More

  ಬಸ್ ಸೌಲಭ್ಯವಿಲ್ಲದೆ ತರಗತಿಗಳಿಗೆ ಗೈರು

  ಮಾನ್ವಿ: ಶಾಲೆ-ಕಾಲೇಜಿಗೆ ಹೋಗಲು ಸಮರ್ಪಕ ಬಸ್ ಸೌಲಭ್ಯ ಇಲ್ಲ ಎಂದು ಆರೋಪಿಸಿ ಹಿರೇಕೋಟ್ನೆಕಲ್-ಭೋಗಾವತಿ ಗ್ರಾಮದ ವಿದ್ಯಾರ್ಥಿಗಳು ಪಾಲಕರು, ಗ್ರಾಮದ ಪ್ರಮುಖರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳ ನೇತೃತ್ವದಲ್ಲಿ ಶನಿವಾರ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

  ಹಿರೇಕೋಟ್ನೆಕಲ್-ಭೋಗಾವತಿ ಸುತ್ತಮುತ್ತಲಿನ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಮಾನ್ವಿ, ನೀರಮಾನ್ವಿ, ಪೋತ್ನಾಳ ಮತ್ತು ಸಿಂಧನೂರಿನ ಶಾಲೆ-ಕಾಲೇಜುಗಳಲ್ಲಿ ಓದುತ್ತಿದ್ದಾರೆ. ಬೆಳಗ್ಗೆ 8 ರಿಂದ 10 ರವರೆಗೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸುವಂತೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ. ಇದರಿಂದಾಗಿ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ ಎಂದು ದೂರಿದರು.

  ಸಾರಿಗೆ ಘಟಕ ವ್ಯವಸ್ಥಾಪಕ ರಾಮನಗೌಡ ಮಾತನಾಡಿ, ಶಕ್ತಿ ಯೋಜನೆಯಡಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿದ್ದರೂ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಬಸ್‌ಗಳ ಸಂಚಾರ ಆರಂಭ ಹಾಗೂ ಚಾಲಕ, ನಿರ್ವಾಹಕರ ನೇಮಕಕ್ಕೆ ಸರ್ಕಾರ ಮುಂದಾಗಲಿದ್ದು ಆಗ ಸಮಸ್ಯಗೆ ಪರಿಹಾರ ದೊರೆಯಲಿದೆ ಎಂದರು.

  ಸಾರಿಗೆ ಘಟಕ ವ್ಯಾಪ್ತಿಯಲ್ಲಿನ 60 ಮಾರ್ಗಗಳಲ್ಲಿ 34 ಬಸ್‌ಗಳಿಂದಲೇ ಸಂಚಾರ ವ್ಯವಸ್ಥೆ ಮಾಡಬೇಕಾಗಿದೆ. ಮಾನ್ವಿ-ಸಿಂಧನೂರು ಮಾರ್ಗದಲ್ಲಿ 2 ಬಸ್‌ಗಳನ್ನು ಓಡಿಸಲಾಗುವುದು. ಹಿರೇಕೊಟ್ನೆಕಲ್-ಭೋಗಾವತಿ ಗ್ರಾಮದಲ್ಲಿ ಸಾರಿಗೆ ನಿಯಂತ್ರಕರನ್ನು ನೇಮಕ ಮಾಡಿ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ವಿಭಾಗಗಳ ಬಸ್‌ಗಳಲ್ಲಿ ವಿದ್ಯಾರ್ಥಿಗಳ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುವುದು ಸಾರಿಗೆ ಘಟಕ ವ್ಯವಸ್ಥಾಪಕ ಭರವಸೆ ನೀಡಿದರು.
  ಪ್ರಮುಖರಾದ ರಾಘವೇಂದ್ರ ನಾಯಕ, ಶಂಭನಗೌಡ, ಚನ್ನಯ್ಯಸ್ವಾಮಿ, ಶ್ರೀನಿವಾಸ ನಾಯಕ, ದತ್ತಾತ್ರೇಯ ವಕೀಲ, ವೆಂಕೋಬ, ರಾಮುನಾಯಕ, ಬಜಯ್ಯ ನಾಯಕ, ಬಸವರಾಜ, ಅಮರೇಶ ನಾಯಕ, ರಾಜಾಸಾಬ್, ರವಿ, ವೀರೇಶ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts