More

    ‘ನಾನು ಜಯಲಲಿತಾರ ಮಗಳು… ಮೈಸೂರಿನವಳು… ಸಾಕ್ಷಿ ಸಮೇತ ಸಾಬೀತು ಪಡಿಸುವೆ…’

    ಚೆನ್ನೈ: ಎರಡು ವರ್ಷಗಳ ಹಿಂದೆ ಬೆಂಗಳೂರಿನ ಅಮೃತಾ ಎನ್ನುವವರು ತಾವು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಪುತ್ರಿ ಎಂದು ಹೇಳಿಕೊಂಡು ಭಾರಿ ಸುದ್ದಿ ಮಾಡಿದ್ದರು. ‘ನನ್ನ ತಾಯಿ ಜಯಲಲಿತಾರಿಗೆ ಭಯವಿತ್ತು. ಮಗಳು ಎಂದು ಸಾರ್ವಜನಿಕವಾಗಿ ಹೇಳಿದರೆ ನನಗೇನಾದರೂ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಈ ವಿಚಾರವನ್ನು ಗುಪ್ತವಾಗಿಟ್ಟಿದ್ದರು’ ಎಂದು ಅಮೃತ ಈ ಹಿಂದೆ ಪ್ರತಿಕ್ರಿಯೆ ನೀಡಿದ್ದರು. ಈ ವಿವಾದ ಹೈಕೋರ್ಟ್‌ನಿಂದ ಸುಪ್ರೀಂಕೋರ್ಟ್‌ವರೆಗೂ ಹೋಗಿ ಕೊನೆಗೆ ಅಮೃತಾ ಅವರಿಗೆ ಸೋಲಾಗಿತ್ತು.

    ಜಯಲಲಿತಾ ಅವರು ಮೃತಪಟ್ಟು ಐದು ವರ್ಷಗಳ ಬಳಿಕ (ಅವರು ಮೃತಪಟ್ಟಿದ್ದು 2016ರ ಡಿಸೆಂಬರ್‌ ತಿಂಗಳಿನಲ್ಲಿ) ಇದೀಗ ಮತ್ತೋರ್ವ ಮಹಿಳೆ ತಾವು ಅವರ ಪುತ್ರಿ ಎಂದು ಹೇಳಿಕೊಂಡಿದ್ದಾರೆ. ಮೈಸೂರಿನ ಮಹಿಳೆ ಪ್ರೇಮಾ ಎನ್ನುವವರು ಈಗ ಈ ಹೇಳಿಕೆ ನೀಡುತ್ತಿದ್ದಾರೆ. ಮೈಸೂರಿನಲ್ಲಿ ಹುಟ್ಟಿ ಬೆಳೆದು ಇದೀಗ ಚೆನ್ನೈ ಪಲ್ಲವರಂನಲ್ಲಿ ವಾಸಿಸುತ್ತಿರುವ ಪ್ರೇಮಾ, ಚೆನ್ನೈನ ಮೆರೀನಾ ಬೀಚ್ ಬಳಿಯಿರುವ ಜಯಲಲಿತಾ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಈ ಮಾಹಿತಿ ಮಾಧ್ಯಮದವರ ಮುಂದೆ ಬಿಚ್ಚಿಟ್ಟಿದ್ದಾರೆ.

    பிரேமா பேட்டி

    ‘ನಾನು ಸುಮಾರು 30 ವರ್ಷಗಳಿಂದ ಚೆನ್ನೈನಲ್ಲಿ ವಾಸವಿದ್ದೇನೆ. ಸಮಯ ಬಂದಾಗ ನಾನು ಜಯಲಲಿತಾ ಪುತ್ರಿಯೆಂದು ಸಾಕ್ಷಿ ಸಮೇತ ಸಾಬೀತುಪಡಿಸುತ್ತೇನೆ. ಕೆಲವೇ ದಿನಗಳಲ್ಲಿ ಜಯಲಲಿತಾ ಅವರ ಆಪ್ತೆಯಾಗಿದ್ದ ಶಶಿಕಲಾ ಅವರನ್ನೂ ಭೇಟಿಯಾಗುತ್ತೇನೆ. ನನ್ನನ್ನು ಬೆಳೆಸಿದವರು ಬೇರೆಯವರು. ಅವರೀಗ ಮೃತಪಟ್ಟಿದ್ದಾರೆ. ಜಯಲಲಿತಾ ನನ್ನನ್ನು ಬೇಬಿ ಎಂದು ಕರೆಯುತ್ತಿದ್ದರು. ಅವರು ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾಗ ಹಿಂದಿನ ಬಾಗಿಲಿನ ಮೂಲಕ ಅವರನ್ನು ಭೇಟಿಯಾಗಿದ್ದೆ’ ಎಂದು ಪ್ರೇಮಾ ಹೇಳಿದ್ದಾರೆ.

    ಅಷ್ಟೇ ಅಲ್ಲದೇ ಅಮ್ಮ ಅವರ ಸಹಾಯಕ ಮುತ್ತುಸ್ವಾಮಿ ನನ್ನನ್ನು ಒಮ್ಮೆ ಕರೆದಿದ್ದರು. ಅವರನ್ನು ಒಮ್ಮೆ ಭೇಟಿಯಾಗಿದ್ದಾಗ ಜಯಲಲಿತಾ ನನಗೆ ಮುತ್ತು ಕೊಟ್ಟಿದ್ದರು. ನಾನು ಅವರದ್ದೇ ಮಗಳು ಎಂದು ಸಾಬೀತು ಮಾಡುತ್ತೇನೆ ಎಂದಿದ್ದಾರೆ.

    VIDEO: ಪ್ರೀತಿಯ ಪತ್ನಿಯ ನೆನಪಿಗೆ ಮೂರ್ತಿ ಸ್ಥಾಪಿಸಿದ ಪತಿ: ಬೆಳಗಾವಿಯ ಮಾಜಿ ಸದಸ್ಯೆಗೆ ಗಂಡನಿಂದ ಹೀಗೊಂದು ನಮನ…

    VIDEO: ‘ಅಬ್ಬಬ್ಬಾ ಅಪ್ಪು ಅಂಜನಾದ್ರಿ ಬೆಟ್ಟ ಸರಸರ ಹತ್ತಿದ್ದ ಪರಿ ಕಂಡು ಸುಸ್ತಾಗಿ ಹೋದೆ… ಅದೆಂಥ ನೋಟ ಅಂತೀರಾ?’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts