More

    ಸೆರೇನಾ ವಿಲಿಯಮ್ಸ್ ಮನೆಯಲ್ಲೇ ಟೆನಿಸ್ ಕೋರ್ಟ್ ನಿರ್ಮಾಣ!

    ನ್ಯೂಯಾರ್ಕ್: ಕರೊನಾ ಹಾವಳಿಯ ನಡುವೆಯೂ ಆಗಸ್ಟ್ 31ರಿಂದ ಪ್ರೇಕ್ಷಕರಿಲ್ಲದೆ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಆಯೋಜನೆಗೆ ಅಮೆರಿಕ ಸಿದ್ಧವಾಗುತ್ತಿದೆ. ಈಗಾಗಲೆ ವಿಶ್ವದ ಕೆಲ ಪ್ರಮುಖ ಟೆನಿಸ್ ತಾರೆಯರು ಈ ಟೂರ್ನಿಯಲ್ಲಿ ಆಡಲು ಹಿಂದೇಟು ಹಾಕುತ್ತಿದ್ದರೆ, ದಾಖಲೆಯ 24ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿರುವ ಆತಿಥೇಯ ಅಮೆರಿಕದ ತಾರೆ ಸೆರೇನಾ ವಿಲಿಯಮ್ಸ್, ಮನೆಯಲ್ಲೇ ಟೆನಿಸ್ ಕೋರ್ಟ್ ನಿರ್ಮಿಸಿ ಅಭ್ಯಾಸ ನಡೆಸಲಿದ್ದಾರೆ.

    ಇದನ್ನೂ ಓದಿ: ಶ್ರೀಶಾಂತ್‌ಗೆ 2021ರ ಐಪಿಎಲ್, 2023ರ ವಿಶ್ವಕಪ್ ಆಡುವಾಸೆ!

    ‘ನ್ಯೂಯಾರ್ಕ್‌ಗೆ ಮರಳಿ 2020ರ ಯುಎಸ್ ಓಪನ್ ಆಡಲು ಕಾತರದಿಂದ ಕಾಯುತ್ತಿದ್ದೇನೆ’ ಎಂದು 6 ಬಾರಿಯ ಯುಎಸ್ ಓಪನ್ ಚಾಂಪಿಯನ್ ಸೆರೇನಾ ಹೇಳಿದ್ದಾರೆ. ಜತೆಗೆ ಈ ವರ್ಷದ ಯುಎಸ್ ಓಪನ್ ಟೂರ್ನಿಯನ್ನು ಆಡಲಾಗುವ ಟರ್‌ನಲ್ಲೇ ತಮ್ಮ ಮನೆಯ ಆವರಣದಲ್ಲಿ ಟೆನಿಸ್ ಕೋರ್ಟ್ ಸಿದ್ಧಗೊಳ್ಳುತ್ತಿರುವುದನ್ನು 38 ವರ್ಷದ ಸೆರೇನಾ ಹೇಳಿಕೊಂಡಿದ್ದಾರೆ.

    ಸೆರೇನಾ ವಿಲಿಯಮ್ಸ್ ಮನೆಯಲ್ಲೇ ಟೆನಿಸ್ ಕೋರ್ಟ್ ನಿರ್ಮಾಣ!

    1978ರ ಬಳಿಕ ಮೊದಲ ಬಾರಿಗೆ ಯುಎಸ್ ಓಪನ್ ಕೋರ್ಟ್‌ನ ಟರ್ ಸಿದ್ಧಪಡಿಸುವ ಕಂಪನಿಯನ್ನು ಬದಲಾಯಿಸಲಾಗಿದೆ. ಡೆಕೋ ಟರ್‌ನಿಂದ ಲೇಕೋಲ್ಡ್ ಕಂಪನಿಗೆ ಈ ಬಾರಿ ಗುತ್ತಿಗೆ ನೀಡಲಾಗಿದೆ. ಲೇಕೋಲ್ಡ್​ ಕಂಪನಿಯಿಂದಲೇ ಸೆರೇನಾ ಅವರ ಫ್ಲೋರಿಡಾದ ಮನೆಯ ಆವರಣದಲ್ಲಿ ಹೊಸ ಟೆನಿಸ್​ ಕೋರ್ಟ್ ಸಿದ್ಧಗೊಳ್ಳುತ್ತಿದೆ. ಯುಎಸ್ ಓಪನ್‌ಗೆ ಪೂರ್ವಭಾವಿಯಾಗಿ ಅವರು ಅಲ್ಲೇ ಅಭ್ಯಾಸ ನಡೆಸಲಿದ್ದಾರೆ. ಇದು ಸೆರೇನಾಗೆ ಟೂರ್ನಿಯಲ್ಲಿ ಆಡಲಿರುವ ಇತರ ಆಟಗಾರ್ತಿಯರಿಗಿಂತ ಮೇಲುಗೈ ಒದಗಿಸುವ ಸಾಧ್ಯತೆ ಇದೆ.

    ಇದನ್ನೂ ಓದಿ: ಸಚಿನ್ ಔಟಾಗದಿದ್ದರೂ ಔಟ್ ತೀರ್ಪು ನೀಡಿದ್ದ ಅಂಪೈರ್ ಯಾರು ಗೊತ್ತೇ?

    ಯುಎಸ್ ಓಪನ್ ಕೋರ್ಟ್‌ಗಳ ಟರ್ ಬದಲಾಗುತ್ತಿರುವುದರಿಂದ ಹೆಚ್ಚಿನ ಆಟಗಾರ್ತಿಯರಿಗೆ ಈ ಬಾರಿ ಅದಕ್ಕೆ ಹೊಂದಿಕೊಳ್ಳಲು ಹೆಚ್ಚಿನ ಸಮಯ ಲಭಿಸುವುದಿಲ್ಲ. ಆದರೆ ಸೆರೇನಾ ಟೂರ್ನಿಗೆ ಪೂರ್ವಭಾವಿಯಾಗಿ 2 ತಿಂಗಳ ಕಾಲ ಇದೇ ಟರ್‌ನ ಕೋರ್ಟ್‌ನಲ್ಲಿ ಅಭ್ಯಾಸ ನಡೆಸುವ ಅವಕಾಶ ಪಡೆದಿದ್ದಾರೆ. ಕಳೆದೆರಡು ವರ್ಷಗಳ ಯುಎಸ್ ಓಪನ್ ಟೂರ್ನಿಯ ಫೈನಲ್‌ಗಳಲ್ಲಿ ಅವರು ಕ್ರಮವಾಗಿ ಯುವ ಆಟಗಾರ್ತಿಯರಾದ ನವೋಮಿ ಒಸಾಕ ಮತ್ತು ಬಿಯಾಂಕಾ ಆಂಡ್ರೆಸ್ಕು ವಿರುದ್ಧ ಸೋಲು ಕಂಡಿದ್ದರು.

    VIDEO| ಹಾರ್ದಿಕ್ ಪಾಂಡ್ಯ ವರ್ಕೌಟ್‌ಗೆ ಬಾಲಿವುಡ್ ನಟಿಯರು ಬೌಲ್ಡ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts