More

    ಕಾಮತೃಷೆ ತೀರಿಸಿಕೊಳ್ಳಲು ವಿದ್ಯಾರ್ಥಿಗಳ ಬಳಕೆ: 6 ಶಿಕ್ಷಕಿಯರ ಬಂಧನ, ಸ್ಫೋಟಕ ಮಾಹಿತಿ ಬಹಿರಂಗ

    ನ್ಯೂಯಾರ್ಕ್​: ವಿದ್ಯಾರ್ಥಿಗಳನ್ನು ಕಾಮತೃಷೆಗೆ ಬಳಸಿಕೊಂಡ ಆರೋಪದ ಮೇಲೆ ಕೇವಲ ಎರಡು ದಿನದ ಅಂತರದಲ್ಲಿ ಆರು ಶಿಕ್ಷಕಿಯರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.

    ಮೂರು ಬಾರಿ ಲೈಂಗಿಕ ಕ್ರಿಯೆ
    ಆರೋಪಿ ಎಲೆನ್​ ಶೆಲ್​ (38) ಮೇಲೆ ತೃತೀಯ ದರ್ಜೆಯ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಕ್ರಿಮಿನಲ್ ದೂರಿನ ಪ್ರಕಾರ 16 ವರ್ಷದ ವಿದ್ಯಾರ್ಥಿಯನ್ನು ಮೂರು ಬಾರಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡ ಆರೋಪ ಶೆಲ್​ ಮೇಲಿದೆ. ಗುರುವಾರ ಆಕೆಯನ್ನು ಗ್ಯಾರಾರ್ಡ್ ಕೌಂಟಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿ ಶೆಲ್​, ವುಡ್​ಲಾನ್​ ಎಲಿಮೆಂಟರಿ ಶಾಲೆಯಲ್ಲಿ ಸಹಾಯಕ ಶಿಕ್ಷಕಿಯಾಗಿದ್ದಾಳೆ. ಇದಕ್ಕೂ ಮುನ್ನ ಲ್ಯಾಂಕಾಸ್ಟರ್ ಎಲಿಮೆಂಟರಿ ಶಾಲೆಯಲ್ಲಿ ಉದ್ಯೋಗಿಯಾಗಿದ್ದಳು. ಆರೋಪ ಬಂದ ಕೂಡಲೇ 38 ವರ್ಷದ ಶಿಕ್ಷಕಿಯನ್ನು ಆಡಳಿತಾತ್ಮಕ ರಜೆ ಮೇಲೆ ಇರಿಸಲಾಗಿತ್ತು.

    ಇದನ್ನೂ ಓದಿ: ಬರ್ತಡೇ ಆಚರಣೆ ಬಳಿಕ ಪ್ರೇಯಸಿ ಹತ್ಯೆ ಕೇಸ್​: ವಿಚಾರಣೆಯಲ್ಲಿ ಮತ್ತಷ್ಟು ಭಯಾನಕ ಸಂಗತಿ ಬಯಲು

    ಶಿಕ್ಷಣತಜ್ಞೆಯ ಕಾಮಪುರಾಣ
    ಅರ್ಕಾನ್ಸಾಸ್​ನ ಶಿಕ್ಷಣತಜ್ಞೆ 32 ವರ್ಷದ ಹೀದರ್ ಹೇರ್ ಅವರು ಪ್ರಥಮ ದರ್ಜೆಯ ಅತ್ಯಾಚಾರ ಅಪರಾಧವನ್ನು ಎದುರಿಸುತ್ತಿದ್ದಾರೆ. ಈಕೆ ಹದಿಹರೆಯದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂದು ಅರ್ಕಾನ್ಸಾಸ್ ಟೈಮ್ಸ್ ವರದಿ ಮಾಡಿದೆ.

    ಶಾಲೆಯ ಕಟ್ಟಡದೊಳಗೆ ಲೈಂಗಿಕ ಕ್ರಿಯೆ
    ಒಕ್ಲಹೋಮಾದ ಎಮಿಲಿ ಹ್ಯಾನ್‌ಕಾಕ್ (26), ವಿದ್ಯಾರ್ಥಿಯೊಂದಿಗಿನ ಸಂಬಂಧದ ಬಗ್ಗೆ ಸ್ಥಳೀಯ ಪೊಲೀಸರಿಗೆ ಸುಳಿವು ದೊರೆತ ಕೂಡಲೇ ಆಕೆಯನ್ನು ಗುರುವಾರ ಬಂಧಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

    ಕೊಕೊ ನ್ಯೂಸ್​ ಪ್ರಕಾರ ಹ್ಯಾನ್​ಕಾಕ್​ ಲಿಂಕನ್ ಕೌಂಟಿಯ ಬದಲಿ ಶಿಕ್ಷಕಿ. 15 ವರ್ಷದ ವಿದ್ಯಾರ್ಥಿಯೊಂದಿಗೆ ಹೊಂದಿದ್ದ ಅಕ್ರಮ ಸಂಬಂಧ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ವೆಲ್‌ಸ್ಟನ್ ಪಬ್ಲಿಕ್ ಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿದ್ದಳು ಮತ್ತು ಶಾಲೆಯ ಕಟ್ಟಡದೊಳಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ನ್ಯಾಯಾಲಯದ ದಾಖಲೆಗಳು ಹೇಳಿವೆ ಹಾಗೂ Snapchat ನಲ್ಲಿಯೂ ವಿದ್ಯಾರ್ಥಿಯೊಂದಿಗೆ ಅಶ್ಲೀಲ ಸಂವಹನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

    ಐದು ಬಾರಿ ಸಂಭೋಗ
    ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಅಯೋವಾದ ಡೆಸ್ ಮೊಯಿನ್ಸ್‌ನಲ್ಲಿರುವ ಕ್ಯಾಥೋಲಿಕ್ ಪ್ರೌಢಶಾಲೆಯ ಇಂಗ್ಲಿಷ್ ಶಿಕ್ಷಕಿ ಕ್ರಿಸ್ಟನ್ ಗ್ಯಾಂಟ್ (36), ತನ್ನ ವಿದ್ಯಾರ್ಥಿಯೊಂದಿಗೆ ತನ್ನ ಶಾಲೆಯ ಒಳಗೆ ಮತ್ತು ಹೊರಗೆ ಐದು ಬಾರಿ ಲೈಂಗಿಕ ಸಂಭೋಗ ನಡೆಸಿರುವ ಆರೋಪದ ಮೇಲೆ ಶುಕ್ರವಾರ ಬಂಧಿಸಲಾಗಿದೆ.

    ಇದನ್ನೂ ಓದಿ: ಬಿಜೆಪಿಯಲ್ಲಿ ವೀರಶೈವ ಲಿಂಗಾಯತರನ್ನು ತುಳಿಯಲಾಗುತ್ತಿದೆ: ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ

    ಲೈಂಗಿಕ ಸಂಬಂಧ
    ಎಫ್‌ಎಫ್‌ಎಕ್ಸ್‌ನೌ ನ್ಯೂಸ್​ ಪ್ರಕಾರ, ಜೇಮ್ಸ್ ಮ್ಯಾಡಿಸನ್ ಹೈಸ್ಕೂಲ್‌ನಲ್ಲಿ ಅಲಿಹ್ ಖೇರಾಡ್‌ಮಂಡ್ (33) ಹೆಸರಿನ ಶಿಕ್ಷಕಿ ಹಲವಾರು ತಿಂಗಳುಗಳ ಕಾಲ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಆರೋಪ ಹೊರಿಸಲಾಗಿದೆ. 2016 ರಿಂದ ಫೇರ್‌ಫ್ಯಾಕ್ಸ್ ಕೌಂಟಿ ಶಾಲೆಗಳಲ್ಲಿ ಶಿಕ್ಷಕಿಯಾಗಿರುವ ಖೇರಾಡ್‌ಮಂಡ್​ಳನ್ನು ಬಂಧಿಸಲಾಗಿದೆ.

    ಅಥ್ಲೆಟಿಯೊಂದಿಗೆ ಲೈಂಗಿಕ ಕ್ರಿಯೆ
    ಪೆನ್ಸಿಲ್ವೇನಿಯಾದ ಜಾವೆಲಿನ್ ತರಬೇತುದಾರಳು ತಾನು ತರಬೇತಿ ನೀಡಿದ 17 ವರ್ಷದ ಹುಡುಗನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದಾಳೆ. ಆರೋಪಿನ್ನು ಹನ್ನಾ ಮಾರ್ತ್ (26) ಎಂದು ಗುರುತಿಸಲಾಗಿದೆ. ಹನ್ನಾ ಮಾರ್ತ್​ ನಾರ್ಥಾಂಪ್ಟನ್ ಏರಿಯಾ ಹೈಸ್ಕೂಲ್ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೆಟಿಯೊಂದಿಗೆ ಲೈಂಗಿಕ ಸಂಬಂಧದಲ್ಲಿ ತೊಡಗಿದ್ದಾರೆ ಎಂದು ಪೊಲೀಸರಿಗೆ ಗೊತ್ತಾದ ಬಳಿಕ ಬಂಧಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. (ಏಜೆನ್ಸೀಸ್​)

    ಈ ಮುಂದುವರೆದ ದೇಶದಲ್ಲಿ ಕೈದಿಯನ್ನು ಜೀವಂತವಾಗಿ ತಿಂದು ಹಾಕಿದ ತಿಗಣೆಗಳು!

    ಇದು ಜಾಬ್​ ಟೆರರಿಸಂ! ಗ್ರಾಹಕರು ಸೇವಿಸುವ ಮದ್ಯದಲ್ಲಿ ತನ್ನದೇ ರಕ್ತ ಮಿಶ್ರಣ ಮಾಡಿದ ಪರಿಚಾರಿಕೆ

    ಪಾತಕಿ ಅತೀಕ್​, ಸಹೋದರ ಅಶ್ರಫ್​ ಹತ್ಯೆ ಪ್ರಕರಣ: ಪತ್ರಕರ್ತರ ಸೋಗಲ್ಲಿ ಗುಂಡಿನ ದಾಳಿ, ಮೂವರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts