More

    ಒಮ್ಮೆ ಒಬ್ಬ ಹುಡುಗನನ್ನು ನನ್ನ ರೂಮಿಗೆ ಕರೆದೊಯ್ದಿದ್ದೆ ಆದ್ರೆ… ಒಂದು ಕೋಣೆಯ ರಹಸ್ಯ ಬಿಚ್ಚಿಟ್ಟ ಜಾಹ್ನವಿ!

    ಮುಂಬೈ: ಬಾಲಿವುಡ್​ ಬ್ಯೂಟಿ ಜಾಹ್ನವಿ ಕಪೂರ್, ದಿವಂಗತ ನಟಿ ಶ್ರೀದೇವಿ ಮತ್ತು ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಎಂಬುದು ಎಲ್ಲರಿಗೂ ತಿಳಿದಿದೆ. ಕೇವಲ ಹಿಂದಿ ಮಾತ್ರವಲ್ಲದೆ, ತೆಲುಗು ಮತ್ತು ತಮಿಳು ಚಿತ್ರಗಳಲ್ಲೂ ನಟಿಸುತ್ತಿರುವ ಜಾಹ್ನವಿ ಸಾಕಷ್ಟು ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಅದರಲ್ಲೂ ಪಡ್ಡೆ ಹುಡುಗರ ಹಾಟ್​ ಫೇವರಿಟ್​ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಸಖತ್​ ಆ್ಯಕ್ಟೀವ್​ ಆಗಿರುವ ಜಾಹ್ನವಿ, ಒಂದೇ ಒಂದು ಪೋಸ್ಟ್‌ ಹಾಕಿದರೆ ಸಾಕು ತಕ್ಷಣ ನೆಟ್ಟಿಗರ ಗಮನ ಸೆಳೆದು, ವೈರಲ್​ ಆಗಿ ಬಿಡುತ್ತವೆ. ತಮ್ಮ ಮಾದಕ ಫೋಟೋಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಅಂದರೆ, ಜಾಹ್ನವಿ ಅವರು 2018 ರಲ್ಲಿ ಬಿಡುಗಡೆಯಾದ ‘ದಡಕ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.

    ತಾಜಾ ಸಂಗತಿ ಏನೆಂದರೆ, ಇತ್ತೀಚೆಗೆ ಜಾಹ್ನವಿ ಕಪೂರ್​ ಯೂಟ್ಯೂಬ್ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಆಸಕ್ತಿಕರ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಅದೇನೆಂದರೆ, ಜಾಹ್ನವಿ ಅವರು ಒಮ್ಮೆ ಮನೆಯವರಿಗೆ ಗೊತ್ತಾಗದಂತೆ ಒಬ್ಬ ಹುಡುಗನನ್ನು ತನ್ನ ರೂಮಿಗೆ ಕರೆದೊಯ್ದಿದ್ದರಂತೆ. ಆದರೆ, ಆಕೆಯ ತಂದೆ ಬೋನಿ ಕಪೂರ್ ಅದನ್ನು ಕಂಡುಹಿಡಿದರು ಎಂದು ಜಾಹ್ನವಿ ಹೇಳಿದ್ದಾರೆ.

    ಜಾಹ್ನವಿ ಅವರು ಮಿಸ್ಟರ್ ಅಂಡ್ ಮಿಸಸ್ ಮಹಿ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರ ಮೇ 31ಕ್ಕೆ ದೇಶಾದ್ಯಂತ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಪ್ರಚಾರದಲ್ಲಿ ಬಿಜಿಯಾಗಿರುವ ಜಾಹ್ನವಿ, Mashable India ಹೆಸರಿನ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಈ ಕುತೂಹಲಕಾರಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಈ ಸಂದರ್ಶನವನ್ನು ಜಾಹ್ನವಿ ಅವರಿದ್ದ ಮುಂಬೈನ ಹಳೆಯ ಫ್ಲಾಟ್​ ಮುಂದೆ ಮಾಡಲಾಗಿದೆ. ಜಾಹ್ನವಿ ಅವರ ತಾಯಿ ಶ್ರೀದೇವಿ ಮುಂಬೈನಲ್ಲಿ ಖರೀದಿಸಿದ ಮೊದಲ ಫ್ಲಾಟ್ ಇದಾಗಿದೆ.

    ಒಮ್ಮೆ ನಾನು ಒಬ್ಬ ಹುಡುಗನನ್ನು ನನ್ನ ಕೋಣೆಗೆ ಕರೆದುಕೊಂಡು ಹೋದೆ. ಆತನನ್ನು ಮುಂಬಾಗಿಲಿನಿಂದ ಕಳುಹಿಸಿದರೆ ತೊಂದರೆಯಾಗುತ್ತದೆ ಅಂತ ಕಿಟಕಿ ಮೂಲಕ ಹೊರಗೆ ಜಿಗಿಯುವಂತೆ ಹೇಳಿದ್ದೆ. ನಮ್ಮ ಫ್ಲಾಟ್ ಮೊದಲ ಮಹಡಿಯಲ್ಲಿತ್ತು. ಹಾಗಾಗಿ ಕೆಳಗೆ ನಿಲ್ಲಿಸಿದ್ದ ನನ್ನ ಕಾರಿನ ಮೇಲೆ ಹಾರಿ ಕೆಳಗೆ ಉರುಳಲು ಹೇಳಿದೆ. ನನ್ನದು ಎತ್ತರದ ಕಾರು. ಹೀಗಾಗಿ ಸುಲಭವಾಯಿತು. ಕಾರಿನ ಮೇಲೆ ಜಿಗಿದು ಆತ ಅಲ್ಲಿಂದ ಹೊರಟು ಹೋದ. ಆದರೆ, ನನ್ನ ತಂದೆ ಇದನ್ನೆಲ್ಲ ಸಿಸಿಟಿವಿ ಕ್ಯಾಮೆರಾ ಮೂಲಕ ನೋಡುತ್ತಿದ್ದರು. ನೀವು ಏನು ಮಾಡುತ್ತಿದ್ದೀರಿ? ಎಂಬ ಪ್ರಶ್ನೆ ಕೇಳಿಬಂತು. ಬಳಿಕ ಯಾರೂ ಒಳಗೆ ಬರದಂತೆ ನನ್ನ ತಂದೆ ನನ್ನ ಕೋಣೆಯ ಹೊರಗೆ ಗ್ರಿಲ್ ಹಾಕಿಸಿದರು ಎಂದು ಜಾಹ್ನವಿ ಹೇಳಿದ್ದಾರೆ.

    ಇದು ತಮಾಷೆಯ ಅನುಭವ ಎಂದು ಹೇಳುತ್ತಲೇ ಜಾಹ್ನವಿ ನಕ್ಕರು. ಆದರೆ ಹುಡುಗನ ಹೆಸರನ್ನು ನಟಿ ಬಹಿರಂಗಪಡಿಸಿಲ್ಲ. ಯಾರಿರಬಹುದು ಎಂದು ನೆಟ್ಟಿಗರು ಗೆಸ್​ ಮಾಡುತ್ತಿದ್ದಾರೆ. ಬಹುಶಃ ಬಾಯ್​ಫ್ರೆಂಡ್​ ಶಿಖರ್​ ಇರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ತನ್ನ ತಂದೆ ಬೋನಿ ಕಪೂರ್ ಕೂಡ ಒಮ್ಮೆ ಹೋಟೆಲ್ ಕಿಟಕಿಯಿಂದ ಜಿಗಿದಿದ್ದರು ಎಂದು ಜಾನ್ವಿ ಸಂದರ್ಶನದಲ್ಲಿ ಹೇಳಿದ್ದಾರೆ. ಮದುವೆಗೂ ಮುನ್ನ ಶ್ರೀದೇವಿಯನ್ನು ನೋಡಲು ಹೋದಾಗ ಹೋಟೆಲ್​ ಕಿಟಕಿಯಿಂದ ಜಿಗಿದಿದ್ದರು ಎಂದು ಜಾಹ್ನವಿ ಹೇಳಿದ್ದಾರೆ.

    ಸಿನಿಮಾ ವಿಚಾರಕ್ಕೆ ಬರುವುದಾದರೆ, ಮೇ 31 ರಂದು ಬಿಡುಗಡೆಯಾಗಲಿರುವ ಮಿಸ್ಟರ್​ ಅಂಡ್​ ಮಿಸೆಸ್​ ಮಹಿ ಚಿತ್ರವು ಕ್ರಿಕೆಟ್ ಹಿನ್ನೆಲೆ ಹೊಂದಿದ್ದು, ಜಾಹ್ನವಿ ಮತ್ತು ರಾಜ್‌ಕುಮಾರ್ ಅವರ ಪಾತ್ರಗಳ ನಡುವಿನ ಸಂಬಂಧವನ್ನು ಹೇಗೆ ತೆರೆದುಕೊಳ್ಳುತ್ತದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. (ಏಜೆನ್ಸೀಸ್​)

    ಗೆದ್ದಿದ್ದು ಕೆಕೆಆರ್​ ಆದ್ರೆ ಟ್ರೆಂಡ್​ ಆಗಿದ್ದು ಕಾವ್ಯಾ ಮಾರನ್​! ಕ್ಯಾಮೆರಾ​ಗೆ ಮುಖ ತೋರದೆ ಕಣ್ಣೀರಿಟ್ಟ SRH ಒಡತಿ

    ನಾನು ಮೀನಾ ಬಳಿ ಅದನ್ನು ಕೇಳಿದೆ ಆದ್ರೆ… ಖ್ಯಾತ ನಿರ್ಮಾಪಕನಿಂದ ಶಾಕಿಂಗ್​ ಹೇಳಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts