More

    ಮರದ ದಿಮ್ಮಿಗಳಿಂದ ಯೋಧನ ಮೇಲೆ ಡಿಎಂಕೆ ಕೌನ್ಸಿಲರ್, ಬೆಂಬಲಿಗರಿಂದ​ ದಾಳಿ: ಚಿಕಿತ್ಸೆ ಫಲಿಸದೆ ಸಾವು

    ಚೆನ್ನೈ: ತಮಿಳುನಾಡು ಮೂಲದ 29 ವರ್ಷದ ಯೋಧರೊಬ್ಬರು ಮೃತಪಟ್ಟಿರುವ ಘಟನೆ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ. ಆಡಳಿತಾರೂಢ ಡಿಎಂಕೆ ಪಕ್ಷದ ಕೌನ್ಸಿಲರ್​ ಒಬ್ಬರು ನಡೆಸಿದ ದಾಳಿಗೆ ಸೈನಿಕ ಸಾವಿಗೀಡಾಗಿರುವ ಎಂಬ ಆರೋಪ ಕೇಳಿಬಂದಿದೆ.

    ಮೃತ ಯೋಧನನ್ನು ಪ್ರಭು ಎಂದು ಗುರುತಿಸಲಾಗಿದೆ. ಇವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರು.

    ಸಾರ್ವಜನಿಕ ನೀರಿನ ಟ್ಯಾಂಕ್​ನಲ್ಲಿ ಬಟ್ಟೆ ಒಗೆಯುವ ವಿಚಾರಕ್ಕೆ ಕೌನ್ಸಿಲರ್​ ಚಿನ್ನಸ್ವಾಮಿ ಮತ್ತು ಯೋಧ ಪ್ರಭು ನಡುವೆ ವಾಗ್ವಾದ ಆರಂಭವಾಯಿತು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಈ ವೇಳೆ ಕೌನ್ಸಿಲರ್​ ಕಡೆಯವರು ಆಗಮಿಸಿ ಯೋಧ ಪ್ರಭು ಮತ್ತು ಆತನ ಸಹೋದರನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

    ಈ ಘಟನೆ ಫೆ.8ರಂದು ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಪ್ರಭುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ (ಫೆ.15) ರಾತ್ರಿ ಪ್ರಭು ಕೊನೆಯುಸಿರೆಳೆದಿದ್ದಾರೆ. ಅಂದಹಾಗೆ ಆರೋಪಿ ಚಿನ್ನಸ್ವಾಮಿ ಮತ್ತು ಯೋಧ ಪ್ರಭು ಇಬ್ಬರು ಸಂಬಂಧಿಕರು. ಈ ಘಟನೆಯ ಬಗ್ಗೆ ಆಡಳಿತಾರೂಢ ಡಿಎಂಕೆ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಫೆ.9ರಂದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಬಂಧಿಸಲಾಗಿದೆ. ಕೌನ್ಸಿಲರ್​ ಸೇರಿದಂತೆ ಉಳಿದ ಆರೋಪಿಗಳನ್ನು ನಿನ್ನೆ ಬಂಧಿಲಾಗಿದೆ. ಯೋಧನ ಮೇಲೆ ದಾಳಿ ಮಾಡಲು ಕೌನ್ಸಿಲರ್​ ಬೆಂಬಲಿಗರು ಮರದ ದಿಮ್ಮಿಗಳನ್ನು ಬಳಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಪ್ರಭು ಸಹೋದರನಿಗೂ ಗಾಯಗಳಾಗಿವೆ.

    ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮಾತನಾಡಿ, ಸೇನಾ ಸಿಬ್ಬಂದಿಗೆ ಅವರ ಸ್ವಂತ ಊರಿನಲ್ಲಿ ಸುರಕ್ಷತೆ ಇಲ್ಲ, ಗೃಹ ಖಾತೆ ಹೊಂದಿರುವ ಮುಖ್ಯಮಂತ್ರಿಯನ್ನು ಜನರು ಗಮನಿಸುತ್ತಿದ್ದಾರೆ ಟೀಕಿಸಿದ್ದಾರೆ. (ಏಜೆನ್ಸೀಸ್​)

    ಹನಿಮೂನ್​ ರಾತ್ರಿ ಪಕ್ಕದ ಮನೆಯಲ್ಲಿ ಬಚ್ಚಿಟ್ಟುಕೊಂಡ ವರ! ಕಾರಣ ಕೇಳಿ ದಂಗಾದ ಪಾಲಕರು

    ಅಯ್ಯೋ ದುರ್ವಿಧಿಯೇ! ಮದುವೆಯಾದ ಮೂರೇ ದಿನದಲ್ಲಿ ದುರಂತ ಅಂತ್ಯ ಕಂಡ ನವದಂಪತಿ

    ನಿರೀಕ್ಷೆ-ಪರೀಕ್ಷೆ: ರಾಜ್ಯ ಬಜೆಟ್ ಅವಲೋಕನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts