More

    ಇನಾಂ ರದ್ದತಿಯಿಂದ ರೈತರ ಜೀವನದಲ್ಲಿ ಸುಧಾರಣೆ

    ಕುರುಗೋಡು: ರೈತರ ಪಾಣಿಯಲ್ಲಿನ ಇನಾಂ ರದ್ದತಿ ಮಾಡಿದರೆ ರೈತರ ಜೀವನಕ್ಕೆ ಆಧಾರ ಸಿಕ್ಕಂತೆ ಅಗುವುದು ಎಂದು ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ ಅಭಿಪ್ರಾಯ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಮಾಜಿ ಸಚಿವ ಡಿ.ಬಿ.ಇನಾಂದಾರ್ ಇನ್ನಿಲ್ಲ…

    ಜಿಲ್ಲಾಡಳಿತ ಬಳ್ಳಾರಿ ಹಾಗೂ ತಾಲೂಕು ಆಡಳಿತ ಕುರುಗೋಡು ಸಂಯುಕ್ತಾಶ್ರಯದಲ್ಲಿ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಇನಾಂ ರದ್ದತಿ ಕಾಯ್ದೆಯಡಿ ಹಕ್ಕುಪತ್ರವಿತರಣಾ ಕಾರ್ಯಕ್ರಮದಲ್ಲಿ ರೈತರಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದರು.

    ಕುರುಗೋಡು ತಾಲೂಕಿನ ರೈತರಿಗೆ ಇನಾಂ ರದ್ದತಿ ಮಾಡಿ ಹಕ್ಕುಪತ್ರ ವಿತರಿಸುವುದು ರಾಜ್ಯದಲ್ಲಿ ಪ್ರಥಮ. ಪಾಣಿಯಲ್ಲಿರುವ ಇನಾಂ ರದ್ದುಪಡಿಸಲು ಹಲವಾರು ವರ್ಷಗಳಿಂದ ಕಛೇರಿಗಳಿಗೆ ಅಲೆದಾಡಿ ಬಹಳಷ್ಟು ರೈತರು ಶ್ರಮಪಟ್ಟಿದ್ದರು.

    ಜತೆಗೆ ಸರ್ಕಾರದ ಸಾಲ ಸೇರಿ ಇತರೆ ಸೌಲಭ್ಯಗಳು ರೈತರಿಗೆ ಸಿಗುತ್ತಿರಲಿಲ್ಲ. ಅದಕ್ಕಾಗಿ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಈಗ ಇನಾಂ ರದ್ದುಪಡಿಸಿ ಅವರಿಗೆ ಹಕ್ಕು ಪತ್ರ ವಿತರಿಸುವುದು ಸಂತಸ ತಂದಿದೆ ಎಂದರು.

    ಕುರುಗೋಡು ತಹಶೀಲ್ದಾರ್ ಕೆ.ರಾಘವೇಂದ್ರರಾವ್ ಮಾತನಾಡಿ, ಕೋಳೂರು ಹೋಬಳಿ ವ್ಯಾಪ್ತಿಯಲ್ಲಿ ಇನಾಂ ರದ್ದತಿಗಾಗಿ 2017 ರೈತರಿಂದ ಅರ್ಜಿ ಸಲ್ಲಿಕೆಯಾಗಿದ್ದವು. ಅದರಲಿ,್ಲ 724 ಅರ್ಜಿಗಳಲ್ಲಿ ಇನಾಂ ರದ್ದುಪಡಿಸಲಾಗಿದೆ.

    ಮತ್ತು ಕುರುಗೋಡು ಹೋಬಳಿ ವ್ಯಾಪ್ತಿಯಲ್ಲಿ ಇನಾಂ ರದ್ದತಿಗಾಗಿ 1687 ಅರ್ಜಿಸಲ್ಲಿಕೆ ಯಾಗಿದ್ದವು. ಅದರಲ್ಲಿ 712 ಅರ್ಜಿಗಳಲ್ಲಿ ಇನಾಂ ರದ್ದುಪಡಿಸಿ ರೈತರಿಗೆ ಹಕ್ಕು ಪತ್ರ ನಿಡಲಾಗಿದೆ. ಉಳಿದ ಅರ್ಜಿಗಳನ್ನು ಮುಂದಿನ ದಿನಗಳಲ್ಲಿ ಪರಿಶೀಲಿಸಿ ಅವರಿಗೆ ನಿಡಲಾಗುವುದು ಎಂದು ಭರವಸೆ ನೀಡಿದರು.

    ಚೆಕ್‌ವಿತರಣೆ : ಇತ್ತೀಚಿಗೆ ಗುತ್ತಿಗನೂರು ಗ್ರಾಮದ ಚೌಡಿಕೆ ಮಲ್ಲಿಕಾರ್ಜುನ ಎಂಬ ರೈತನ ಮಕ್ಕಳು ಹರಿಯುವ ಹಳ್ಳದಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದರಿಂದ ಮುಖ್ಯಮಂತ್ರಿ ನಿಧಿಯಿಂದ 4 ಲಕ್ಷ ಮೊತ್ತದ ಚೆಕ್‌ನ್ನು ಚೌಡಿಕೆ ಮಲ್ಲಿಕಾರ್ಜನಗೆ ಶಾಸಕ ಜೆಎನ್.ಗಣೇಶ ವಿತರಿಸಿದರು.

    ಬಳ್ಳಾರಿ ತಹಶೀಲ್ದಾರ್ ಗುರುರಾಜ ಚೆಲುವಾದಿ, ಗ್ರೇಡ್-2 ತಹಶೀಲ್ದಾರ್ ಮಲ್ಲೇಶಪ್ಪ, ತಾಪಂ. ಇಒ.ನಿರ್ಮಲ, ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮೀ, ಕುರುಗೋಡು ಪಿಎಸ್‌ಐ. ಸುಪ್ರಿತ್ ವಿರುಪಾಕ್ಷಪ್ಪ, ಕುರುಗೋಡು ಉಪ-ತಹಶೀಲ್ದಾರ್ ರಾಜಶೇಖರ್, ವಿಜಯ ಕುಮಾರ್, ಶಿವರತ್ನಮ್ಮ, ಸುರೇಶ, ಆಹಾರ ನೀರೀಕ್ಷಕ ಮಲ್ಲಿಕಾರ್ಜನ, ಗ್ರಾಮಲೆಕ್ಕಾಧಿಕಾರಿ ಯಮನೂರಪ್ಪ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts