More

    ಅಮೆರಿಕದಲ್ಲಿ ಹಿಮಪಾತ ಹೊಡೆತ!; ಲಕ್ಷಾಂತರ ಮನೆಗಳ ವಿದ್ಯುತ್ ಸಂಪರ್ಕ ಕಡಿತ

    | ಬೆಂಕಿ ಬಸಣ್ಣ ನ್ಯೂಯಾರ್ಕ್

    ಕರೊನಾ ಸಂಕಷ್ಟದ ನಡುವೆಯೇ ಅಮೆರಿಕದ ನಾರ್ಥ್ ಈಸ್ಟ್ ಕರಾವಳಿಯ ರಾಜ್ಯಗಳಲ್ಲಿ ಸತತ ಹಿಮಪಾತವಾಗುತ್ತಿದೆ. ಈ ವರ್ಷದ ಇಡೀ ಚಳಿಗಾಲದಲ್ಲಿ ಆಗದಷ್ಟು ಹಿಮಪಾತ ಒಂದೇ ದಿನದಲ್ಲಿ ಆಗಿದೆ. ನ್ಯೂಯಾರ್ಕ್ ರಾಜ್ಯದ ಬಿಂಗ್ಯಾಟನ್ ನಗರದಲ್ಲಿ 40 ಇಂಚು ಹಿಮ ಬಿದ್ದಿದೆ.

    ಅಮೆರಿಕದ ಪೆನ್ಸಿಲ್ವೇನಿಯಾ, ನ್ಯೂಯಾರ್ಕ್, ನ್ಯೂಜರ್ಸಿ, ಮೆಸಾಚುಸೆಟ್ಸ್, ನ್ಯೂ ಇಂಗ್ಲೆಂಡ್, ಕನೆಕ್ಟಿಕಟ್, ವರ್ವನ್ಟ ಹೀಗೆ ಅನೇಕ ರಾಜ್ಯಗಳು ಹಿಮಪಾತದಲ್ಲಿ ಮುಳುಗಿ ಹೋಗಿದ್ದು ಅಲ್ಲಿನ ರಾಜ್ಯಪಾಲರು ತುರ್ತು ಪರಿಸ್ಥಿತಿ (ಸ್ನೋ ಎಮರ್ಜೆನ್ಸಿ) ಘೊಷಣೆ ಮಾಡಿದ್ದಾರೆ. ಹಿಮಪಾತದ ಜೊತೆಗೆ ಭೀಕರ ಚಳಿಗಾಳಿ, ಗಂಟೆಗೆ 60 ರಿಂದ 70 ಮೈಲಿಗಳ ವೇಗದಲ್ಲಿ ಬೀಸುತ್ತಿದ್ದು, ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

    ಇದನ್ನೂ ಓದಿ: ಹೊಸ ವರ್ಷದಿಂದ ಫಾಸ್​ಟ್ಯಾಗ್​ ಕಡ್ಡಾಯ; ರದ್ದಾಗಲಿದೆ ನಗದು ಶುಲ್ಕ ಪಾವತಿ ಪಥ…

    ನ್ಯೂಯಾರ್ಕ್ ರಾಜ್ಯವೊಂದರಲ್ಲೇ ಆರುನೂರಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇಲ್ಲಿಯ ಗವರ್ನರ್ ಆಂಡ್ರೂ ಕೋಮೊ, ಎಲ್ಲಾ ಸರ್ಕಾರಿ ಕಚೇರಿ ಮತ್ತು ಶಾಲೆಗಳಿಗೆ ರಜೆ ಘೊಷಿಸಿದ್ದಾರೆ. ಜನರು ಮನೆಯಿಂದ ಹೊರಗೆ ಬರದಂತೆ ಮನವಿ ಮಾಡಿದ್ದಾರೆ.

    • ಬಿಂಗ್ಯಾಟನ್ ನಗರದಲ್ಲಿ 40 ಇಂಚು ಹಿಮ
    • ಇಡೀ ಚಳಿಗಾಲದ ಹಿಮಪಾತ ಒಂದೇ ದಿನದಲ್ಲಿ
    • ಹಲವೆಡೆ ತುರ್ತಪರಿಸ್ಥಿತಿ ಘೋಷಣೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts