More

    ಶಕ್ತಿದೇವತೆ ದರ್ಶನಕ್ಕಾಗಿ ಮಹಿಳೆಯರಿಗೆ ‘ಶಕ್ತಿ’ ತುಂಬಿದ ಯೋಜನೆ: ಬನಶಂಕರಿ ದೇವಳದಲ್ಲಿ ಭಾರಿ ಜನಜಂಗುಳಿ

    ಬಾಗಲಕೋಟೆ: ಕಾಂಗ್ರೆಸ್ ಗ್ಯಾರಂಟಿಗಳ ಪೈಕಿ ಒಂದಾಗಿರುವ ಶಕ್ತಿ ಯೋಜನೆಯನ್ನು ಮಹಿಳೆಯರು ಶಕ್ತಿ ಮೀರಿ ಬಳಸಿಕೊಳ್ಳುತ್ತಿದ್ದಾರೆ. ಈ ಯೋಜನೆ ಜಾರಿಯಾಗುತ್ತಿದ್ದಂತೆ ಧರ್ಮಸ್ಥಳ-ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಮಹಿಳೆಯರು ದಂಡುದಂಡಾಗಿ ಹೋಗಿ ದರ್ಶನ ಪಡೆದಿದ್ದರು. ಇದೀಗ ಮಹಿಳೆಯರು ಈ ಯೋಜನೆಯ ಶಕ್ತಿಯಿಂದ ಶಕ್ತಿದೇವತೆಯ ಕ್ಷೇತ್ರಕ್ಕೂ ದೊಡ್ಡಪ್ರಮಾಣದಲ್ಲಿ ಬರಲಾರಂಭಿಸಿದ್ದರಿಂದ ಬಾದಾಮಿಯ ಬನಶಂಕರಿ ದೇವಸ್ಥಾನದಲ್ಲಿ ಭಾರಿ ಜನಜಂಗುಳಿ ಸೃಷ್ಟಿಯಾಗಿದೆ.

     ಇದನ್ನೂ ಓದಿ: ನೇರಳೆ ಹಣ್ಣುಗಳನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ?: ಆರೋಗ್ಯಕ್ಕೇನು ತೊಂದರೆ?

    ಉಚಿತ ಬಸ್​ ಪ್ರಯಾಣದ ಶಕ್ತಿ ಯೋಜನೆ ಹಾಗೂ ಭಾನುವಾರದ ರಜೆ ಎರಡರಿಂದಾಗಿ ಬಾದಾಮಿ ಬನಶಂಕರಿ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಬಂದಿರುವುದರಿಂದ ರಷ್ಯೋ ರಷ್ಷು ಎನ್ನುವಂತಾಗಿದೆ. ಸಾಮಾನ್ಯವಾಗಿ ಪ್ರತಿ ದಿನ ಎರಡರಿಂದ ಎರಡೂವರೆ ಸಾವಿರ ಭಕ್ತರು ಬರುತ್ತಿದ್ದು, ಇಂದು 8ರಿಂದ 10 ಸಾವಿರ ಭಕ್ತರು ಬಂದಿದ್ದಾರೆ. ಪರಿಣಾಮವಾಗಿ ಉಚಿತ ಪ್ರಸಾದ ಭವನವೂ ಹೌಸ್​ಫುಲ್ ಆಗಿದೆ.

    ಇದನ್ನೂ ಓದಿ: ನಾಳೆ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ; ಈ ಸಂಭ್ರಮದಲ್ಲಿ ಇದೇ ಮೊದಲ ಸಲ ಸಿಎಂ ಉಪಸ್ಥಿತಿ!

    ಶಕ್ತಿ ಯೋಜನೆಯಿಂದಾಗಿ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ಇಲ್ಲಿ ವಿಪರೀತ ಜನಜಂಗುಳಿ ಉಂಟಾಗುತ್ತಿದ್ದು, ಬಹುಪಾಲು ಮಹಿಳೆಯರೇ ಇರುತ್ತಿದ್ದು, ಪುರುಷರ ಸಂಖ್ಯೆ ಅತಿ ಕಡಿಮೆ. ಬಸ್​ನಲ್ಲಿ ಉಚಿತವಾದ್ದರಿಂದ ಮಹಿಳೆಯರು ತಮ್ಮೊಂದಿಗೆ ಮಕ್ಕಳು ಹಾಗೂ ವಯಸ್ಸಾದ ಮಹಿಳೆಯರನ್ನೂ ಕರೆದುಕೊಂಡು ಬರುತ್ತಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿದೆ.

    ಇದನ್ನೂ ಓದಿ: ರಾತ್ರಿ ಲೈಟ್ ಆನ್​ ಮಾಡಿಟ್ಟು ಮಲಗಿದರೆ ಏನಾಗುತ್ತೆ?; ಆರೋಗ್ಯದ ಮೇಲೆ ಏನು ಪರಿಣಾಮ?

    ಧಾರವಾಡ, ಬೆಳಗಾವಿ, ಕೊಪ್ಪಳ, ಕಲಬುರಗಿ, ರಾಯಚೂರು, ವಿಜಯಪುರ ಮುಂತಾದೆಡೆಯಿಂದ ಬಾಲಕಿಯರು, ಮಹಿಳೆಯರು, ವೃದ್ಧೆಯರು ಬಂದಿದ್ದು, ಬನಶಂಕರಿ ದೇವಸ್ಥಾನದ ಜೊತೆಗೆ ಬಾದಾಮಿ, ಐಹೊಳೆ, ಪಟ್ಟದಕಲ್ಲು ಕಡೆಗೂ ತೆರಳುತ್ತಿದ್ದಾರೆ.

    ತಂದೆ-ತಾಯಿಯಿಂದ ದೂರ ಮಾಡಿದ್ದಕ್ಕೆ ಪತ್ನಿಯನ್ನೇ ಕೊಲೆ ಮಾಡಿಸಲು ಮುಂದಾದ ಪತಿ: ಆರು ತಿಂಗಳ ಬಳಿಕ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts