More

    ಪ್ರಶಸ್ತಿ ಗಳಿಸುವುದು ಈ ಚಿತ್ರದ ಉದ್ದೇಶ ಅಲ್ಲ: ಶಕೀಲಾ

    ಬೆಂಗಳೂರು: ಮಲಯಾಳಂ ನಟಿ ಶಕೀಲಾ ಅವರ ಕುರಿತು ಕನ್ನಡದ ನಿರ್ದೇಶಕ ಇಂದ್ರಜಿತ್​ ಲಂಕೇಶ್ ಒಂದು ಬಯೋಪಿಕ್​ ಮಾಡಿದ್ದು ಮತ್ತು ಆ ಚಿತ್ರ ಇದೇ ಕ್ರಿಸ್ಮಸ್​ಗೆ ಬಿಡುಗಡೆಯಾಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಅದಕ್ಕೂ ಮುನ್ನ ಭಾನುವಾರ ಸಂಜೆ, ಅಶೋಕ ಹೋಟೆಲ್​ನಲ್ಲಿ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಖುದ್ದು ಶಕೀಲಾ ಅವರು ಹಾಜರಿದ್ದು ಚಿತ್ರತಂಡಕ್ಕೆ ಶುಭಕೋರಿದ್ದಾರೆ.

    ಇದನ್ನೂ ಓದಿ: ಆಹಾದಲ್ಲಿ ಬೆಲ್​ಬಾಟಂ; ಡಿ. 11ರಂದು ಬಿಡುಗಡೆ

    ಇದಕ್ಕೂ ಮುನ್ನವೇ ಶಕೀಲಾ ಅವರ ಬಯೋಪಿಕ್​ ತೆರೆಯ ಮೇಲೆ ತರುವುದಕ್ಕೆ ಒಬ್ಬರು ನಿರ್ದೇಶಕಿ ಬಂದಿದ್ದರಂತೆ. ‘ಲವ್​ ಯೂ ಆಲಿಯಾ’ ಚಿತ್ರದ ಸಂದರ್ಭದಲ್ಲಿ ಒಬ್ಬ ನಿರ್ದೇಶಕಿ, ಶಕೀಲಾ ಅವರ ಆತ್ಮಚರಿತ್ರೆಯನ್ನು ಸಿನಿಮಾ ಮಾಡುವುದಕ್ಕೆ ಬಯಸಿದ್ದರಂತೆ. ಈ ವಿಷಯ ಇಂದ್ರಜಿತ್​ಗೆ ಗೊತ್ತಾಗಿ, ತಾವೇ ಈ ಚಿತ್ರ ಮಾಡುವುದಾಗಿ ಹೇಳಿದರಂತೆ. ಶಕೀಲಾ ಅವರಿಗೆ ಖುಷಿಯಾಗಿ, ಇಂದ್ರಜಿತ್​ಗೆ ಚಿತ್ರ ಮಾಡುವುದಕ್ಕೆ ಅನುಮತಿ ನೀಡಿದ್ದಾಗಿ ಅವರೇ ಹೇಳಿಕೊಂಡಿದ್ದಾರೆ.

    ಶಕೀಲಾ ಅವರ ಆತ್ಮಚರಿತ್ರೆಯನ್ನು ಆಧರಿಸಿ ಈ ಚಿತ್ರ ಮಾಡಲಾಗಿದೆಯಾದರೂ, ಚಿತ್ರಕ್ಕಾಗಿ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆಯಂತೆ. ಈ ವಿಷಯ ಶಕೀಲಾ ಅವರಿಗೂ ಗೊತ್ತಿದೆ ಮತ್ತು ಅದಕ್ಕೆ ಅವರ ಒಪ್ಪಿಗೆ ಇದೆ. ‘ಮನರಂಜನೆಯ ದೃಷ್ಟಿಯಿಂದ ಒಂದಷ್ಟು ಅಂಶಗಳನ್ನು ಸೇರಿಸಿಕೊಳ್ಳಲಾಗಿದೆ. ಏಕೆಂದರೆ, ಇಂದೊಂದು ಚಿತ್ರವಾಗಿದ್ದು, ಜನರಿಗೆ ತಲುಪಬೇಕು. ಪ್ರಶಸ್ತಿ ಗಳಿಸುವುದು ಈ ಚಿತ್ರದ ಉದ್ದೇಶ ಅಲ್ಲ. ಇದರಿಂದ ನಿರ್ಮಾಪಕರಿಗೆ ಲಾಭ ಆಗಬೇಕು ಎಂಬುದು ನನ್ನ ಆಸೆ. ಹಾಗಾಗಿ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡು ಈ ಚಿತ್ರ ಮಾಡಿದ್ದಾರೆ ಮತ್ತು ಏನೆಲ್ಲಾ ಮಾಡಿದ್ದಾರೆ ಎನ್ನುವುದನ್ನು ಇಂದ್ರಜಿತ್​ ನನಗೆ ವಿವರಿಸಿದ್ದಾರೆ’ ಎನ್ನುತ್ತಾರೆ ಶಕೀಲಾ.

    ಇದನ್ನೂ ಓದಿ: ಆರ್​ಆರ್​ಆರ್​ನಲ್ಲಿ ಆಮೀರ್ ಖಾನ್​!

    ಇನ್ನು ಈ ಚಿತ್ರದಲ್ಲಿ ಶಕೀಲಾ ಅವರ ಪಾತ್ರವನ್ನು ಬಾಲಿವುಡ್​ ನಟಿ ರಿಚಾ ಚಡ್ಡಾ ನಿರ್ವಹಿಸಿದ್ದಾರೆ ಮತ್ತು ಅವರ ಜತೆಗೆ ತಮ್ಮ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರಂತೆ ಶಕೀಲಾ. ‘ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಹಲವು ಭಾರಿ ಭೇಟಿ ನೀಡಿದ್ದೇನೆ. ಅದಕ್ಕೂ ಮುನ್ನ ರಿಚಾ ಜತೆಗೆ ಸಾಕಷ್ಟು ಸಮಯ ಕಳೆದು ನನ್ನ ಬಗ್ಗೆ ಹೇಳಿಕೊಂಡಿದ್ದೇನೆ. ಬೋಲ್ಡ್​ ದೃಶ್ಯಗಳಲ್ಲಿ ನಾನು ಹೇಗೆ ನಟಿಸುತ್ತಿದ್ದೆ ಎಂದು ಅವರೇ ಒಮ್ಮೆ ನನ್ನನ್ನು ಕೇಳಿದ್ದರು. ಅಂತಹ ದೃಶ್ಯಗಳಲ್ಲಿ ಕುಡಿದು ನಟಿಸುತ್ತಿದ್ದಿರಾ ಎಂದು ಕೇಳಿದ್ದರು. ನಾನೆಂದು ಕುಡಿದು ನಟಿಸುತ್ತಿರಲಿಲ್ಲ. ದೃಶ್ಯಕ್ಕೆ ತಕ್ಕಂತೆ ನಟಿಸುತ್ತದೆ ಎಂದೆಲ್ಲಾ ಅವರಿಗೆ ವಿವರಿಸಿದ್ದೇನೆ’ ಎನ್ನುತ್ತಾರೆ ಶಕೀಲಾ.

    ಸಂಜನಾ ಸರಣಿ ಸಿನಿಮಾ; 2021ಕ್ಕೆ ಅರ್ಧ ಡಜನ್ ಸಿನಿಮಾ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts