More

    ಸ್ಪರ್ಧೆಗೆ ನಿಂತಿವೆ ಏಳು ಚಿಟ್ಟೆಗಳು: ಯಾರಿಗೆ ಒಲಿಯಲಿದೆ ರಾಷ್ಟ್ರಮಟ್ಟದ ಅದೃಷ್ಟ?

    ನವದೆಹಲಿ: ಕಲರ್​ಫುಲ್​ ಚಿಟ್ಟೆಗಳಿಗೆ ಮನಸೋಲದವರೇ ಇಲ್ಲ ಎನ್ನಬಹುದೇನೋ. ಸೆಪ್ಟೆಂಬರ್​ ತಿಂಗಳನ್ನು ಚಿಟ್ಟೆಗಳ ಮಾಸವೆಂದೇ ಕರೆಯಲಾಗುತ್ತದೆ. ಈ ತಿಂಗಳು ಪಾತರಗಿತ್ತಿಗಳಿಗೆ ಮೀಸಲು. ಈ ನಿಟ್ಟಿನಲ್ಲಿ ಚಿಟ್ಟೆಗಳಿಗೆ ರಾಷ್ಟ್ರೀಯ ಸ್ಥಾನಮಾನ ಕೊಡುವ ಪ್ರಕ್ರಿಯೆಗೆ ಇದೀಗ ಚಾಲನೆ ದೊರೆತಿದೆ.

    ಹುಲಿಯನ್ನು ರಾಷ್ಟ್ರೀಯ ಪ್ರಾಣಿ ಎಂದೂ, ನವಿಲನ್ನು ರಾಷ್ಟ್ರೀಯ ಪಕ್ಷಿಯೆಂದೂ, ಕಮಲವನ್ನು ರಾಷ್ಟ್ರೀಯ ಪುಷ್ಪವೆಂದೂ ಇದಾಗಲೇ ಗುರುತಿಸಲಾಗಿದೆ. ಅದರಂತೆಯೇ ಚಿಟ್ಟೆಗೂ ರಾಷ್ಟ್ರೀಯ ಸ್ಥಾನ ನೀಡಲು ಇದೀಗ ಕೇಂದ್ರ ಸರ್ಕಾರದಿಂದ ತಯಾರಿ ನಡೆದಿದ್ದು, ಸ್ಪರ್ಧೆಯಲ್ಲಿ ಏಳು ಚಿಟ್ಟೆಗಳು ಟಾಪ್​ ಸ್ಥಾನದಲ್ಲಿ ಇವೆ. ಇವುಗಳ ಪೈಕಿ ಅತ್ಯುತ್ತಮ ಪ್ರಭೇದವೊಂದನ್ನು ಆರಿಸಲು ಚಿಟ್ಟೆ ತಜ್ಱರ ನೇತೃತ್ವದ ತಂಡ ಚಾಲನೆ ನೀಡಿದೆ. ಆಯ್ಕೆಯಾದ ಚಿಟ್ಟೆಗಳಿಗೆ ರಾಷ್ಟ್ರೀಯ ಚಿಟ್ಟೆ ಸ್ಥಾನಮಾನ ಸಿಗಲಿದೆ.

    ಇದನ್ನೂ ಓದಿ: ಕೇವಲ 58 ಮತದಾರರ ಕಷ್ಟಸುಖ ಅರಿಯಲು 24 ಕಿ.ಮೀ ನಡೆದ ಸಿಎಂ ಯಾರು ಗೊತ್ತಾ?

    ಚಿಟ್ಟೆಗಳ ಹವ್ಯಾಸಿ ಅಧ್ಯಯನಕಾರರು, ಸಂಶೋಧಕರು, ಬರಹಗಾರರು ಹಾಗೂ ಇತರ ತಜ್ಞರಿರುವ 50 ಸದಸ್ಯರ ಸಮಿತಿಯೊಂದನ್ನು ಕೇಂದ್ರ ಪರಿಸರ ಇಲಾಖೆ ರಚಿಸಿದೆ. ಸಮಿತಿಯಲ್ಲಿ ಖ್ಯಾತ ಚಿಟ್ಟೆಗಳ ತಜ್ಞ ಡಾ. ಕೃಷ್ಣಮೇಘ ಕುಂಟೆ, ಐಸಾಕ್‌ ಕೆಹಿಂಕರ್‌ ಅವರು ನೇತೃತ್ವ ವಹಿಸಿದ್ದಾರೆ.

    ನದರ್ನ್ ಜಂಗಲ್‌ ಕ್ವೀನ್‌, ಕಾಮನ್‌ ಜೆಝೆಬೆಲ್‌, ಎಲ್ಲೋ ಗಾರ್ಗನ್‌, ಫೈವ್‌-ಬಾರ್‌ ಸ್ವೋರ್ಡ್‌ ಟೇಲ್‌, ಕಾಮನ್‌/ಇಂಡಿಯನ್‌ ನವಾಬ್‌, ಕೃಷ್ಣಾ ಪೀಕಾಕ್‌ ಮತ್ತು ಆರೆಂಜ್‌ ಓಕ್‌ಲೀಫ್ ಚಿಟ್ಟೆಗಳು ಟಾಪ್​ 7 ಲಿಸ್ಟ್​ನಲ್ಲಿ ಇವೆ.

    ಇವುಗಳ ಹೆಸರು ಸೂಚಿಸಲು ಆನ್‌ಲೈನ್‌ ಮೂಲಕ ಸಾರ್ವಜನಿಕರನ್ನೂ ಕೋರಲಾಗಿದೆ. ನಿನ್ನೆಯಿಂದ (ಸೆ.10) ಮತದಾನ ಪ್ರಕ್ರಿಯೆ ಶುರುವಾಗಿದ್ದು. ಸಾರ್ವಜನಿಕರ ಅತ್ಯಧಿಕ ಮತ ಚಲಾಯಿಸುವ ಚಿಟ್ಟೆಗಳನ್ನೂ ಗಮನದಲ್ಲಿ ಇಟ್ಟುಕೊಳ್ಳಲಾಗುತ್ತದೆ. ನಂತರ ರಾಷ್ಟ್ರೀಯ ಚಿಟ್ಟೆಯ ಆಯ್ಕೆಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ಸಮಿತಿಯು ಶಿಫಾರಸು ಮಾಡುವ ಚಿಟ್ಟೆಯ ಪ್ರಭೇದಕ್ಕೆ ರಾಷ್ಟ್ರೀಯ ಚಿಟ್ಟೆ ಎಂದು ಗುರುತಿಸಲಾಗುತ್ತದೆ.

    ಈ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ರಾಷ್ಟ್ರೀಯ ಚಿಟ್ಟೆ ಯಾವುದೆಂದು ಘೋಷಿಸುವ ಸಾಧ್ಯತೆ ಇದೆ.

    ವಿಡಿಯೋ: ಹುಟ್ಟುವ ಮಗುವಿನ ಲಿಂಗ ತಿಳಿಯಲು ಜಗತ್ತನ್ನೇ ನಿಬ್ಬೆರಗಾಗಿಸಿದರು ಈ ದಂಪತಿ!

    ಬೆಚ್ಚಿಬಿದ್ದ ಮಂಡ್ಯ: ದೇವಾಲಯದ ಆವರಣದಲ್ಲಿಯೇ ಅರ್ಚಕರು ಸೇರಿ ಮೂವರ ಕೊಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts