ಅಯ್ಯೋ ದುರ್ವಿಧಿಯೇ! ಮದುವೆಯಾದ ಮೂರೇ ದಿನದಲ್ಲಿ ದುರಂತ ಅಂತ್ಯ ಕಂಡ ನವದಂಪತಿ

ಭುವನೇಶ್ವರ್​: ಮದುವೆಯಾದ ಮೂರೇ ದಿನದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ನವದಂಪತಿ ದುರಂತ ಸಾವಿಗೀಡಾಗಿರುವ ಘಟನೆ ಒಡಿಶಾದ ಬೆರ್ಹಾಂಪುರ್​ನಲ್ಲಿ ನಡೆದಿದೆ. ಮೃತರನ್ನು ಬೆರ್ಹಾಂಪುರ್​ ಮೂಲದ ಸಿ.ಎಚ್​. ಪ್ರನೇತಾ ಮತ್ತು ಆಂಧ್ರ ಪ್ರದೇಶದ ಇಚ್ಚಫುರ್​​ ಮೂಲದ ಜಿ ಬೆನು ಎಂದು ಗುರುತಿಸಲಾಗಿದೆ. ಅಪಘಾತದಿಂದ ಗಾಯಗೊಂಡಿದ್ದ ಇಬ್ಬರು ಬೆರ್ಹಾಂಪುರ್​ನಲ್ಲಿರುವ ಎಂಕೆಚಿಜಿ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಫೆ. 10ರಂದು ಪ್ರನೇತಾ ಮತ್ತು ಬೆನು ಮದುವೆಯಾಗಿದ್ದರು. ಇದಾದ ಮೂರು ದಿನಗಳ ಬಳಿಕ ಇಬ್ಬರು ಬೈಕ್​ನಲ್ಲಿ ಬೆರ್ಹಾಂಪುರ್​ಗೆ ಬೈಕ್​ನಲ್ಲಿ ಬರುತ್ತಿದ್ದರು. … Continue reading ಅಯ್ಯೋ ದುರ್ವಿಧಿಯೇ! ಮದುವೆಯಾದ ಮೂರೇ ದಿನದಲ್ಲಿ ದುರಂತ ಅಂತ್ಯ ಕಂಡ ನವದಂಪತಿ