More

    ಅ.19 ರಿಂದ ಈ ಮೂರು ರಾಜ್ಯಗಳಲ್ಲಿ ಶಾಲಾ-ಕಾಲೇಜು ಆರಂಭ

    ನವದೆಹಲಿ: ಕರೊನಾ ಸೋಂಕಿನ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ನಡುವೆ ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದು. ಹಾಗಾಗಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ, ಅಲ್ಲಿನ ಪರಿಸ್ಥಿತಿ ನೋಡಿಕೊಂಡು ದೇಶಾದ್ಯಂತ ಶಾಲೆಗಳನ್ನು ತೆರೆಯಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
    ಇದರ ಬೆನ್ನಲ್ಲೇ ಉತ್ತರ ಪ್ರದೇಶ, ಪಂಜಾಬ್​ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಅ.19ರಿಂದ ಶಾಲೆಗಳನ್ನು ತೆರೆಯಲಾಗುತ್ತಿದೆ. 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮದೊಂದಿಗೆ ತರಗತಿ ನಡೆಸಲು ರಾಜ್ಯಗಳು ಸಿದ್ಧವಾಗಿವೆ.

    ಕೇವಲ ಶೇ.50 ವಿದ್ಯಾರ್ಥಿಗಳನ್ನು ತರಗತಿಗೆ ಸೇರಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಎರಡು ಶಿಫ್ಟ್​​​ನಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲಾಗುವುದು. ದೈಹಿಕ ಅಂತರ, ಮಾಸ್ಕ್​, ಸ್ಯಾನಿಟೈಸರ್​ ಸೇರಿದಂತೆ ಎಲ್ಲ ಮುಂಜಾಗ್ರತಾ ಕ್ರಮಗಳಿಗಾಗಿ ಎಸ್​ಒಪಿ ತಯಾರಿಸಲಾಗಿದ್ದು, ಕಟ್ಟುನಿಟ್ಟಿನಿಂದ ಅನುಸರಿಸುವುದಾಗಿ ತಿಳಿಸಲಾಗಿದೆ.

    ಪಂಜಾಬ್​ನಲ್ಲಿ ಪ್ರತಿದಿನ ಮೂರು ಗಂಟೆ ಮಾತ್ರವೇ ತರಗತಿ ನಡೆಸಲಾಗುವುದು. ಆನ್​ಲೈನ್​ ತರಗತಿಗಳೂ ಇರಲಿದ್ದು, ಆಯ್ಕೆ ಪೋಷಕರದ್ದಾಗಿರುತ್ತದೆ. ತರಗತಿಗೆ ಹಾಜರಾಗುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಪೋಷಕರಿಂದ ಅನುಮತಿ ಪತ್ರ ತರಬೇಕು ಎಂದು ಸೂಚಿಸಲಾಗಿದೆ.

    ಸೋಂಕಿನ ನಿಯಂತ್ರಣದಲ್ಲಿ ಯಶಸ್ವಿಯಾಗಿರುವ ಸಿಕ್ಕಿಂನಲ್ಲಿಯೂ ಶಾಲೆಗಳನ್ನು ತೆರೆಯಲಾಗಿದೆ. ಈ ವರ್ಷ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಬೇರೆಲ್ಲ ರಜೆಯನ್ನು ರದ್ದು ಮಾಡಲಾಗಿದೆ. 2021ರ ಫೆಬ್ರವರಿ 13ಕ್ಕೆ ಶೈಕ್ಷಣಿಕ ವರ್ಷ ಮುಕ್ತಾಯವಾಗಲಿದ್ದು, ಫೆಬ್ರವರಿ 15ಕ್ಕೆ ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುತ್ತದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

    ಸದ್ಯಕ್ಕೆ 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾಗಿದ್ದು, ಪೋಷಕರ ಲಿಖಿತ ಅನುಮತಿಯೊಂದಿಗೆ ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ಹಾಜರಾಗಬಹುದು. 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ನವೆಂಬರ್​ 2ರಿಂದ, 3,4 ಮತ್ತು ಐದನೇ ತರಗತಿ ವಿದ್ಯಾರ್ಥಿಗಳಿಗೆ ನವೆಂಬರ್​ 23ರಿಂದ ತರಗತಿ ಆರಂಭಿಸುವುದಾಗಿ ತಿಳಿಸಲಾಗಿದೆ.

    ಗಾಯಗೊಂಡ ಲಕ್ಷ್ಮೀ ಫೋಟೋ ಹಾಕಿ ಅಸಮಾಧಾನ ಹೊರಹಾಕಿದ್ರು ನಟ ದರ್ಶನ್​ ಪತ್ನಿ!

    ಕೆಲಸವಿದೇ ಜೀವನ ಕಷ್ಟ; ಸಚಿವ ಶ್ರೀರಾಮುಲು ಅವರ ಮುಂದೆ ಅಳಲು ತೋಡಿಕೊಂಡ ಖಾಸಗಿ ಶಾಲೆ ಶಿಕ್ಷಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts