More

    ಶಾಲಾ ಶುಲ್ಕ ರದ್ದತಿಗೆ ಕೋರಿದ್ದ ಅರ್ಜಿ- ಸುಪ್ರೀಂಕೋರ್ಟ್‌ ಹೇಳಿದ್ದೇನು?

    ನವದೆಹಲಿ: ಅನುದಾನರಹಿತ ಖಾಸಗಿ ಶಾಲೆಗಳ ಮೂರು ತಿಂಗಳ ಶುಲ್ಕವನ್ನು ಮನ್ನಾ ಮಾಡುವಂತೆ ಕೋರಿ ಹಲವಾರು ಪಾಲಕರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾ ಮಾಡಿದೆ. ಪ್ರತಿಯೊಂದು ರಾಜ್ಯದ, ಪ್ರತಿಯೊಂದು ಶಾಲೆಯ ಪರಿಸ್ಥಿತಿಯು ಭಿನ್ನ ಭಿನ್ನವಾಗಿರುವ ಹಿನ್ನೆಲೆಯಲ್ಲಿ, ಸಂಬಂಧಿಸಿದ ಹೈಕೋರ್ಟ್‌ ಮೊರೆ ಹೋಗುವಂತೆ ಕೋರ್ಟ್‌ ಹೇಳಿದೆ.

    ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಶಾಲೆ ನಡೆಯದ ದಕಾರಣ, ಏಪ್ರಿಲ್‌ ತಿಂಗಳಿನಿಂದ ಜೂನ್‌ ತಿಂಗಳವರೆಗಿನ ಶುಲ್ಕವನ್ನು ಮನ್ನಾ ಮಾಡಲು ಶಾಲೆಗಳಿಗೆ ಆದೇಶಿಸುವಂತೆ ಪಾಲಕರು ಕೋರಿದ್ದರು. ಶಾಲೆಯು ನಿಯಮಿತವಾಗಿ ಶುರುವಾಗುವವರೆಗೆ ಶುಲ್ಕವನ್ನು ಪಡೆಯದಂತೆ ಎಲ್ಲಾ ಶಾಲೆಗಳಿಗೂ ಆದೇಶಿಸುವಂತೆ ಎಂಟು ರಾಜ್ಯಗಳ ಪಾಲಕರು ಒಟ್ಟಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ.

    ಇದನ್ನೂ ಓದಿ: ಆನ್‌ಲೈನ್‌ ಮೂಲಕ ಭಯೋತ್ಪಾದಕರ ನೇಮಕಾತಿ, ತರಬೇತಿ- ಇಲ್ಲಿದೆ ಸ್ಫೋಟಕ ಮಾಹಿತಿ!

    ತಾವೆಲ್ಲಾ ಏಪ್ರಿಲ್‌ ತಿಂಗಳಿನಿಂದ ಶಾಲಾ ಶುಲ್ಕವನ್ನು ನೀಡಲಿಲ್ಲ. ಆದರೆ ಶಾಲೆಗಳು ಶುಲ್ಕವನ್ನು ಕೇಳುತ್ತಿವೆ. ನಾವೆಲ್ಲಾ ಶುಲ್ಕ ನೀಡದ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಯಿಂದ ತೆಗೆದುಹಾಕುವ ಸಾಧ್ಯತೆ ಇದೆ. ಆದ್ದರಿಂದ ನಮ್ಮ ಮಕ್ಕಳನ್ನು ಶಾಲೆಯಿಂದ ತೆಗೆಯದಂತೆ ಶಾಲೆಗಳಿಗೆ ಆದೇಶಿಸಬೇಕು ಹಾಗೂ ಶುಲ್ಕವನ್ನು ಅವರು ಪಡೆಯದಂತೆ ನಿರ್ದೇಶಿಸಬೇಕು ಎಂದು ಅವರು ಕೋರಿದ್ದರು.

    ಲಾಕ್‌ಡೌನ್‌ ಅವಧಿಯಲ್ಲಿ, ಅನೇಕ ಮಂದಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ, ಇನ್ನು ಕೆಲವರಿಗೆ ಕಚೇರಿಗಳಲ್ಲಿ ಸಂಬಳ ಕೊಟ್ಟಿಲ್ಲ, ಕೊಟ್ಟರೂ ಸಂಬಳದಲ್ಲಿ ಕಡಿತ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಪಾಲಕರಿಗೆ ಶುಲ್ಕ ನೀಡಲು ಸಾಧ್ಯವಾಗುತ್ತಿಲ್ಲ ಎಂದೂ ಅರ್ಜಿಯಲ್ಲಿ ಹೇಳಲಾಗಿತ್ತು.

    ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡ ಕೋರ್ಟ್‌, ಅರ್ಜಿಯಲ್ಲಿ ತಿಳಿಸಿರುವುದು ಸರಿಯಾಗಿದ್ದರೂ, ಪ್ರತಿಯೊಂದು ರಾಜ್ಯದ, ಪ್ರತಿಯೊಂದು ಶಾಲೆಯ ಪರಿಸ್ಥಿತಿ ವಿಭಿನ್ನವಾಗಿರುತ್ತದೆ. ಅದ್ದರಿಂದ ಒಂದು ವೇಳೆ ಶುಲ್ಕದ ಕುರಿತು ಏನಾದರೂ ಸಮಸ್ಯೆ ಇದ್ದರೆ ಸಂಬಂಧಿತ ಹೈಕೋರ್ಟ್‌ಗೆ ಹೋಗುವಂತೆ ಹೇಳಿದೆ.

    ಮಗಳಿಗೆ ಹಿಂಸೆ ಕೊಟ್ಟು ತಪ್ಪಿಸಿಕೊಂಡವರ ಮೂಲ ಹುಡುಕಿ ಹೊರಟ ಅಪ್ಪನೊಬ್ಬನ ರೋಚಕ ಘಟನೆಯಿದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts