More

    ಬೆಳ್ಳಿತೆರೆಯ ಭರವಸೆಯ ಹೀರೋ ಸೊರಬದ ಸ್ಪುರದ್ರೂಪಿ ನಟ ವೀರೆನ್ ಕೇಶವ್

    ಸಿನಿಮಾರಂಗದಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿರುವ ,ಮೂರು ಭಾಷೆಯಲ್ಲಿ ಬರಲಿರುವ “ಕಾಕ್ಟೈಲ್ “ಸಿನಿಮಾದ ನಾಯಕನಟ ನಮ್ಮ ಮಲೆನಾಡಿನ ಸೊರಬದ ಸ್ಪುರದ್ರೂಪಿ ನಟ ವೀರನ್ ಕೇಶವ್.

    ರಾಜಕೀಯ, ಸಾಹಿತ್ಯ, ಸಿನಿಮಾ ಯಾವುದೇ ಕ್ಷೇತ್ರವಿರಲಿ ಮಲೆನಾಡು ರಾಜ್ಯಕ್ಕೆ ಹಲವಾರು ಖ್ಯಾತನಾಮರನ್ನು ಕೊಟ್ಟಿದೆ. ಕನ್ನಡ ಸಿನಿಮಾ ರಂಗಕ್ಕೆ ಮಲೆನಾಡಿಗರ ದೊಡ್ಡ ಕೊಡುಗೆ ಇದೆ. ಆದರೆ ಬೆಂಗಳೂರು ಮೈಸೂರಿಗೆ ಹೋಲಿಸಿದರೆ ಕಡಿಮೆ ಎನ್ನಬಹುದು. ಇತ್ತೀಚಿಗೆ ಹಲವು ಮಲೆನಾಡಿನ ಯುವಕರು ಸಿನಿಮಾರಂಗದತ್ತ ಕಾಲಿಟ್ಟಿದ್ದಾರೆ.ಈಗ ” ಕಾಕ್ಟೈಲ್ ” ಎನ್ನುವ ವಿಶಿಷ್ಟ ತ್ರಿಲ್ಲರ್ ಕಥೆಯ ಮೂಲಕ ಹೊಸ ಭರವಸೆ ಮೂಡಿಸುತ್ತಿರುವ ವೀರನ್ ಕೇಶವ್ ಗಂಧದಗುಡಿಯ ಚಂದನವನದಲ್ಲಿ ಕುತೂಹಲ ಮೂಡಿಸಿದ್ದಾರೆ.

    ಇವರು ಮೂಲತಃ ಸೊರಬದ ಹಿರೇಇಡಗೊಡು ಗ್ರಾಮದ ನಿವೃತ್ತ ಹಿರಿಯ ಅಧಿಕಾರಿಗಳಾದ ಡಾ. ಶಿವಪ್ಪ ಹೆಚ್ .ವಿ ಅವರ ಸುಪುತ್ರ. ಹಿಂದೆ ಇದೇ ಸೊರಬದಿಂದ ಬಂಗಾರಪ್ಪ ಅವರ ಪುತ್ರ ಕುಮಾರ್ ಬಂಗಾರಪ್ಪ ಅವರು ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು. ಈಗ ವೀರನ್ ಕೇಶವ್ ಹೊಸ ಭರವಸೆ ಮೂಡಿಸಿದ್ದಾರೆ.

    ನಿರ್ದೇಶಕ ಶ್ರೀರಾಮ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಹೊಸಬರ ಸಿನಿಮಾ ಆದರೂ ಕನ್ನಡ ಭಾಷೆಯ ಜೊತೆಗೆ ತೆಲುಗು,ತಮಿಳು ಭಾಷೆಯಲ್ಲಿಯೂ ಬಿಡುಗಡೆಗೆ ಸಿದ್ಧವಾಗುತ್ತಿದ್ದು ಸಿನಿಮಾ ಉದ್ಯಮದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ವೀರನ್ ಕೇಶವ್ ಜೊತೆ ನಾಯಕಿ ಆಗಿ ಚರಿಷ್ಮಾ ಎನ್ನುವ ಹೊಸ ನಟಿ ಸಹ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ವೀರನ್ ಕೇಶವ್ ಉತ್ತಮವಾಗಿ ಪೈಟ್, ಡಾನ್ಸ್ ಸಹ ಕಲಿತಿದ್ದು ಕೆಲವು ವರ್ಷಗಳಿಂದ ಸಿನಿಮಾ ನಾಯಕ ನಟನಾಗಲೆಂದೆ ಕನಸು ಹೊತ್ತು ವಿಶೇಷ ತಯಾರಿ ನಡೆಸಿದ್ದಾರೆ. ವಿಶಿಷ್ಟ ಸಸ್ಪೆನ್ಸ್ ಥ್ರಿಲ್ಲರ್ ಕತೆಯಾಗಿರುವ ಕಾಕ್ಟೈಲ್ ಪ್ರೇಕ್ಷಕರಿಗೆ ಇಷ್ಟವಾಗುವ ಎಲ್ಲವನ್ನೂ ಒಳಗೊಂಡಿದೆ ಎಂಬುದು ನಿರ್ಮಾಪಕ ಡಾ. ಶಿವಪ್ಪ ಹೆಚ್. ವಿ ಅವರ ಭರವಸೆ ಆಗಿದೆ. ಅವರ ಪ್ರಯತ್ನವನ್ನು ಕನ್ನಡ ಪ್ರೇಕ್ಷಕರು ಬೆಂಬಲಿಸಲಿ.ಅವರಿಗೆ ಯಶಸ್ಸು ಸಿಗಲಿ. ಮತ್ತಷ್ಟು ಮಲೆನಾಡಿನ ಯುವಕರಿಗೆ ಅವಕಾಶಗಳು ಅವರಿಂದ ದೊರಕಲಿ ಎಂದು ಆಶಿಸೋಣ. ಮಲೆನಾಡಿನ ಮಣ್ಣಿನ ಸೊಬಗಿನ ಸಿನಿಮಾಗಳು ಮುಂದೆ ಅವರಿಂದ ಬರಲಿ.

    ನಾಯಕ ನಟ ವೀರೆನ್ ಕೇಶನ್ ಅವರು ಸಾಕಷ್ಟು ಪೂರ್ವತಯಾರಿ, ಪರಿಶ್ರಮ ಪಟ್ಟಿರುವುದು ಚಿತ್ರದ ಉದ್ದಕ್ಕೂ ಕಂಡುಬರುತ್ತದೆ. ಇಂದು ಕಲಾ ಉದ್ಯಮವಾಗಿರುವ ಸಿನಿಮಾ ರಂಗಕ್ಕೆ ಮಲೆನಾಡಿನ ಸೊರಬದ ಗ್ರಾಮೀಣ ಭಾಗದವರು ನಿರ್ಮಾಣ ನಟನಿಗೆ ಕಾಲಿಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

    ಹೊಸತನದ ಹೊಸ ಪ್ರಯತ್ನದ ಹೊಸಬರ ಸಿನಿಮಾ ಬೆಂಬಲಿಸಿ ಪ್ರೋತ್ಸಾಹಿಸುವುದು ಸಹೃದಯಿ ಕನ್ನಡಿಗರ ಜವಾಬ್ದಾರಿಯಾಗಿದೆ.

    ರವಿರಾಜ್ ಸಾಗರ್.ಮಂಡಗಳಲೆ.
    ನಾಟಕರಂಗ ನಿರ್ದೇಶಕರು.

    ಉಪವಾಸ ಮಹತ್ವ ತಿಳಿಸುವ ರಂಜಾನ್ ಮಾಸ: ರಂಜಾನ್ ತಿಂಗಳ ವಿಶೇಷ

    ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ: ರಾವಣನ ರಾಷ್ಟ್ರದ ಶೋಚನೀಯ ಪರಿಸ್ಥಿತಿ ಹೀಗಿದೆ ನೋಡಿ..

    ಗುಜರಾತ್ ಟೈಟಾನ್ಸ್- ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts