂ ಹಲವಾರು ಸಮಸ್ಯೆ ಬಗೆಹರಿಸುವುದರೊಳಗೆ ಕೋವಿಡ್ ಮಹಾಮಾರಿ ಆಕ್ರಮಿಕೊಂಡಿತು. ಅವುಗಳನ್ನು ಕೆಲವೇ ದಿನಗಳಲ್ಲಿ ಪರಿಹರಿಸುತ್ತೇನೆ ಎಂದು ತಿಳಿಸಿದರು.

    ಇದನ್ನೂ ಓದಿ: ಪ್ರಗತಿಯಲ್ಲಿ ಕ್ರೀಡಾಂಗಣಗಳ ಕಾಮಗಾರಿ: ಮಹದೇವಪುರ ಅಭಿವೃದ್ಧಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಮಂಜುಳಾ ಲಿಂಬಾವಳಿ

    ಕ್ಷೇತ್ರದ ಅಭಿವೃದ್ಧಿ ಬಗ್ಗೆ ನನಗಿರುವ ಕನಸು ನನಸು ಮಾಡಲು ಸಮಯದ ಕೊರತೆ ಉಂಟಾಯಿತು. ಮತ್ತೆ 5 ವರ್ಷದ ಸಮಯ ಬೇಕಿದ್ದು, ಮತ್ತೊಮ್ಮೆ ಆಯ್ಕೆ ಮಾಡಬೇಕೆಂದು ಕೋರಿದರು. ಚುನಾವಣೆ ಮುಗಿದ ಕೂಡಲೇ ಸರ್ಕಾರದ ಜತೆ ಚರ್ಚೆ ನಡೆಸಿ ತ್ಯಾಜ್ಯ ವಿಲೇವಾರಿ ಮಾಡಿಸಲಾಗುವುದು ಎಂದು ತಿಳಿಸಿದರು.

    ಪೀಣ್ಯ ಕೈಗಾರಿಕಾ ಟೌನ್​ಶಿಪ್ ಪೀಠ ರಚನೆ ಮಾಡಿ ಕೊಡುವಂತೆ ಅಧ್ಯಕ್ಷರು ಮನವಿ ಮಾಡಿದ್ದು, ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಕ್ರಮ ಕೈಗೊಳ್ಳುವೆ ಎಂದರು. ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಮಂಜುನಾಥ್ ಇತರರಿದ್ದರು.

    ಜೆಡಿಎಸ್​ ಸರ್ಕಾರ ಬಂದರೆ ಮಂಜುನಾಥ್​ ಮಂತ್ರಿ

    ದಾಸರಹಳ್ಳಿಯಲ್ಲಿ ಮಂಜುನಾಥ್ ಅಭಿವೃದ್ಧಿ ಪರ್ವ

    ಮಗನ ಮಾತುಗಳನ್ನು ಕೇಳಿ ಸಿಳ್ಳೆ ಹಾಕಿ ಸಂಭ್ರಮಿಸಿದ ಸಚಿವ ಆನಂದ್​ ಸಿಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts