More

    ಕೊನೆ ಕ್ಷಣದಲ್ಲಿ ಕೈಕೊಟ್ಟ ಅಖಿಲೇಶ್​ ಯಾದವ್​! ಉನ್ನಾವೋ ರೇಪ್​ ಸಂತ್ರಸ್ತೆಯ ತಾಯಿಗೆ ಸಿಗಲಿಲ್ಲ ಮತದಾರರ ಬೆಂಬಲ

    ಉನ್ನಾವೋ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಕಾಂಗ್ರೆಸ್​ ಹೀನಾಯ ಸೋಲು ಕಂಡಿದೆ. ಇಡೀ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ಉನ್ನಾವೋ ಅತ್ಯಾಚಾರ ಕೇಸ್​ನ ಸಂತ್ರಸ್ತೆ ತಾಯಿ ಆಶಾ ಸಿಂಗ್‌ ಅವರಿಗೆ ಕಾಂಗ್ರೆಸ್​ನಿಂದ ಟಿಕೆಟ್​ ನೀಡಲಾಗಿತ್ತು. ಆದರೆ ಮತದಾರ ಇವರಿಗೆ ಬೆಂಬಲ ಸೂಚಿಸಲಿಲ್ಲ.

    ಈಗ 10ನೇ ಸುತ್ತಿನ ಮತಎಣಿಕೆ ಮುಕ್ತಾಯಗೊಂಡಿದ್ದು ಆಶಾ ಅವರಿಗೆ ಕೇವಲ 438 ಮತ ಬಂದಿದೆ. ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಪಂಕಜ್ ಗುಪ್ತಾ ಭಾರಿ ಬಹುಮತ ಪಡೆದುಕೊಂಡಿದ್ದಾರೆ. ಆಶಾ ಅವರು ಕಣದಲ್ಲಿದ್ದ ಹಿನ್ನೆಲೆಯಲ್ಲಿ ತಾನು ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ತಿಳಿಸಿದ್ದರು. ಆದರೆ ಮಾತು ಮೀರಿ ಕೊನೆ ಕ್ಷಣದಲ್ಲಿ ಅಭಿನವ್​ ಕುಮಾರ್​ಗೆ ಪಕ್ಷ ಟಿಕೆಟ್ ನೀಡಿತ್ತು.

    10ನೇ ಸುತ್ತಿನ ಮತ ಎಣಿಕೆಯ ನಂತರ ಬಿಜೆಪಿಯ ಪಂಕಜ್ ಗುಪ್ತಾ 42,021 ಮತಗಳನ್ನು ಪಡೆದಿದ್ದರೆ, ಅಭಿನವ್​ ಕುಮಾರ್​​ 30,612 ಮತ ಪಡೆದುಕೊಂಡಿದ್ದಾರೆ. ಆಶಾ ಅವರಿಗೆ ಕೇವಲ 438 ಮತಗಳು ಬಂದಿವೆ.

    ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಪಕ್ಷ ಶೇ. 40ರಷ್ಟು ಮಹಿಳೆಯರಿಗೆ ಆದ್ಯತೆ ನೀಡಿತ್ತು. ಇದರಲ್ಲಿ ಉನ್ನಾವೋ ಅತ್ಯಾಚಾರ​ ಕೇಸ್​, ಸೋನಭದ್ರ ಹತ್ಯಾಕಾಂಡದ ಸಂತ್ರಸ್ತೆ ಹಾಗು ಆಶಾ ಕಾರ್ಯಕರ್ತೆ ಪೂನಂ ಪಾಂಡೆ, ಮಾಡೆಲ್‌​​​ ಅರ್ಚನಾ ಗೌತಮ್ ಕೂಡ ಇದ್ದರು.

    ಏಳೇಳು ದಾಖಲೆಗಳ ಸರದಾರ ಯೋಗಿ ಆದಿತ್ಯನಾಥ: 37 ವರ್ಷಗಳಲ್ಲಿ ಅಧಿಕಾರ ಉಳಿಸಿಕೊಂಡ ಮೊದಲ ಸಿಎಂ

    ಯಾರೂ ಕಾಲಿಡದ ಜಾಗಕ್ಕೆ ಭೇಟಿ ನೀಡಿ ಗೆದ್ದು ಬೀಗಿದ ಯೋಗಿ: 29 ವರ್ಷಗಳ ನಂಬಿಕೆಯೇ ಸುಳ್ಳಾಗೋಯ್ತು!

    ಹಾಸ್ಯಗಾರನಿಗೆ ಒಲಿದ ಪಂಜಾಬ್​ ಗದ್ದುಗೆ: ಅಮ್ಮ ಹೇಳಿದ್ದು ನಿಜವಾಯ್ತು… ಕುಡುಕ ಎಂದವರಿಗೆ ಮುಖಭಂಗವಾಯ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts