More

    ಮಾಲ್ಡೀವ್ಸ್​ನಲ್ಲಿ ಪತಿ ಜತೆಗೆ ಸಮಂತಾ ಹಾಲಿಡೇ …

    ಹೈದರಾಬಾದ್​: ಲಾಕ್​ಡೌನ್​ ತೆರವಾಗುತ್ತಿದ್ದಂತೆಯೇ ಹಲವು ನಟ-ನಟಿಯರು ಮಾಲ್ಡೀವ್ಸ್​ನತ್ತ ಪ್ರಯಾಣ ಬೆಳೆಸಿ, ಅಲ್ಲಿ ಹಾಲಿಡೇ ಮಾಡುತ್ತಿದ್ದಾರೆ. ಈಗಾಗಲೇ ರಾಕುಲ್​ ಪ್ರೀತ್​ ಸಿಂಗ್​, ಪ್ರಣೀತಾ ಸುಭಾಷ್​, ವೇದಿಕಾ, ತಾಪ್ಸಿ ಪನ್ನು, ಟೈಗರ್​ ಶ್ರಾಫ್​, ಸಾನ್ವಿ ಶ್ರೀವಾತ್ಸವ್​ ಸೇರಿದಂತೆ ಹಲವರು ಜನಪ್ರಿಯ ನಟ-ನಟಿಯರು ರಜೆಗೆಂದು ಮಾಲ್ಡೀವ್ಸ್​​ಗೆ ಹೋಗಿದ್ದರು.

    ಇದನ್ನೂ ಓದಿ: ಶಿವಣ್ಣನಿಗೆ ಅಂಜಲಿ ನಾಯಕಿ

    ಈಗ ಆ ಸಾಲಿಗೆ ತೆಲುಗು ನಟಿ ಸಮಂತಾ ರುತ್​ ಪ್ರಭು ಸಹ ಸೇರಿಕೊಂಡಿದ್ದಾರೆ. ಸಮಂತಾ ತಮ್ಮ ಪತಿ ನಾಗಚೈತನ್ಯ ಜೊತೆಗೆ ಮಾಲ್ಡೀವ್ಸ್​ನಲ್ಲಿ ರಜೆ ಕಳೆಯುತ್ತಿದ್ದು, ಸೋಷಿಯಲ್​ ಮೀಡಿಯಾ ಮೂಲಕ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಬರೀ ಮಾಲ್ಡೀವ್ಸ್​ನ ಕಡಲಕಿನಾರೆಯಲ್ಲಿ ಕಾಲಕಳೆಯುವುದಷ್ಟೇ ಅಲ್ಲ, ಅಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಸ್ಕೂಬಾ ಡೈವಿಂಗ್​ ಸಹ ಮಾಡಿಬಂದಿದ್ದಾರೆ ಸಮಂತಾ. ಡ್ರೆಸ್​ ತೊಟ್ಟು ಸಮುದ್ರಕ್ಕೆ ಹಾರುವುದಕ್ಕೆ ಸಜ್ಜಾಗಿರುವ ಒಂದು ಫೋಟೋವನ್ನು ಹಂಚಿಕೊಂಡಿರುವ ಸಮಂತಾ, ‘ಕೊನೆಗೂ ಸಮುದ್ರದೊಳಗೆ …’ ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಬಟ್ಟೆ ಬದಲಿಸುವಾಗ ನಿರ್ಮಾಪಕರು​ ವ್ಯಾನಿಟಿ ವ್ಯಾನ್​ಗೇ ಬಂದು ಬಿಟ್ಟರು; ಖ್ಯಾತ ನಟಿಯ ಆರೋಪ

    ಲಾಕ್​ಡೌನ್​ ಸಮಯವನ್ನು ಮನೆಯಲ್ಲೇ ಕಳೆದ ಸಮಂತಾ, ಒಂದೆರೆಡು ತಿಂಗಳಿನಿಂದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ಸೀರೀಸ್​ನಲ್ಲಿ ಪ್ರಮುಖ ಪಾತ್ರ ಮಾಡಿರುವ ಸಮಂತಾ, ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಆ ನಂತರ ಒಂದು ವಾರ ‘ಬಿಗ್​ ಬಾಸ್​’ ಕಾರ್ಯಕ್ರಮವನ್ನು ನಡೆಸಿಕೊಟ್ಟ ಸಮಂತಾ, ಒಂದಿಷ್ಟು ಕಥೆಗಳನ್ನು ಕೇಳಿದ್ದು, ಮುಂದಿನ ವರ್ಷದಿಂದ ನಟಿಸುವುದನ್ನು ಮುಂದುವರೆಸುತ್ತಾರಂತೆ. ಅಷ್ಟರಲ್ಲಿ ಇದೊಂದು ಸಣ್ಣ ಬ್ರೇಕ್​ …

    VIDEO| ಮಾಲ್ಡೀವ್ಸ್​​ ಕಡಲ ಕಿನಾರೆಯಲ್ಲಿ ಶಾನ್ವಿಯ ನಯಾ ಅವತಾರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts