More

    ಧಾರ್ಮಿಕ ವಿಚಾರ ಬೋಧಿಸಲು ಸೇನೆಗೆ ಬೇಕಾಗಿದ್ದಾರೆ 194 ಗುರುಗಳು

    ಭಾರತೀಯ ಸೇನೆಯ ಆರ್​ಆರ್​ಟಿ 91, 92, 93, 94 ಮತ್ತು 95 ಕೋರ್ಸ್‍ಗಳಿಗೆ ಜೂನಿಯರ್ ಕಮಿಷನ್ಡ ಆಫೀಸರ್‍ಗಳಾಗಿ ಧಾರ್ಮಿಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಭಾರತೀಯ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ. ಒಟ್ಟು ಹುದ್ದೆಗಳು: 194

    ಹುದ್ದೆ, ಸಂಖ್ಯೆ ವಿವರ
    * ಪಂಡಿತ್ – 171
    * ಪಂಡಿತ್ (ಗೋರ್ಖಾ) (ಹಿಂದು ಗೋರ್ಖಾ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ) – 9
    * ಗ್ರಂಥಿ – 5
    * ಮೌಲ್ವಿ (ಸುನ್ನಿ) – 5
    * ಮೌಲ್ವಿ (ಲಡಾಖಿ ಮುಸ್ಲಿಂ ಶಿಯಾ ಅಭ್ಯರ್ಥಿಯಾಗಿರಬೇಕು)- 1
    *ಪಾದ್ರಿ- 2
    * ಬೌದ್ಧ ಗುರುಗಳು (ಮಹಾಯಾನ ಪಂಥ) – 1

    ವಿದ್ಯಾರ್ಹತೆ: ಯಾವುದೇ ಪದವಿ ಜತೆ ಪಂಡಿತ್ ಹುದ್ದೆಗೆ ಸಂಸ್ಕೃತದಲ್ಲಿ ಆಚಾರ್ಯ/ ಕರ್ಮಕಾಂಡ ವಿಷಯದಲ್ಲಿ ಡಿಪ್ಲೋಮಾ, ಗ್ರಂಥಿಗೆ ಸಿಖ್ ಅಭ್ಯರ್ಥಿಯಾಗಿದ್ದು, ಪಂಜಾಬಿಯಲ್ಲಿ `ಜ್ಞಾನಿ’ ಆಗಿರಬೇಕು, ಮೌಲ್ವಿಯು ಮುಸ್ಲಿಂ ಅಭ್ಯರ್ಥಿಯಾಗಿದ್ದು, ಅರೇಬಿಕ್‍ನಲ್ಲಿ ಮೌಲ್ವಿ ಅಲಿಮ್/ ಉರ್ದುವಿನಲ್ಲಿ ಅದಿಬ್ ಅಲಿಮ್, ಪಾದ್ರಿ ಹುದ್ದೆಗೆ ನಿಯೋಜಿತಗೊಂಡಿರುವ, ಬೌದ್ಧಗುರು ಎಂಬ ಮಾನ್ಯತೆ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಯೋಮಿತಿ: 1.10.2021ಕ್ಕೆ ಕನಿಷ್ಠ 25 ವರ್ಷ, ಗರಿಷ್ಠ 34 ವರ್ಷ. (ಅಭ್ಯರ್ಥಿಗಳು 1.10.1987ರ ನಂತರ 30.11.2021ರ ಒಳಗೆ ಜನಿಸಿರಬೇಕು)

    ದೈಹಿಕ ದೃಢತೆ: ಎತ್ತರ – 160 ಸೆಂ.ಮೀ., ಗೋರ್ಖಾ ಮತ್ತು ಲಡಾಖ್ ಪ್ರದೇಶದವರಿಗೆ 157 ಸೆಂ.ಮೀ., ಎದೆ ಸುತ್ತಳತೆ – 77 ಸೆಂ.ಮೀ., ತೂಕ – ಸಾಮಾನ್ಯವರ್ಗ 50 ಕೆಜಿ, ಗೋರ್ಖಾ ಮತ್ತು ಲಡಾಕಿಗೆ 48 ಕೆಜಿ, ದೈಹಿಕ ಸಾಮಥ್ರ್ಯದಲ್ಲಿ ಅಭ್ಯರ್ಥಿಯು 1,600 ಮೀಟರ್ ದೂರವನ್ನು 8 ನಿಮಿಷದಲ್ಲಿ ಓಡುವಂತಿರಬೇಕು.

    ಆಯ್ಕೆ ಪ್ರಕ್ರಿಯೆ: ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು 27.6.2021ರಂದು ನಡೆಯುವ ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುವುದು.

    ಕರ್ತವ್ಯ: ಧಾರ್ಮಿಕ ಶಿಕ್ಷಕರು, ರಿಜಿಮೆಂಟಲ್/ ಯುನಿಟ್‍ಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಆಚರಿಸುವುದು, ಸೈನಿಕರಿಗೆ ಧಾರ್ಮಿಕ ವಿಚಾರಗಳನ್ನು ಬೋಧಿಸುವುದು, ಆಸ್ಪತ್ರೆಯಲ್ಲಿರುವ ಅನಾರೋಗ್ಯ ಪೀಡಿತರಿಗೆ ಸೇವೆ ಸಲ್ಲಿಸುವುದು, ಅಂತ್ಯಕ್ರಿಯೆಗೆ ಹಾಜರಾಗುವುದು, ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವವರ ಜತೆ ಪ್ರಾರ್ಥನೆ ಸಲ್ಲಿಸುವುದು, ಶಿಕ್ಷೆಗೆ ಒಳಗಾಗುವ ಸೈನಿಕರನ್ನು ಭೇಟಿ ಮಾಡುವುದು, ಮಕ್ಕಳಿಗೆ ಹಾಗೂ ಕೆಲಸಕ್ಕೆ ದಾಖಲಾದವರಿಗೆ ವಿಶೇಷ ಧಾರ್ಮಿಕ ಸೂಚನೆ ನೀಡುವುದು, ಅಧಿಕಾರಿಗಳು, ಸೈನಿಕರು ಹಾಗೂ ಅವರ ಕುಟುಂಬಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಜರಾಗುವುದು ಮತ್ತು ಸಲಹೆ ನೀಡುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 9.2.2021
    ಅಧಿಸೂಚನೆಗೆ: https://bit.ly/3nIQn7y
    ಮಾಹಿತಿಗೆ: http://www.joinindianarmy.nic.in

    ಹೆಚ್ಚಿನ ಉದ್ಯೋಗ ಮಾಹಿತಿಗೆ ನೋಡಿ   

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

     

    ಪದವೀಧರರು ಪಡೆಯಬಹುದು ₹62 ಸಾವಿರ ವೇತನ- ಇಸಿಜಿಸಿನಲ್ಲಿ ಪ್ರೊಬೇಷನರಿ ಆಫೀಸರ್ಸ್​ ನೇಮಕ

    ಕಾನೂನು ಪದವಿ ಕಲಿತಿರುವಿರಾ? ನ್ಯಾಷನಲ್ ಲಾ ಕಾಲೇಜಿನಲ್ಲಿ ಇವೆ ಉದ್ಯೋಗಾವಕಾಶ

    ಎಚ್‍ಎಎಲ್ ಶಿಕ್ಷಣ ಸಂಸ್ಥೆಯಲ್ಲಿ ಬೋಧಕ- ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts