More

    ಜೆಡಿಎಸ್​ ಸರ್ಕಾರ ಬಂದರೆ ಮಂಜುನಾಥ್​ ಮಂತ್ರಿ

    ಮಾಜಿ ಸಿಎಂ ಕುಮಾರಸ್ವಾಮಿ ಘೋಷಣೆ | ಅನ್ಯ ಪಕ್ಷಗಳ ಮುಖಂಡರು ದಳ ಸೇರ್ಪಡೆ

    ಬೆಂಗಳೂರು: ಕಳೆದ 5 ವರ್ಷಗಳಿಂದ ದಾಸರಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಕ್ಷೇತ್ರ ಮತ್ತು ಜನಪರ ಕಾಳಜಿ ಹೊಂದಿರುವ ಜೆಡಿಎಸ್ ಅಭ್ಯರ್ಥಿ ಆರ್. ಮಂಜುನಾಥ್, ಮತ್ತೊಮ್ಮೆ ಶಾಸಕರಾಗಿ ಆರಿಸಿ ಬಂದು ಸರ್ಕಾರದಲ್ಲಿ ಸಚಿವರಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

    ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬ್ಯಾಟರಿ ರಾಜಣ್ಣ, ಜೆಸಿಬಿ ರಾಜಣ್ಣ ಸೇರಿ ಬಿಜೆಪಿಯ ಹಲವಾರು ಮುಖಂಡರ ಜೆಡಿಎಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ದಾಸರಹಳ್ಳಿಯಿಂದ 2018ರಲ್ಲಿ ಮಂಜುನಾಥ್ ಜೆಡಿಎಸ್‌ನ ಏಕೈಕ ಶಾಸಕರಾಗಿ ಆಯ್ಕೆಯಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಪ್ರಸ್ತುತ ಬೆಳವಣಿಗೆಯ ಪ್ರಕಾರ ರಾಜ್ಯದಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿಖಚಿತವಾಗಿದ್ದು, ಮಂಜುನಾಥ್ ಮಂತ್ರಿಯಾಗಲಿದ್ದಾರೆ. ದಾಸರಹಳ್ಳಿಯನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುತ್ತಾರೆ ಎಂದರು.

    ಮಂಜುನಾಥ್‌ ಆಶಯದಂತೆ ರಸ್ತೆ, ಒಳಚರಂಡಿ, ಕೆರೆಗಳ ನಿರ್ಮಾಣ ಸೇರಿ ದಾಸರಹಳ್ಳಿ ಸರ್ವಾಂಗೀಣ ಬೆಳವಣಿಗೆಗೆ ನಾನು ಸಿಎಂ ಆಗಿದ್ದಾಗ 700 ಕೋಟಿ ರೂ. ಅನುದಾನ ನೀಡಿದ್ದೆ. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಆ ಹಣವನ್ನು ಬೇರೆ ಕ್ಷೇತ್ರಗಳಿಗೆ ವರ್ಗಾವಣೆ ಮಾಡಿ ಇಲ್ಲಿ ನಿವಾಸಿಗಳಿಗೆ ಅನ್ಯಾಯ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಆನೆಬಲ ಬಂದಿದೆ: ಮಂಜುನಾಥ ಅವರ ಸತತ ಪ್ರಯತ್ನದ ಫಲವಾಗಿ ನ್ಯಾಯಾಲಯದಿಂದ ನೂರಾರು ಕೋಟಿ ರೂ. ಅನುದಾನವನ್ನು ಬಿಡುಗಡೆ ಗೊಳಿಸಿ ಶಕ್ತಿ ಮೀರಿ ಶ್ರಮಿಸಿ ಕ್ಷೇತ್ರದ ಅಭಿವೃದ್ಧಿ ಪಡಿಸುವಲ್ಲಿ ಸಫಲರಾಗಿದ್ದಾರೆ. ಕೋವಿಡ್ ಸಂದರ್ಭ ದಲ್ಲಿ ಜನರ ಜೀವ ರಕ್ಷಣಿಗೆ ಹಗಲಿರುಳು ಶ್ರಮಿಸಿ ನಿಸ್ವಾರ್ಥ ಸೇವೆ ಸಲ್ಲಿಸಿರುವ ಪರಿಣಾಮ ಇಂದು ವಿಪಕ್ಷಗಳ ಅಸಂಖ್ಯ ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ. ಇದು ಮಂಜುನಾಥ್‌ಗೆ ಆನೆಬಲವಾಗಿ ಪರಿಣಮಿಸಿದೆ ಎಂದರು.
    ಜೆಡಿಎಸ್‌ ಮುಖಂಡರಾದ ಬಾಲಾಜಿ ವೆಂಕಟೇಶ್, ಲೋಕೇಶ್, ಜೆಸಿಬಿ, ರಾಜಣ್ಣ ಮುತ್ತುರಾಜ್, ಯೋಗೇಶ್‌ ಮತ್ತಿತರರು ಉಪಸ್ಥಿತರಿದ್ದರು.

    ಜೆಡಿಎಸ್ ವರಿಷ್ಠ ದೇವೇಗೌಡರು ದೇಶದ ಪ್ರಧಾನಿಯಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನತೆ ಮೆಟ್ಟಿದ್ದಾರೆ. ಜನಕಲ್ಯಾಣಕ್ಕೆ ಪೂರಕವಾಗಿರುವ ಜೆಡಿಎಸ್‌ನ ಪಂಚರತ್ನ ಯೋಜನೆಗಳ ಮಹತ್ವವನ್ನು ಜನತೆ ಈಗಾಗಲೇ ಅರಿತಿದ್ದಾರೆ. ಹಾಗಾಗಿ ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲು ಜನಾಭಿಪ್ರಾಯ ಬಲಗೊಂಡಿದೆ. ಈ ನಿಟ್ಟಿನಲ್ಲಿ ದಾಸರಹಳ್ಳಿಯಿಂದ ನನ್ನನ್ನು ಶಾಸಕನಾಗಿ ಆರಿಸಲು ವಿಪಕ್ಷಗಳ ಮುಖಂಡರು ಸ್ವಇಚ್ಛೆಯಿಂದ ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ.
    | ಆರ್. ಮಂಜುನಾಥ್ ದಾಸರಹಳ್ಳಿ ಜೆಡಿಎಸ್ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts