More

    ಅಪ್ಪ ಗಿಫ್ಟ್​ ನೀಡಿದ್ದ ವಿಸ್ಕಿ ಬಾಟಲಿ ಮಾರಿ ಮನೆ ಕಟ್ಟಿಸಿದ: ಅಚ್ಚರಿಯಾಯ್ತಾ? ಈ ಸ್ಟೋರಿ ಓದಿ..

    ಸೊಮರ್​ಸೆಟ್ (ಸ್ಕಾಟ್​ಲೆಂಡ್​): ಅಪ್ಪನ ಜಮೀನು ಮಾರಿ, ಕುಟುಂಬ ಆಸ್ತಿ ಮಾರಿ ಮನೆ ಕಟ್ಟಿಸಿರುವ ಮಕ್ಕಳ ಬಗ್ಗೆ ನೀವು ಕೇಳಿರಬಹುದು. ಮದ್ಯಪಾನಕ್ಕಾಗಿ ಅಪ್ಪನ ಸರ್ವಸ್ವವನ್ನೂ ಮಾರಿ ಹಾಳಾದ ಮಗನ ಬಗ್ಗೆಯೂ ಓದಿರಬಹುದು. ಆದರೆ ಇಲ್ಲೊಬ್ಬ ಮಗ ಅಪ್ಪ ಕೊಡಿಸಿದ ವಿಸ್ಕಿ ಬಾಟಲಿಗಳ ಮಾರಿ ಮನೆ ಕಟ್ಟಿಸಿದ್ದಾನೆ ಎಂದರೆ ನಂಬುವಿರಾ?

    ನಂಬಲೇಬೇಕು. ಏಕೆಂದರೆ ಸ್ಕಾಟ್​ಲೆಂಡ್​ನ ಮಗನೊಬ್ಬ ಇಂಥದ್ದೊಂದು ಅಪರೂಪದ ಕಾರ್ಯಕ್ಕೆ ಕೈಹಾಕಿದ್ದು, ಇದೀಗ ಈತನ ಕೀರ್ತಿ ಜಗದ್ವಿಖ್ಯಾತವಾಗಿಬಿಟ್ಟಿದೆ. ಈತನ ಹೆಸರು ಮ್ಯಾಥ್ಯೂ ರಾಬಿನ್ಸ್​.

    ಅಷ್ಟಕ್ಕೂ ಒಂದು ವಿಸ್ಕಿ ಬಾಟಲಿಗೆ ಮನೆ ಕಟ್ಟಿಸುವಷ್ಟು ದುಡ್ಡು ಇರತ್ತಾ ಎಂದು ಮೂಗು ಮುರಿಯಬೇಡಿ. ಇಲ್ಲಿ ಹೇಳಹೊರಟಿರುವುದು ಒಂದು ವಿಸ್ಕಿ ಬಾಟಲಿ ವಿಷಯವಲ್ಲ. ಬದಲಿಗೆ 28 ವರ್ಷಗಳ ಘಟನೆಯಿದು.

    ಹೌದು. 1992ರಲ್ಲಿ ಹುಟ್ಟಿರುವ ಮ್ಯಾಥ್ಯೂಗೆ ಇದೀಗ 28 ವರ್ಷ ವಯಸ್ಸು. ಸ್ಕಾಟ್​ಲೆಂಡ್​ನ ಮಿಲ್ನಾಶಾರ್ಟ್ ಎಂಬಲ್ಲಿ ವಿಸ್ಕಿ ಕಂಪೆನಿಯ ಮೂಲ ವಸ್ತು ತಯಾರಿಸುವ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುರುವ ಈತನ ಅಪ್ಪ ಮಗ ಹುಟ್ಟಿದ ವರ್ಷದಿಂದಲೇ ಆರಂಭಗೊಂಡು ಪ್ರತಿವರ್ಷದ ಹುಟ್ಟುಹಬ್ಬಕ್ಕೆ ವಿಸ್ಕಿ ಬಾಟಲಿಯನ್ನು ಗಿಫ್ಟ್​ ಆಗಿ ನೀಡುತ್ತಾ ಬಂದಿದ್ದಾನೆ.

    ಇದನ್ನೂ ಓದಿ: ಸ್ಪರ್ಧೆಗೆ ನಿಂತಿವೆ ಏಳು ಚಿಟ್ಟೆಗಳು: ಯಾರಿಗೆ ಒಲಿಯಲಿದೆ ರಾಷ್ಟ್ರಮಟ್ಟದ ಅದೃಷ್ಟ?

    ಆದರೆ ಗಿಫ್ಟ್​ ಕೊಡುವಾಗ ಒಂದು ಕಂಡೀಷನ್​ ಹಾಕಿದ್ದಾನೆ. ಅದೇನೆಂದರೆ ಯಾವುದೇ ಕಾರಣಕ್ಕೂ ಈ ಬಾಟಲಿಗಳನ್ನು ಓಪನ್​ ಮಾಡಬಾರದು, ಇದನ್ನು ಕುಡಿಯಲೂಬಾರದು ಎಂದು. ಮೆಕೆಲನ್ ಕಂಪೆನಿಯ ಫ್ಯಾನ್ಸಿ ವಿಸ್ಕಿ ಎಂಬ ದುಬಾರಿ ವಿಸ್ಕಿ ಇದು.

    ಅಪ್ಪನ ಮಾತಿನಂತ ಮಗ 28 ವರ್ಷಗಳಿಂದ ಬಾಟಲಿಯನ್ನು ಮಗ ತೆರೆಯದೇ, ಕೂಡಿಟ್ಟುಕೊಂಡಿದ್ದಾನೆ. 28 ವರ್ಷಗಳಲ್ಲಿ ಇದರ ಮೌಲ್ಯ 5 ಸಾವಿರ ಪೌಂಡ್​​ ಆಗಿದೆ. ಅಂದರೆ ಸುಮಾರು 4.72 ಲಕ್ಷ ರೂಪಾಯಿಗಳು. ಆದರೆ ಅದಷ್ಟನ್ನೂ ಈಗಿನ ಮೌಲ್ಯಕ್ಕೆ ಮಾರಿದರೆ 40 ಸಾವಿರ ಪೌಂಡ್​ ಅಂದರೆ ಸುಮಾರು 37.68 ಲಕ್ಷ ರೂಪಾಯಿಗಳು ಸಿಗುತ್ತವಂತೆ.

    ಈ ಅಷ್ಟೂ ಹಣ ಸಂಗ್ರಹಿಸಿ ಮಗ ಮನೆಕಟ್ಟಲು ತೊಡಗಿದ್ದಾನೆ. ನನ್ನ ತಂದೆ ನೀಡಿದ ವಿಸ್ಕಿ ಬಾಟಲ್​ಗಳು ಇಷ್ಟು ಅಮೂಲ್ಯವಾದ, ಬೆಲೆ ಬಾಳುವ ಉಡುಗೊರೆಯಾಗುತ್ತವೆ ಎಂದು ನಾನಂದುಕೊಂಡಿರಲಿಲ್ಲ ಎಂದು ಮ್ಯಾಥ್ಯೂ ಹೇಳಿಕೊಂಡಿದ್ದಾರೆ.

    ಬೆಚ್ಚಿಬಿದ್ದ ಮಂಡ್ಯ: ದೇವಾಲಯದ ಆವರಣದಲ್ಲಿಯೇ ಅರ್ಚಕರು ಸೇರಿ ಮೂವರ ಕೊಲೆ!

    ವಿಡಿಯೋ: ಹುಟ್ಟುವ ಮಗುವಿನ ಲಿಂಗ ತಿಳಿಯಲು ಜಗತ್ತನ್ನೇ ನಿಬ್ಬೆರಗಾಗಿಸಿದರು ಈ ದಂಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts