More

    ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವು: 96 ದಿನಗಳಲ್ಲಿ 10 ಮಂದಿ ಬಲಿ

    ವಾಷಿಂಗ್‌ಟನ್‌ ಡಿಸಿ: ಯುಸ್​ನಲ್ಲಿ ಭಾರತೀಯ ವಿದ್ಯಾರ್ಥಿಗಳ ಸಾವಿನ ಸರಣಿ ಮುಂದುವರಿದಿದೆ. ಓಹಿಯೋ ರಾಜ್ಯದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

    ಇದನ್ನೂ ಓದಿ: ಧೋನಿ, ರಾಹುಲ್​ ಗಾಂಧಿ ಸಾರ್ವಕಾಲಿಕ ಬೆಸ್ಟ್‌ ಫಿನಿಷರ್ ಏಕೆ? ವಿವರಣೆ ನೀಡಿದ ಸೆಂಟ್ರಲ್​ ಮಿನಿಸ್ಟರ್‌!

    ಈ ವರ್ಷದಲ್ಲಿ ಇದು 10ನೇ ಸಾವಾಗಿದೆ. ಕೇವಲ 96 ದಿನಗಳಲ್ಲಿ 10 ಮಂದಿ ಭಾರತೀಯ ವ್ಯಕ್ತಿಗಳು ಮೃತಪಟ್ಟಿರುವುದು ಅಮೆರಿಕದಲ್ಲಿರುವ ಭಾರತೀಯ ಸಮುದಾಯ ಆತಂಕಗೊಂಡಿದೆ. ಮೃತ ವಿದ್ಯಾರ್ಥಿಯನ್ನು ಉಮಾ ಸತ್ಯ ಸಾಯಿ ಗಡ್ಡೆ ಎಂದು ಗುರುತಿಸಲಾಗಿದೆ. ಈಕೆ ಓಹಿಯೋದ ಕ್ಲೀವ್‌ಲ್ಯಾಂಡ್‌ನಲ್ಲಿ ಓದುತ್ತಿದ್ದರು.

    ವಿದ್ಯಾರ್ಥಿ ಉಮಾ ಸತ್ಯ ಸಾವಿಗೆ ಭಾರತೀಯ ರಾಯಭಾರ ಕಚೇರಿ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಈ ನೋವಿನ ಸಮಯದಲ್ಲಿ ಮೃತದೇಹವನ್ನು ಭಾರತಕ್ಕೆ ಸಾಗಿಸಲು ಎಲ್ಲ ಸಹಾಯವನ್ನು ಕುಟುಂಬಕ್ಕೆ ನೀಡಲಾಗುತ್ತದೆ ಎಂದು ರಾಯಭಾರ ಕಚೇರಿಯ ಅಧಿಕಾರಿಗಳು ಹೇಳಿದ್ದಾರೆ.

    ಸಾವಿನ ಕಾರಣವನ್ನು ಕಂಡು ಹಿಡಿಯಲು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಅದಲ್ಲದೇ ಉಮಾ ಗದ್ದೆ ಅವರ ಕುಟುಂಬದ ಜೊತೆ ನ್ಯೂಯಾರ್ಕ್‌ನಲ್ಲಿನ ರಾಯಭಾರ ಕಚೇರಿ ನಿರಂತರ ಸಂಪರ್ಕದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ತಿಂಗಳು ಅಮೆರಿಕಾದ ಬೋಸ್ಟನ್​​ನಲ್ಲಿ ಆಂಧ್ರಪ್ರದೇಶ ಮೂಲದ 20 ವರ್ಷದ ಅಭಿಜಿತ್ ಪರುಚೂರು ಮೃತಪಟ್ಟಿದ್ದರು. ಈ ವರ್ಷ ಯುಎಸ್​ನಲ್ಲಿ 10 ಭಾರತೀಯ ವಿದ್ಯಾರ್ಥಿಗಳು ಸಾವಿನ ಮನೆ ಸೇರಿದ್ದಾರೆ. ಈ ಸಂಖ್ಯೆ ಹೆಚ್ಚತ್ತಲೇ ಇದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.

    ಮಾರ್ಚ್‌ನಲ್ಲಿ ಕ್ಲೀವ್‌ಲ್ಯಾಂಡ್‌ನಲ್ಲಿ ಭಾರತೀಯ ವಿದ್ಯಾರ್ಥಿ ಮೊಹಮದ್‌ ಅಬ್ದುಲ್‌ ಅರಾಫರ್‌ ನಾಪತ್ತೆಯಾಗಿದ್ದರು. ನಂತರ ಆತನ ಕುಟುಂಬಕ್ಕೆ ಅರಾಫತ್‌ ಬಿಡುಗಡೆಗೆ ಹಣ ನೀಡುವಂತೆ ಬೆದರಿಕೆ ಕರೆ ಕೂಡ ಬಂದಿತ್ತು. ಇದಕ್ಕೂ ಮುನ್ನ ಈ ವರ್ಷದ ಆರಂಭದಲ್ಲಿ ಹೈದರಾಬಾದ್‌ನ ವಿದ್ಯಾರ್ಥಿ ಸೈಯದ್ ಮಜಾಹಿರ್ ಅಲಿ ಮೇಲೆ ಚಿಕಾಗೋದಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು.

    ಚಿಕಾಗೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಕ್ಷಣವೇ ಮಧ್ಯಪ್ರವೇಶಿಸಿ ಅಲಿ ಮತ್ತು ಅವರ ಕುಟುಂಬಕ್ಕೆ ಬೆಂಬಲವನ್ನು ನೀಡಿತು. ಇಂಡಿಯಾನಾದ ಪರ್ಡ್ಯೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನೀಲ್ ಆಚಾರ್ಯ ಸಾವು ಮತ್ತು ಜಾರ್ಜಿಯಾದಲ್ಲಿ ವಿವೇಕ್ ಸೈನಿಯ ಕ್ರೂರ ಹತ್ಯೆಯು ಅಮೆರಿಕದಲ್ಲಿರುವ ಭಾರತೀಯ ಜನರಲ್ಲಿ ಆತಂಕ ಮೂಡಿಸಿದೆ.  2024 ರ ಆರಂಭದಿಂದ, ಅಮೆರಿಕದಲ್ಲಿ ಭಾರತೀಯ ಅಥವಾ ಭಾರತೀಯ ಮೂಲದ ವಿದ್ಯಾರ್ಥಿಗಳನ್ನು ಒಳಗೊಂಡ ಕನಿಷ್ಠ 10 ಸಾವುಗಳು ಸಂಭವಿಸಿವೆ.

    ಯೋಧರ ಬಸ್​​, ಕಾರು ನಡುವೆ ಭೀಕರ ಅಪಘಾತ: ಮೂವರು ಸಾವು, 25 ಪ್ರಯಾಣಿಕರಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts