More

  ಸೆನ್ಸಾರ್​ ಅಂಗಳದಲ್ಲಿ ಸತೀಶ್​ ನೀನಾಸಂ, ರಚಿತಾ ರಾಮ್ ‘ಮ್ಯಾಟ್ನಿ’

  ವಿಜಯವಾಣಿ ಸುದ್ದಿಜಾಲ ಬೆಂಗಳೂರು

  ‘ಅಯೋಗ್ಯ’ ಚಿತ್ರದ ಯಶಸ್ಸಿನ ಬಳಿಕ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಮತ್ತೆ ಒಟ್ಟಿಗೆ ನಟಿಸಿರುವ ಸಿನಿಮಾ ‘ಮ್ಯಾಟ್ನಿ’. ಮನೋಹರ್ ಕಾಂಪಳ್ಳಿ ಆ್ಯಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಪೂರ್ಣಗೊಳಿಸಿ ಸದ್ಯ ಸೆನ್ಸಾರ್ ಹಂತದಲ್ಲಿದೆ. ‘ಅಯೋಗ್ಯ’ ಗ್ರಾಮೀಣ ಸೊಗಡಿನ ಚಿತ್ರವಾಗಿದ್ದರೆ, ‘ಮ್ಯಾಟ್ನಿ’ ನಗರದಲ್ಲಿ ನಡೆಯುವ ವಿಭಿನ್ನ ಲವ್‌ಸ್ಟೋರಿ.

  ಇದನ್ನೂ ಓದಿ : ‘ಲಿಯೋ’: 100ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರೀ-ರಿಲೀಸ್​ ಆಗಲಿದೆ ದಳಪತಿ ವಿಜಯ್​ ಚಿತ್ರ?

  ಸೆನ್ಸಾರ್​ ಅಂಗಳದಲ್ಲಿ ಸತೀಶ್​ ನೀನಾಸಂ, ರಚಿತಾ ರಾಮ್ 'ಮ್ಯಾಟ್ನಿ'

  ಶ್ರೀಮಂತ ಮನೆತನದ ಹುಡುಗನ ಪಾತ್ರದಲ್ಲಿ ಸತೀಶ್ ನಟಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡದ್ದು. ಈಗಾಗಲೇ ಚಿತ್ರದ ಟೀಸರ್, ‘ಸಂಜೆ ಮೇಲೆ ೆನು ಮಾಡ್ಲ ನಿಂಗೆ’ ಎಂಬ ಸತೀಶ್, ರಚಿತಾ ನಡುವಿನ ರೊಮ್ಯಾಂಟಿಕ್ ಸಾಂಗ್ ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. ‘ಬಾರೋ ಬಾರೋ ಬಾಟಲ್ ತಾರೋ’ ಎಂದು ಸಾಗುವ ಮತ್ತೊಂದು ಪಾರ್ಟಿ ಹಾಡು ಬಿಡುಗಡೆಯಾಗುವ ಮುನ್ನ ಶೂಟಿಂಗ್ ಸಮಯದಲ್ಲಿಯೇ ಸದ್ದು ಮಾಡಿದೆ.

  ಇದನ್ನೂ ಓದಿ : BBKS10: ಸ್ನೇಹಿತರ ಮಧ್ಯೆ ಬಿರುಕು; ಮೂರು ದಿಕ್ಕಿನಲ್ಲಿ ಮೂವರ ಕಣ್ಣೀರು!

  ಸೆನ್ಸಾರ್​ ಅಂಗಳದಲ್ಲಿ ಸತೀಶ್​ ನೀನಾಸಂ, ರಚಿತಾ ರಾಮ್ 'ಮ್ಯಾಟ್ನಿ'

  ಚಿತ್ರದಲ್ಲಿ ನೀನಾಸಂ ಸತೀಶ್, ರಚಿತಾ ರಾಮ್ ಜತೆ ನಾಗಭೂಷಣ್, ಶಿವರಾಜ್ ಕೆ.ಆರ್.ಪೇಟೆ, ಪೂರ್ಣಚಂದ್ರ ಮೈಸೂರು, ದಿಗಂತ್ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನವಿರಲಿದೆ.

  ಸೆನ್ಸಾರ್​ ಅಂಗಳದಲ್ಲಿ ಸತೀಶ್​ ನೀನಾಸಂ, ರಚಿತಾ ರಾಮ್ 'ಮ್ಯಾಟ್ನಿ'
  ಸೆನ್ಸಾರ್​ ಅಂಗಳದಲ್ಲಿ ಸತೀಶ್​ ನೀನಾಸಂ, ರಚಿತಾ ರಾಮ್ 'ಮ್ಯಾಟ್ನಿ'

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts