More

    ಇದು ಜಾಬ್​ ಟೆರರಿಸಂ! ಗ್ರಾಹಕರು ಸೇವಿಸುವ ಮದ್ಯದಲ್ಲಿ ತನ್ನದೇ ರಕ್ತ ಮಿಶ್ರಣ ಮಾಡಿದ ಪರಿಚಾರಿಕೆ

    ಟೋಕಿಯೋ: ಜಪಾನ್​ನ ಕೆಫೆಯ ಪರಿಚಾರಿಕೆಯೊಬ್ಬಳು ಗ್ರಾಹಕರ ಮದ್ಯದಲ್ಲಿ ತನ್ನ ರಕ್ತವನ್ನು ಮಿಶ್ರಣ ಮಾಡಿಕೊಟ್ಟಂತಹ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ರಕ್ತ ಮಿಶ್ರಣ ಮಾಡಿರುವು ಗೊತ್ತಾಗುತ್ತಿದ್ದಂತೆ ಪರಿಚಾರಿಕೆಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.

    ಒರಿಕಾಕು ಎಂಬ ಪಾನೀಯ
    ಕೆಫೆ ಹೆಸರು ಮಾಂಡೈಜಿ ಕಾನ್​ ಕೆಫೆ ಡಾಕು. ಈ ಕೆಫೆ ಡಾರ್ಕ್ ಮತ್ತು ಗಾತ್-ಶೈಲಿಯ ಮೇಕಪ್ ಧರಿಸುವ ಪರಿಚಾರಿಕೆಯನ್ನು ನೇಮಿಸಿಕೊಳ್ಳುತ್ತದೆ. ಹಣ್ಣುಗಳು, ವರ್ಣರಂಜಿತ ಸಿರಪ್‌ಗಳ ಜತೆಗೆ ತನ್ನ ಸ್ವಂತ ರಕ್ತವನ್ನು ಬೆರೆಸಿದ ಒರಿಕಾಕು ಎಂಬ ಪಾನೀಯಗಳನ್ನು ಗ್ರಾಹಕರಿಗೆ ತಯಾರಿಸಿದ ಅಪರಿಚಿತ ಪರಿಚಾರಿಕೆಯನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ಸಪ್ಪೊರೊದಲ್ಲಿರುವ ಕೆಫೆ ಟ್ವೀಟ್‌ ಮೂಲಕ ಪ್ರಕಟಿಸಿದೆ. ಎಲ್ಲ ಕಲುಷಿತ ಲೋಟಗಳನ್ನು ಬದಲಾಯಿಸಲು ಕೆಫೆಯು ಒಂದು ದಿನದ ವ್ಯಾಪಾರವನ್ನೇ ಸ್ಥಗಿತಗೊಳಿಸಿತು.

    ಇಂತಹ ಕೃತ್ಯವು ಅರೆಕಾಲಿಕ ಉದ್ಯೋಗ ಭಯೋತ್ಪಾದನೆಗಿಂತ ಭಿನ್ನವಾಗಿಲ್ಲ ಮತ್ತು ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಕೆಫೆ ಟ್ವೀಟ್ ಓದಿದೆ. ಇದನ್ನೂ ಓದಿ: ನನಸಾಗದ ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಕನಸು!;ವರುಣ ಕ್ಷೇತ್ರಕ್ಕೆ ಸೀಮಿತ, ರಾಜ್ಯದ ಪ್ರಮುಖ ನಾಯಕರ ಅಭಿಪ್ರಾಯಕ್ಕೆ ದೆಹಲಿ ವರಿಷ್ಠರ ಮನ್ನಣೆ

    ವಿಷಾದಿಸುತ್ತೇನೆ
    ಮತ್ತೊಂದು ಟ್ವೀಟ್‌ನಲ್ಲಿ ಮಾಲೀಕರು ಗ್ರಾಹಕರಲ್ಲಿ ಕ್ಷಮೆಯಾಚಿಸಿದ್ದಾರೆ. ದಯವಿಟ್ಟು ನನಗೆ ಸ್ವಲ್ಪ ದಿನ ಅಂಗಡಿಯನ್ನು ಮುಂದುವರಿಸಲು ಅವಕಾಶ ಮಾಡಿಕೊಡಿ. ಇದರಿಂದ ನಾನು ಏಕಾಂಗಿಯಾಗಿ ಸಂತೋಷವಾಗಿರಬಹುದು. ನಾನು ಅಂಗಡಿಯನ್ನು ಸ್ವಚ್ಛಗೊಳಿಸುತ್ತೇನೆ, ಲೋಟಗಳನ್ನು ಬದಲಾಯಿಸುತ್ತೇನೆ ಮತ್ತು ಕಲುಷಿತಗೊಂಡಿರುವ ಆಲ್ಕೋಹಾಲ್ ಅನ್ನು ವಿಲೇವಾರಿ ಮಾಡುತ್ತೇನೆ. ನಿಮಗೆ ತೊಂದರೆ ನೀಡಿದ್ದಕ್ಕಾಗಿ ಮತ್ತೊಮ್ಮೆ ನಾನು ತುಂಬಾ ವಿಷಾದಿಸುತ್ತೇನೆ ಎಂದು ಕೆಫೆ ಮಾಲೀಕರು ಟ್ವೀಟ್ ಮಾಡಿದ್ದಾರೆ.

    ಗಮನಿಸಬೇಕಾದ ಸಂಗತಿ
    ಗ್ರಾಹಕನ ಕೋರಿಕೆಯ ಮೇರೆಗೆ ಪರಿಚಾರಿಕೆ ತನ್ನ ರಕ್ತವನ್ನು ಪಾನೀಯಕ್ಕೆ ತುಂಬಿಸಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಕೆಫೆಯು ಮಾರ್ಚ್‌ನಲ್ಲಿ ಸಪೊರೊ ಸಿಟಿಯ ಸುಸುಕಿನೊ ಜಿಲ್ಲೆಯಲ್ಲಿ ಪ್ರಾರಂಭವಾಯಿತು ಮತ್ತು ಗ್ರಾಹಕರು ಈ ಕೆಫೆಯಲ್ಲಿ ತಮಗೆ ಬೇಕಾದುದನ್ನು ಕುಡಿಯಲು 2,500 ಯೆನ್ (ಸುಮಾರು 25 ಅಮೆರಿಕ ಡಾಲರ್​ ಅಂದರೆ ಭಾರತೀಯ ಕರೆನ್ಸಿ ಪ್ರಕಾರ 2,046 ರೂಪಾಯಿ) ವ್ಯಯಿಸಬೇಕಾಗುತ್ತದೆ.

    ಅಪಾಯಕಾರಿ ಕೃತ್ಯ
    ಘಟನೆಯ ಬಗ್ಗೆ ಜಪಾನ್​ ಡಾಕ್ಟರ್​ ಝೆಂಟೊ ಕಿಟಾವೊ ಅವರು ಜಪಾನ್ ಮ್ಯಾಗಜೀನ್ ಫ್ಲ್ಯಾಶ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇತರರ ರಕ್ತವನ್ನು ಕುಡಿಯುವುದು ಅತ್ಯಂತ ಅಪಾಯಕಾರಿ ಕೃತ್ಯವಾಗಿದೆ. ಇನ್ನೊಬ್ಬರ ರಕ್ತವನ್ನು ಕುಡಿಯುವುದರಿಂದ ಜನರು ಸೋಂಕಿಗೆ ಒಳಗಾಗುವ ಪ್ರಕರಣಗಳು ಅಪರೂಪ, ಆದರೆ ಎಚ್​ಐವಿ, ಹೆಪಟೈಟಿಸ್ ಸಿ, ಹೆಪಟೈಟಿಸ್ ಬಿ ಮತ್ತು ಸಿಫಿಲಿಸ್ ಸೇರಿದಂತೆ ಪ್ರಮುಖ ರೋಗಗಳು ರಕ್ತದ ಮೂಲಕ ಹರಡಬಹುದು. ಬಾಯಿಯಲ್ಲಿ ಗಾಯಗಳಿದ್ದರೆ, ರಕ್ತ ವರ್ಗಾವಣೆಯಿಂದ ಸೋಂಕಿಗೆ ಒಳಗಾಗುವುದು ಸುಲಭ ಎಂದಿದ್ದಾರೆ. ಇದನ್ನೂ ಓದಿ: ಬಾವಲಿ.. ಹಾವಳಿಯಷ್ಟೇ ಅಲ್ಲ..: ಶಕ್ತಿಶಾಲಿ ಸಸ್ತನಿಗಳ ಕೌತುಕಮಯ ಜೀವನದತ್ತ ಒಂದು ಇಣುಕು ನೋಟ 

    ವಜಾಗೊಂಡ ಉದ್ಯೋಗಿ ಮತ್ತು ಆಕೆಯ ರಕ್ತ ತುಂಬಿದ ಕಾಕ್‌ಟೈಲ್‌ಗಳನ್ನು ಸೇವಿಸಿದ ಗ್ರಾಹಕರನ್ನು ಪರೀಕ್ಷೆಗೆ ಒಳಪಡಿಸಬೇಕೆಂದು ವೈದ್ಯರು ಸೂಚಿಸಿದರು. (ಏಜೆನ್ಸೀಸ್​)

    ಮಹಿಳೆಯರ ಖಾಸಗಿ ಅಂಗಗಳ ಬಗ್ಗೆ ಮಾತಾಡಿದ್ರೆ ಗುಂಡು ಹಾರಿಸುತ್ತೇನೆಂದ ನಟಿ ರಾಧಿಕಾ ಆಪ್ಟೆ!

    ಮದುವೆಗೂ ಮುನ್ನ ನಟನೊಂದಿಗೆ ಸಂಬಂಧ: ಖುಷ್ಬೂ ಬಗ್ಗೆ ಶಾಕಿಂಗ್​ ಕಾಮೆಂಟ್​ ಮಾಡಿದ ತೆಲುಗು ನಟಿ

    ಸದಾ ಪಕ್ಷ, ತತ್ವ, ಸಿದ್ಧಾಂತ ಎನ್ನುತ್ತಿದ್ದ ಈಶ್ವರಪ್ಪ ಸ್ಥಿತಿ ಈಗ ಏನಾಯ್ತು ನೋಡಿ: ಸಿದ್ದರಾಮಯ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts