More

    ಲಸಿಕೆ ಹಾಕಿಸಿಕೊಂಡ ಎರಡನೆಯ ದಿನಕ್ಕೇ ಸಚಿವರಿಗೆ ಬಿಗ್‌ ಶಾಕ್‌- ವರದಿಯಲ್ಲಿ ಕಾಣಿಸಿಕೊಂಡ್ತು ‘ಪಾಸಿಟಿವ್‌’!

    ಅಹಮದಾಬಾದ್‌: ಈಗ ಎಲ್ಲೆಲ್ಲೂ ಕರೊನಾ ಲಸಿಕೆ ಅಭಿಯಾನ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಬಹುತೇಕ ಗಣ್ಯರು, ವಿವಿಧ ಕ್ಷೇತ್ರಗಳ ಮುಖಂಡರು ಕರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.

    ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕರೊನಾ ಲಸಿಕೆ ಹಾಕಿಸಿಕೊಂಡ ಗುಜರಾತ್ ಸಚಿವ ಬಿಜೆಪಿಯ ಈಶ್ವರ್ ಸಿನ್ಹಾ ಪಟೇಲ್ ಅವರಿಗೆ ಮರುದಿನ ಪರೀಕ್ಷೆಯಲ್ಲಿ ಕರೊನಾ ಪಾಸಿಟಿವ್‌ ಬಂದಿದೆ! ಇವರಿಗೆ ಲಸಿಕೆ ಹಾಕುವ ಪೂರ್ವದಲ್ಲಿ ಪರೀಕ್ಷೆ ಮಾಡಲಾಗಿತ್ತೇ, ಇಲ್ಲವೇ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮಾರನೆಯ ದಿನ ಕೋವಿಡ್‌ ವೈರಸ್‌ ಇರುವುದು ತಿಳಿದುಬಂದಿದೆ.

    ಈ ಕುರಿತು ಖುದ್ದಾಗಿ ಪಟೇಲ್‌ ಅವರು ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದ್ದಾರೆ. ಕಳೆದ ಮಾರ್ಚ್ 13ರ ಶನಿವಾರ ಇವರು ಕರೊನಾ ಲಸಿಕೆ ಹಾಕಿಸಿಕೊಂಡಿದ್ದರು. ಸೋಮವಾರ ವೈದ್ಯಕೀಯ ತಪಾಸಣೆಯಲ್ಲಿ ನಡೆಸಲಾಗಿದ್ದು, ತಮಗೆ ಕೊವಿಡ್-19 ಸೋಂಕು ತಗುಲಿರುವುದು ಮಂಗಳವಾರ ಹೊರಬಂದ ವರದಿಯಲ್ಲಿ ಸ್ಪಷ್ಟವಾಗಿದೆ ಎಂದಿದ್ದಾರೆ.

    ಇಂದು ನನಗೆ ನಡೆಸಿದ ಕರೊನಾ ಪರೀಕ್ಷೆಯಲ್ಲಿ ಸಕಾರಾತ್ಮಕ ವರದಿ ಬಂದಿದ್ದು, ನಾನು ಆರೋಗ್ಯವಂತನಾಗಿದ್ದೇನೆ. ಮುನ್ನೆಚ್ಚರಿಕೆ ಕ್ರಮವಾಗಿ ನನ್ನ ಜತೆಗೆ ಸಂಪರ್ಕದಲ್ಲಿದ್ದ ಎಲ್ಲರೂ ಒಮ್ಮೆ ಕರೊನಾವೈರಸ್ ಸೋಂಕಿನ ತಪಾಸಣೆಗೆ ಒಳಗಾಗಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.

    ಈಗ ಭಾರತದಲ್ಲಿ ಲಸಿಕೆ ಕಾರ್ಯಕ್ರಮವ ಶುರುವಾಗಿ 59 ದಿನಗಳು ಕಳೆದಿವೆ. ಈ ಅವಧಿಯಲ್ಲಿ 3,17,71,661 ಜನರಿಗೆ ಲಸಿಕೆ ನೀಡಲಾಗಿದೆ. 74,08,521 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 43,97,613 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 74,26,479 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 13,23,527 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ.

    ಎರಡನೇ ಹಂತದ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಮಾರ್ಚ್ 1ರಿಂದ ಆರಂಭವಾಗಿದ್ದು, 45 ವರ್ಷಕ್ಕಿಂತ ಮೇಲ್ಪಟ್ಟ 16,96,497 ಜನರಿಗೆ ಲಸಿಕೆ ನೀಡಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ 95,19,024 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ ಎಂದು ವರದಿ ಹೇಳಿದೆ.

    VIDEO: ಬೈಕ್‌ ವ್ಹೀಲಿಂಗ್‌ ಆಯ್ತು… ಈಗ ಶುರುವಾಯ್ತು ಕಾರ್‌ಸ್ಟಂಟ್‌: ‘ಡೇರ್‌ಡೆವಿಲ್’ ಮಾಡಹೋಗಿ ಸಿಕ್ಕಿಬಿದ್ದ ಯುವಕ…

    ನನ್ನದಲ್ಲದ ತಪ್ಪಿಗೆ ಕೆಲಸ ಕಳೆದುಕೊಂಡರೆ ಪತ್ನಿಯಿಂದ ಹೀಗೆಲ್ಲಾ ಹಿಂಸೆ ಪಡಬೇಕೆ? ಇದ್ಯಾವ ಜನ್ಮದ ಕರ್ಮ ಮೇಡಂ…

    ಹಾಬಿಯೇ ಜಾಬ್!; ಮನೆಯಲ್ಲಿದ್ದುಕೊಂಡೇ ಗಳಿಸಲು ಮಹಿಳೆಯರಿಗೆ ಅವಕಾಶ

    ಇದು ಮಹಿಳೆಯ ಆಸ್ತಿ ಕೇಸ್ ಹಾಕಿದ್ರೆ ನಡೆಯಲ್ಲ!; ಹಲವರ ಕಣ್ತೆರೆಸುವ ಸುಪ್ರೀಂಕೋರ್ಟ್ ತೀರ್ಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts