More

    ‘ಹೋರಾಟನಿರತ ರೈತರನ್ನು ಬೆದರಿಸಲು ಪಂಜಾಬ್​ ಸಿಎಂ ರಾಜ್ಯದ ಪೊಲೀಸರನ್ನು ದೆಹಲಿಗೆ ಕಳಿಸಿದ್ದಾರೆ!’

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಪಂಜಾಬ್​ನ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಬೆಂಬಲ ನೀಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅವರು ಬೆಂಬಲ ನೀಡುತ್ತಿಲ್ಲ, ಡಬಲ್​ ಗೇಮ್​ ಆಡುತ್ತಿದ್ದಾರೆ ಎಂದು ರಾಜಕೀಯ ಪಕ್ಷವೊಂದರ ನಾಯಕ ದೂರಿದ್ದಾರೆ.

    ಇದನ್ನೂ ಓದಿ: ಮಗಳನ್ನು ಕೊಂದು ಹೊಲದಲ್ಲಿ ಎಸೆದ ಅಪ್ಪ ಅಮ್ಮ! ಇಷ್ಟಕ್ಕೆಲ್ಲ ಕಾರಣ ಆ ಯುವಕ

    ಅಮರಿಂದರ್​ ಸಿಂಗ್ ಅವರ ಬಗ್ಗೆ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್​ ಸಿಂಗ್​ ಬಾದಲ್​ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸಿಎಂ ಅವರು ಡಬಲ್​ ಗೇಮ್​ ಆಡುತ್ತಿದ್ದಾರೆ. ಅವರು ಕೇಂದ್ರ ಸರ್ಕಾರದ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ದೆಹಲಿಯಲ್ಲಿ ಹೋರಾಟನಿರತ ರೈತರನ್ನು ಬೆದರಿಸುವ ಸಲುವಾಗಿ ಪಂಜಾಬ್​ನ ಪೊಲೀಸರನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ದೂರಿದ್ದಾರೆ.

    ನೀವು (ಕ್ಯಾಪ್ಟನ್ ಅಮರಿಂದರ್) ರಾಜ್ಯದ ರೈತರ ಹಕ್ಕುಗಳನ್ನು ಭದ್ರಪಡಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿರಬೇಕು. ಆಂದೋಲನವನ್ನು ಮುನ್ನಡೆಸಬೇಕು ಮತ್ತು ಅದಕ್ಕಾಗಿ ಎಲ್ಲವನ್ನು ತ್ಯಾಗ ಮಾಡಲು ಸಿದ್ಧರಾಗಿರಬೇಕು ಎಂದು ಅವರು ಸಿಎಂಗೆ ಹೇಳಿದ್ದಾರೆ.

    ಇದನ್ನೂ ಓದಿ: ಬೋಯಿಂಗ್ ವಿಮಾನ ಹೈಜ್ಯಾಕ್​? ಪ್ರಯಾಣ ಆರಂಭಿಸಿದ ನಾಲ್ಕೇ ನಿಮಿಷಗಳಲ್ಲಿ ​ಸಂಪರ್ಕ ಕಡಿತ

    ಕೇಂದ್ರ ಗೃಹ ಸಚಿವಾಲಯವು ಸಿಎಂ ಅವರ ದೌರ್ಬಲ್ಯಗಳ ಬಗ್ಗೆ ತಿಳಿದಿದೆ. ಸಚಿವಾಲಯದಿಂದ ನೇರವಾಗಿ ಆದೇಶಗಳನ್ನು ಮಾಡಲಾಗುತ್ತಿದೆ ಮತ್ತು ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಕೊಲೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಅದೇ ರೀತಿ, ರೈತರ ಆಂದೋಲನವನ್ನು ಶ್ಲಾಘಿಸಿ ಹಾಡುಗಳನ್ನು ಹಾಡಿದ ಗೀತರಚನೆಕಾರರು ಮತ್ತು ಗಾಯಕರನ್ನು ವಿಶೇಷ ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. (ಏಜೆನ್ಸೀಸ್​)

    ಪಾರ್ಟಿಗೆ ಮಗಳನ್ನು ಕರೆದು ಹತ್ಯೆ ಮಾಡಿ, ಪ್ರಿಯಕರನನ್ನು ರೇಪ್​ ಮಾಡಿ ಕೊಂದ ಕುಟುಂಬ: ಬೆಚ್ಚಿಬೀಳಿಸುವ ಪ್ರಕರಣವಿದು!

    ಖುರ್ಚಿಯಲ್ಲಿ ಪ್ರಿಯತಮನನ್ನು ಕಟ್ಟಿ ಸೆಕ್ಸ್​ ಮಾಡಲು ಹೋದ ಮಹಿಳೆ; ಕಾಮದಾಸೆಯಲ್ಲೇ ಯಮಲೋಕ ಸೇರಿದ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts