More

    ಕೇವಲ 58 ಮತದಾರರ ಕಷ್ಟಸುಖ ಅರಿಯಲು 24 ಕಿ.ಮೀ ನಡೆದ ಸಿಎಂ ಯಾರು ಗೊತ್ತಾ?

    ಗುವಾಹಟಿ: ಜನಪ್ರತಿನಿಧಿಗಳು ಎಂದರೆ ಎಷ್ಟೋ ಮತದಾರರಿಗೆ ತಾತ್ಸಾರವೇ ಸರಿ. ಚುನಾವಣೆ ಸಂದರ್ಭದಲ್ಲಿ ಬಂದು ಮತಬೇಡುವ ಸಮಯದಲ್ಲಿ ಘಂಟಾಘೋಷವಾಗಿ ವಾಗ್ದಾನಗಳ ಸುರಿಮಳೆ ಹರಿಸಿ ನಂತರ ತಮ್ಮತ್ತ ಬರುವುದೇ ಇಲ್ಲ ಎನ್ನುವುದು ಬಹುತೇಕ ಜನಪ್ರತಿನಿಧಿಗಳ ಮೇಲೆ ಮತದಾರರ ಆರೋಪವಿದೆ.

    ಇದಕ್ಕೆ ಅಪವಾದ ಎಂಬಂತೆ ಅಲ್ಲೊಬ್ಬ, ಇಲ್ಲೊಬ್ಬ ಜನಪ್ರತಿನಿಧಿಗಳು ಸದಾ ತಮ್ಮ ಮತದಾರರ ಯೋಗಕ್ಷೇಮ ನೋಡಿಕೊಳ್ಳುವ ಉದಾಹರಣೆಗಳು ಇವೆ.

    ಆದರೆ ಅದಕ್ಕಿಂತಲೂ ಅಪರೂಪದ ಉದಾಹರಣೆಯಾಗಿದ್ದಾರೆ ಅರುಣಾಚಲದ ಮುಖ್ಯಮಂತ್ರಿ ಪೆಮಾ ಖಂಡು. ಇವರು ಕ್ಷೇತ್ರದ ಮತದಾರರ ಕಷ್ಟಸುಖ ಅರಿಯಲು 24 ಕಿ.ಮೀ. ನಡೆದು ಹೋಗಿದ್ದಾರೆ. ಹಾಗೆಂದು ಅಲ್ಲಿ ನೂರಾರು, ಸಾವಿರಾರು ಜನಪ್ರತಿನಿಧಿಗಳು ಇಲ್ಲ. ಬದಲಿಗೆ ಕೇವಲ 58 ಮಂದಿ ಇರುವುದು!

    ತವಾಂಗ್‌ ಜಿಲ್ಲೆಯ ಮುಕ್ತೋ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಪೆಮಾ ಖಂಡು ಅವರು, ಖುದ್ದು ಜನರ ಕಷ್ಟಸುಖವನ್ನು ಅರಿಯಲು 24 ಕಿ.ಮೀ ನಡೆದು ಮಾದರಿಯಾಗಿದ್ದಾರೆ.

    ಇದನ್ನೂ ಓದಿ: ಹಕ್ಕು ಪತ್ರ ನೋಂದಣಿ ಆಗದಿದ್ದರೆ ಆಸ್ತಿ ಪರಭಾರೆಗೆ ತೊಂದರೆಯಾಗುತ್ತದೆಯೆ?

    ಭಾರತ ಮತ್ತು ಚೀನಾ ಗಡಿಗೆ ಹೊಂದಿಕೊಂಡ ಪ್ರದೇಶದಲ್ಲಿನ ಕುಗ್ರಾಮವಾಗಿರುವ ಲುಗುಥಾಂಗ್‌ ಎಂಬ ಗ್ರಾಮಕ್ಕೆ ಇವರು ಭೇಟಿ ನೀಡಿದ್ದಾರೆ. ಸಮುದ್ರ ಮಟ್ಟದಿಂದ 14500 ಅಡಿ ಎತ್ತರದ ಇಲ್ಲಿರುವುದು ಕೇವಲ 10 ಕುಟುಂಬ ಮತ್ತು ಅದರ 58 ಸದಸ್ಯರು.

    ಇಲ್ಲಿಗೆ ರಸ್ತೆ ಸಂಪರ್ಕ ಇಲ್ಲ. ಜತೆಗೆ ಸಾಕಷ್ಟು ಮೂಲಸೌಕರ್ಯಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿಯ ಜನರ ಸಂಕಷ್ಟಗಳನ್ನು ಖುದ್ದು ಪರಿಶೀಲನೆ ಮಾಡಲು ಬಯಸಿದ ಮುಖ್ಯಮಂತ್ರಿಗಳು ಸುಮಾರು 11 ತಾಸು ಸತತವಾಗಿ ನಡೆದು 24 ಕಿ.ಮೀ ದೂರವನ್ನು ಕ್ರಮಿಸಿ ಗ್ರಾಮವನ್ನು ತಲುಪಿದ್ದಾರೆ. ಬಳಿಕ ಅಲ್ಲಿಯೇ 2 ದಿನ ಕಳೆದು ಅವರ ಸಮಸ್ಯೆಯನ್ನು ಆಲಿಸಿ ಮರಳಿದ್ದಾರೆ. ಈ ವೇಳೆ ಅವರೊಂದಿಗೆ ಕೇವಲ ಒಬ್ಬ ಭದ್ರತಾ ಮತ್ತು ಕೆಲ ಗ್ರಾಮಸ್ಥರು ಮಾತ್ರವೇ ಇದ್ದರು. ಈ ವಿಷಯವನ್ನು ಸ್ವತಃ ಖಂಡು ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಬೆಚ್ಚಿಬಿದ್ದ ಮಂಡ್ಯ: ದೇವಾಲಯದ ಆವರಣದಲ್ಲಿಯೇ ಅರ್ಚಕರು ಸೇರಿ ಮೂವರ ಕೊಲೆ!

    ಸೋಂಕಿತೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಅತ್ಯಾಚಾರ ಮಾಡಿದ ಆಂಬ್ಯುಲೆನ್ಸ್ ಚಾಲಕ!

    ಕೇರಳದ ಸ್ಮಗ್ಲಿಂಗ್​ ರಾಣಿಗೂ, ಕರ್ನಾಟಕದ ಡ್ರಗ್ಸ್​ ದಂಧೆಗೂ ಲಿಂಕ್​: ತನಿಖೆಯಿಂದ ಬಯಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts