More

    ಕ್ರಿಸ್ಮಸ್‌ಗೆ ಶಕೀಲಾ ಬಯೋಪಿಕ್ ಬಿಡುಗಡೆ ಗ್ಯಾರಂಟಿ!

    ಬೆಂಗಳೂರು: ಮಲಯಾಳಂ ನಟಿ ಶಕೀಲಾ ಅವರ ಜೀವನವನ್ನಾಧರಿಸಿ ಕನ್ನಡದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಾಲಿವುಡ್‌ನಲ್ಲಿ ಚಿತ್ರ ಮಾಡುತ್ತಿರುವುದು ಗೊತ್ತೇ ಇದೆ. ಸುಮಾರು ಎರಡು ವರ್ಷಗಳ ಹಿಂದೆಯೇ ಶುರುವಾದ ಈ ಚಿತ್ರವು ಇದೀಗ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಕ್ರಿಸ್ಮಸ್​ ದಿನದಂದು ಈ ಚಿತ್ರವು ದೇಶಾದ್ಯಂತ ಬಿಡುಗಡೆಯಾಗಲಿದೆ.

    ಇದನ್ನೂ ಓದಿ: ಇನ್ನೊಂದು ಕ್ರಿಕೆಟ್​ ತಂಡ ಖರೀದಿಸಿದ ಶಾರೂಖ್​ …

    ಶಕೀಲಾ ಮೂಲತಃ ಮಲಯಾಳಂ ನಟಿಯಾದರೂ, ಇಡೀ ದಕ್ಷಿಣ ಭಾರತಕ್ಕೇ ಅವರು ಚಿರಪರಿಚಿತ. ದಕ್ಷಿಣದ ಎಲ್ಲಾ ನಾಲ್ಕು ಭಾಷೆಗಳಲ್ಲೂ ಅವರು ನಟಿಸಿದ್ದಾರೆ. ‘ಮೊನಾಲಿಸಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಕೀಲಾ ಬಂದರು. ಅವರನ್ನು ಕನ್ನಡಕ್ಕೆ ಕರೆತಂದಿದ್ದು ಇಂದ್ರಜಿತ್​ ಲಂಕೇಶ್​. ಆ ನಂತರ ಇಂದ್ರಜಿತ್​ ನಿರ್ದೇಶನದ ಇನ್ನೊಂದೆರೆಡು ಚಿತ್ರಗಳಲ್ಲೂ ಶಕೀಲಾ ನಟಿಸಿದ್ದರು.

    ಇದೀಗ ಶಕೀಲಾ ಕುರಿತು ಸದ್ದಿಲ್ಲದೆ ಚಿತ್ರ ಮಾಡಿದ್ದಾರೆ ಇಂದ್ರಜಿತ್​ ಲಂಕೇಶ್​. ಶಕೀಲಾ ಪಾತ್ರದಲ್ಲಿ ಬಾಲಿವುಡ್ ನಟಿ ರಿಚಾ ಚಡ್ಢಾ ನಟಿಸುತ್ತಿರುವ ಈ ಚಿತ್ರವು ಪ್ಯಾನ್ ಇಂಡಿಯಾ ಚಿತ್ರವಾಗಲಿದ್ದು, ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವು ಹಿಂದಿಯಲ್ಲಿ ತಯಾರಾಗಿದ್ದು, ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲಿ ಡಬ್​ ಆಗಿ ಬಿಡುಗಡೆಯಾಗುತ್ತಿದೆ.

    ಇದನ್ನೂ ಓದಿ: ಕುಮಟಾದಲ್ಲಿ ‘ರಾಜವೀರ ಮದಕರಿ ನಾಯಕ’; ಎರಡನೇ ಹಂತದ ಶೂಟಿಂಗ್​ಗೆ ಲೊಕೇಷನ್​ ಫಿಕ್ಸ್

    ರಿಚಾ ಜತೆಗೆ ಪಂಕಜ್ ತ್ರಿಪಾಠಿ, ಎಸ್ತರ್ ನರೋನ್ಹಾ, ರಾಜೀವ್ ಪಿಳ್ಳೆ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಕನ್ನಡದ ವೀರ್ ಸಮರ್ಥ್ ಜತೆಗೆ ಹಿಂದಿಯ ಮೀತ್ ಬ್ರದರ್ಸ್‌ ಸಂಗೀತ ಸಂಯೋಜಿಸಿದ್ದಾರೆ.

    ಹೊಂಬಾಳೆ ಫಿಲಂಸ್​ ನಿರ್ಮಾಣದ ಚಿತ್ರ ಯಾವುದು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts