ಚೆನ್ನೈ: ನಟಿ ಕಂ ರಾಜಕಾರಣಿ ಖುಷ್ಬೂ ಸುಂದರ್ ಇತ್ತೀಚೆಗಷ್ಟೇ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಿನಿಮಾಗಳಿಂದ ಅಂತರ ಕಾಯ್ದುಕೊಂಡು ರಾಜಕಾರಣದಲ್ಲಿ ಸಕ್ರೀಯರಾಗಿರುವ ಖುಷ್ಬೂ ಅವರ ಬಗ್ಗೆ ತೆಲುಗು ನಟಿ ಕಾಕಿನಾಡ ಶ್ಯಾಮಲಾ ಅವರು ನೀಡಿರುವ ಹೇಳಿಕೆ ಭಾರೀ ಸಂಚಲನ ಉಂಟು ಮಾಡಿದೆ.
ಶ್ಯಾಮಲಾ ಅವರು ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಇತ್ತೀಚೆಗೆ ನೀಡಿದ ಮಾಧ್ಯಮದ ಸಂದರ್ಶನದಲ್ಲಿ ಖುಷ್ಬೂ ಅವರ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ಚುನಾವಣೆ ಹಿನ್ನೆಲೆ ವಾಹನ ತಪಾಸಣೆ ಮಾಡದೇ ಸುಮ್ಮನೆ ಕೂತಿರುವ ಪೊಲೀಸರ ಮೇಲೆ ಕಮಿಷನರ್ ಗರಂ!
ಖುಷ್ಬೂ ಅವರು ದಕ್ಷಿಣ ಭಾರತದ ಖ್ಯಾತ ನಟಿ. 90ರ ದಶಕದ ಮುಂಚೂಣಿ ನಟಿಯರಲ್ಲಿ ಒಬ್ಬರು. ಜೀವನದಲ್ಲಿ ಅವರು ಹಲವು ಏರಿಳಿತಗಳನ್ನು ಕಂಡಿದ್ದಾರೆ. ತಮಿಳು ನಟ ಪ್ರಭು ಅವರೊಂದಿಗಿನ ಅವರ ಸಂಬಂಧವು ಸಂಕಟದಲ್ಲಿ ಕೊನೆಗೊಂಡಿತು.
ಖುಷ್ಬೂ ಅವರು 1986 ರಲ್ಲಿ ತೆಲುಗು ಚಿತ್ರ ಕಲಿಯುಗ ಪಾಂಡವುಲು ಮೂಲಕ ವೃತ್ತಿ ಜೀವನವನ್ನು ಆರಂಭಿಸಿದರು. ಮುಂಬೈನಲ್ಲಿ ಜನಿಸಿದ ಖುಷ್ಬು ಕಾಲಿವುಡ್‌ನಲ್ಲಿ ಸ್ಟಾರ್ ನಾಯಕಿಯಾಗಿ ಬೆಳೆದರು. ಹಿಂದಿಯ ಜೊತೆಗೆ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲೂ ಅವರು ನಟಿಸಿದ್ದು, ಬಹುಭಾಷಾ ತಾರೆ ಎನಿಸಿಕೊಂಡಿದ್ದಾರೆ. 1991ರಲ್ಲಿ ಖುಷ್ಬೂ ಮತ್ತು ಪ್ರಭು ಚಿನ್ನಿ ತಂಬಿ ಚಿತ್ರದಲ್ಲಿ ನಟಿಸಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು. ಈ ಬಗ್ಗೆ ಆಂಗ್ಲ ನಿಯತಕಾಲಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಖುಷ್ಬೂ ಮುಕ್ತವಾಗಿ ಪ್ರತಿಕ್ರಿಯಿಸಿದ್ದರು.
ನಾನು ಪ್ರಭು ಜೊತೆ ನಾಲ್ಕು ವರ್ಷಗಳಿಂದ ಸಂಬಂಧ ಹೊಂದಿದ್ದೇನೆ. 1993 ರಲ್ಲಿ ಪೋಯಸ್ ಗಾರ್ಡನ್‌ನಲ್ಲಿರುವ ಅವರ ನಿವಾಸದಲ್ಲಿ ವಿವಾಹವಾದೆವು. ಪ್ರಭು ಅವರು ಮೊದಲೇ ಮದುವೆಯಾಗಿದ್ದರು. ಹೀಗಾಗಿ ಅವರ ತಂದೆ ಶಿವಾಜಿ ಗಣೇಶನ್ ಇದನ್ನು ಬಲವಾಗಿ ವಿರೋಧಿಸಿದರು. ಮೊದಲ ಹೆಂಡತಿಯೊಂದಿಗೆ ಪ್ರಭು ಅವರಿಗೆ ವೈಮಸ್ಸಿತ್ತು. ಮದುವೆಯಾದ ನಾಲ್ಕು ತಿಂಗಳ ನಂತರ ಅನಿವಾರ್ಯ ಕಾರಣಗಳಿಂದಾಗಿ ನಾವಿಬ್ಬರು ಬೇರೆಯಾಗಬೇಕಾಯಿತು ಎಂದು ಖುಷ್ಬೂ ಹೇಳಿದ್ದಾರೆ.
ಇದನ್ನೂ ಓದಿ: ಆನ್ಲೈನ್ನಲ್ಲಿ ಆರ್ಡರ್ ಮಾಡಿದ ಮಹಿಳೆಗೆ ವೆಜ್ ಬಿರಿಯಾನಿಯಲ್ಲಿ ಸಿಕ್ತು ಮಾಂಸದ ತುಂಡು!
ಕಾಕಿನಾಡ ಶ್ಯಾಮಲಾ ಅವರು ಪ್ರಭು-ಖುಷ್ಬೂ ಸಂಬಂಧದ ಬಗ್ಗೆ ಕೆಲವು ಕುತೂಹಲಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಖುಷ್ಬೂ ಅವರು ತುಂಬಾ ಒಳ್ಳೆಯ ಹುಡುಗಿ. ಅವಳು ಪ್ರಭು ಅವರನ್ನು ತುಂಬಾ ಪ್ರೀತಿಸುತ್ತಿದ್ದಳು ಮತ್ತು ಮದುವೆಯಾದರು. ಆದರೆ, ಅವರಿಬ್ಬರ ಮದುವೆ ಪ್ರಭುವಿನ ಕುಟುಂಬದಲ್ಲಿ ವಿವಾದಕ್ಕೆ ಕಾರಣವಾಯಿತು. ಇದರಿಂದ ಪ್ರಭು-ಖುಷ್ಬೂ ಬೇರೆಯಾದರು ಎಂದು ಹೇಳಿದ್ದಾರೆ.
ಖುಷ್ಬೂ ಸುಂದರ್ ಎರಡನೇ ಮದುವೆಯಾಗಿ ವೈವಾಹಿಕ ಜೀವನ ಸಾಗಿಸುತ್ತಿದ್ದಾರೆ. ನಿರ್ದೇಶಕ ಸಿ. ಸುಂದರ್ ಅವರನ್ನು 2000ರಲ್ಲಿ ಖುಷ್ಬೂ ವಿವಾಹವಾದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇತ್ತೀಚೆಗಷ್ಟೇ ಖುಷ್ಬೂ ತನ್ನ ತಂದೆಯ ವಿರುದ್ಧ ಲೈಂಗಿಕ ಆರೋಪ ಮಾಡಿದ್ದರು. (ಏಜೆನ್ಸೀಸ್)
ಟಿಕೆಟ್ ಸಿಗದಿದ್ದಕ್ಕೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ರಾಜೀನಾಮೆ
ಗಟ್ಟಿಯಾಗಿ ತಬ್ಬಿ ಗುಪ್ತಾಂಗವನ್ನು ಮುಟ್ಟಿದ: ಡ್ರೆಸ್ಸಿಂಗ್ ರೂಮಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ನಟಿ ಮಾಳವಿಕಾ