More

    ನನಗೆ ರಾಗಿಣಿ ಯಾರೆಂದು ಗೊತ್ತಿಲ್ಲ; ಡಿಸಿಎಂ ಕಾರಜೋಳ

    ಬಾಗಲಕೋಟೆ: ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿ ಮಕ್ಕಳೇ ಇರಲಿ, ಸಾಮಾನ್ಯರ ಮಕ್ಕಳೇ ಇರಲಿ, ಅಧಿಕಾರಿಗಳ ಮಕ್ಕಳೇ ಇರಲಿ ಎಲ್ಲರಿಗೂ ದೇಶದ ಕಾನೂನು ಒಂದೇ ಎಂದ ಡಿಸಿಎಂ ಗೋವಿಂದ ಕಾರಜೋಳ, ನನ್ಗೆ ರಾಗಿಣಿ-ಪಾಗಿಣಿ ಗೊತ್ತಿಲ್ಲ. ಆದ್ರೆ ಯಾರೇ ತಪ್ಪು ಮಾಡಿದ್ರೂ ಅಂತಹವರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸುತ್ತೆ ಎಂದರು.

    ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ನಟಿ ರಾಗಿಣಿ ದ್ವಿವೇದಿ, ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಂಟಿರುವ ಪ್ರಕರಣದಡಿ ಸಿಸಿಬಿ ಬಂಧನಕ್ಕೆ ಒಳಪಟ್ಟಿದ್ದಾರೆ. ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ನನಗೆ ರಾಗಿಣಿ ಯಾರೆಂದು ಗೊತ್ತಿಲ. ಆದರೆ, ಯಾರೇ ತಪ್ಪು ಮಾಡಿದ್ರೂ, ಅಂತಹವರಿಗೆ ಕಠಿಣ ಶಿಕ್ಷೆ ವಿಧಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

    ಇದನ್ನೂ ಓದಿರಿ ‘ನಶೆ’ಯ ನಗ್ನ ಸತ್ಯ; ವಕೀಲರ ಮೊರೆ ಹೋದ ನಟಿ ಸಂಜನಾ ಗಲ್ರಾನಿ

    ಡ್ರಗ್ಸ್​ ದಂಧೆ ನಿಯಂತ್ರಣ ಬರೀ ಕಾನೂನಿಂದ ಪರಿಹಾರವಾಗುವ ಸಮಸ್ಯೆಯಲ್ಲ. ಯಾವುದನ್ನ ಮಾಡಬೇಕು- ಮಾಡಬಾರದು, ಏನು ಮಾಡಿದರೆ ಜೀವಕ್ಕೆ ಕುತ್ತು ಬರುತ್ತೆ ಎಂಬ ತಿಳಿವಳಿಕೆ ಜನರಿಗೆ ಇರಬೇಕು ಎಂದು ಗೋವಿಂದ ಕಾರಜೋಳ ಹೇಳಿದರು.

    ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮ ಶುರುವಾಗಿದೆ. ತನಿಖೆ ಮುಗಿಯುವವರೆಗೆ ಏನೂ ಹೇಳಲು ಆಗಲ್ಲ. ವಿಷಯವನ್ನು ಗೌಪ್ಯವಾಗಿ ಇಡಬೇಕಾಗುತ್ತೆ. ತನಿಖೆ ಮುಗಿದ ಕೂಡಲೇ ಕೋರ್ಟಿಗೆ ಚಾರ್ಜ್​ಶೀಟ್ ಸಲ್ಲಿಸುವ ಮುನ್ನ ಮಾಹಿತಿ‌ ನೀಡಲಾಗುತ್ತೆ‌ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

    ‘ತುಪ್ಪ’ದ ಬೆಡಗಿ ರಾಗಿಣಿಗೆ ಸೊಳ್ಳೆ ಕಾಟವಂತೆ! ಹೀಗಿತ್ತು ಬಂಧನದ ಮೊದಲ ರಾತ್ರಿ

    ಸಿನಿ ತಾರೆಯರಿಗೆ ಡ್ರಗ್ಸ್​ ಸಪ್ಲೈ ಮಾಡುತ್ತಿದ್ದವನು ಇವನೇ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts