More

    ಶ್ರೀಶಾಂತ್‌ಗೆ 2021ರ ಐಪಿಎಲ್, 2023ರ ವಿಶ್ವಕಪ್ ಆಡುವಾಸೆ!

    ಕೊಚ್ಚಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ 7 ವರ್ಷಗಳ ನಿಷೇಧ ಶಿಕ್ಷೆ ಮುಗಿಸಿ ಸೆಪ್ಟೆಂಬರ್‌ನಲ್ಲಿ ಮರಳಿ ಕಣಕ್ಕಿಳಿಯಲು ಸಜ್ಜಾಗಿರುವ ಕೇರಳದ ವೇಗಿ ಎಸ್. ಶ್ರೀಶಾಂತ್, 2021ರ ಐಪಿಎಲ್ ಟೂರ್ನಿಯಲ್ಲಿ ಆಡುವ ಮತ್ತು 2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಕನಸು ಹಂಚಿಕೊಂಡಿದ್ದಾರೆ. ಆದರೆ, ಈಗ 37 ವರ್ಷದವರಾಗಿರುವ ಶ್ರೀಶಾಂತ್​ಗೆ 2023ರ ವೇಳೆಗೆ 40 ವರ್ಷವಾಗಿರುತ್ತದೆ. ಹೀಗಾಗಿ ಅವರ ಕನಸು ನಿಜಕ್ಕೂ ಈಡೇರುವುದೇ ಎಂಬ ಕೌತುಕ ಅಭಿಮಾನಿಗಳದ್ದಾಗಿದೆ.

    ‘ನನಗಿನ್ನೂ ನಂಬಿಕೆ ಇದೆ. 2023ರ ವಿಶ್ವಕಪ್‌ನಲ್ಲಿ ನಾನು ಆಡಬಲ್ಲೆ. ನಾನಿದನ್ನು ಬಲವಾಗಿ ನಂಬಿದ್ದೇನೆ’ ಎಂದು ಶ್ರೀಶಾಂತ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 2023ರಲ್ಲಿ ಏಕದಿನ ವಿಶ್ವಕಪ್ ಟೂರ್ನಿ ಭಾರತದ ಆತಿಥ್ಯದಲ್ಲೇ ನಡೆಯಲಿದೆ. ಅವರು ಭಾರತದಲ್ಲೇ ನಡೆದ 2011ರ ವಿಶ್ವಕಪ್‌ನಲ್ಲಿ ಆಡಿ ಚಾಂಪಿಯನ್ ತಂಡದ ಭಾಗವಾಗಿದ್ದರು.

    ಇದನ್ನೂ ಓದಿ: VIDEO| ಹಾರ್ದಿಕ್ ಪಾಂಡ್ಯ ವರ್ಕೌಟ್‌ಗೆ ಬಾಲಿವುಡ್ ನಟಿಯರು ಬೌಲ್ಡ್!

    ಮುಂಬರುವ ರಣಜಿ ಟ್ರೋಫಿಯಲ್ಲಿ ಆಡಲು ಶ್ರೀಶಾಂತ್ ಈಗಾಗಲೆ ಸಿದ್ಧತೆ ಆರಂಭಿಸಿದ್ದು, ಕೇರಳ ಕ್ರಿಕೆಟ್ ಸಂಸ್ಥೆ ಕೂಡ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಹಸಿರು ನಿಶಾನೆ ತೋರಿದೆ. ಆದರೆ ಅವರು ಫಿಟ್ನೆಸ್ ಸಾಬೀತುಪಡಿಸಿದರಷ್ಟೇ ತಂಡದಲ್ಲಿ ಸ್ಥಾನ ನೀಡಲಾಗುವುದು ಎಂದು ಕೇರಳ ತಂಡದ ಕೋಚ್ ಟಿನು ಯಹೋನನ್ ತಿಳಿಸಿದ್ದಾರೆ.

    ‘ನನ್ನ ಹೆಚ್ಚಿನ ಕನಸುಗಳು ಅವಾಸ್ತವಿಕವಾಗಿರುತ್ತವೆ. ಹೆಚ್ಚಿನ ಕ್ರೀಡಾಪಟುಗಳು ಕೂಡ ಅವಾಸ್ತವಿಕವಾದ ಗುರಿಗಳನ್ನೇ ಹೊಂದಿರುತ್ತಾರೆ. ಆದರೆ ಇಂಥ ಅವಾಸ್ತವಿಕ ಕನಸುಗಳಿಂದಲೇ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ಶ್ರೀಶಾಂತ್ ವಿವರಿಸಿದ್ದಾರೆ. ಫಿಟ್ನೆಸ್ ಮೇಲೆ ಈಗಾಗಲೆ ಸಾಕಷ್ಟು ಗಮನ ಹರಿಸಿರುವ ಶ್ರೀಶಾಂತ್, ಅಮೆರಿಕದ ಬಾಸ್ಕೆಟ್‌ಬಾಲ್ ದಿಗ್ಗಜರಾದ ಮೈಕೆಲ್ ಜೋರ್ಡನ್ ಮತ್ತು ಕೋಬ್ ಬ್ರಿಯಾಂಟ್ ಅಂಥವರ ಮಾಜಿ ಟ್ರೇನರ್ ಟಿಮ್ ಗ್ರೋವರ್‌ರಿಂದ ತರಬೇತಿ ಪಡೆದುಕೊಂಡಿದ್ದಾರೆ.

    ಶ್ರೀಶಾಂತ್‌ಗೆ 2021ರ ಐಪಿಎಲ್, 2023ರ ವಿಶ್ವಕಪ್ ಆಡುವಾಸೆ!

    2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ವೇಳೆ ತಿಹಾರ್ ಜೈಲಿಗೂ ಹೋಗಿದ್ದ ಶ್ರೀಶಾಂತ್, ಆ ವೇಳೆ ಆತ್ಮಹತ್ಯೆಯ ಯೋಚನೆಯೂ ಬಂದಿತ್ತು ಎಂದು ಮತ್ತೊಮ್ಮೆ ಹೇಳಿಕೊಂಡಿದ್ದಾರೆ. ಅವರಿಗೆ ಬಿಸಿಸಿಐ ಮೊದಲಿಗೆ ಆಜೀವ ನಿಷೇಧ ಶಿಕ್ಷೆ ವಿಧಿಸಿದ್ದರೂ, ಸುಪ್ರೀಂ ಕೋರ್ಟ್ ಸೂಚನೆಯ ಮೇರೆ ಶಿಕ್ಷೆಯನ್ನು 7 ವರ್ಷಗಳಿಗೆ ಇಳಿಸಿತ್ತು. ನಿಷೇಧದ ಅವಧಿಯಲ್ಲಿ ಅವರು ಬಾಲಿವುಡ್, ಮಲಯಾಳಂ ಮತ್ತು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದರು. ಹಿಂದಿಯ ಬಿಗ್‌ಬಾಸ್ ಮತ್ತು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದರು.

    ಇದನ್ನೂ ಓದಿ: ಸಚಿನ್ ಔಟಾಗದಿದ್ದರೂ ಔಟ್ ತೀರ್ಪು ನೀಡಿದ್ದ ಅಂಪೈರ್ ಯಾರು ಗೊತ್ತೇ?

    2021ರ ಐಪಿಎಲ್ ಹರಾಜಿನತ್ತ ಚಿತ್ತ
    ಮುಂಬರುವ ದೇಶೀಯ ಕ್ರಿಕೆಟ್ ಋತುವಿನಲ್ಲಿ ಉತ್ತಮ ನಿರ್ವಹಣೆ ತೋರುವ ಮೂಲಕ ಮುಂದಿನ ವರ್ಷದ ಐಪಿಎಲ್ ಆಟಗಾರರ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆಯುವತ್ತ ಶ್ರೀಶಾಂತ್ ದೃಷ್ಟಿಹರಿಸಿದ್ದಾರೆ. ‘ನಾನು ಮತ್ತೊಮ್ಮೆ ಐಪಿಎಲ್ ಆಡುತ್ತೇನೆ ಎಂದು ಯಾವಾಗಲೂ ಹೇಳಿಕೊಂಡು ಬಂದಿದ್ದೇನೆ. ನಾನು ಮತ್ತೆ ಐಪಿಎಲ್‌ನಲ್ಲಿ ಪಂದ್ಯ ಗೆದ್ದುಕೊಡುವ ಬೌಲರ್ ಆಗಿ ಆಡುವೆ’ ಎಂದು ಶ್ರೀಶಾಂತ್ ಹೇಳಿದ್ದಾರೆ. 2013ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದಾಗ ಅವರು ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿದ್ದರು. ಅದಕ್ಕೆ ಮುನ್ನ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಕೊಚ್ಚಿ ಟಸ್ಕರ್ಸ್‌ ತಂಡಗಳ ಪರ ಐಪಿಎಲ್‌ನಲ್ಲಿ ಆಡಿದ್ದರು.

    PHOTOS | ಕ್ರೀಡಾತಾರೆಯರಿಂದ ಯೋಗ ದಿನಾಚರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts