More

    ಡಾ.ಅಂಬೇಡ್ಕರ್ ಆಶಯ ಈಡೇರಿಕೆ ನಮ್ಮ ಹೊಣೆ

    ನಂಜನಗೂಡು: ದೇಶಕ್ಕೆ ಶ್ರೇಷ್ಠ ಸಂವಿಧಾನವನ್ನು ಕೊಡುಗೆಯಾಗಿ ನೀಡಿರುವ ಡಾ.ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸುವುದು ಹೊಣೆ ನಮ್ಮೆಲ್ಲರದ್ದಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

    ಮಂಗಳವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಅಂಬೇಡ್ಕರ್ ಸೇನೆಯಿಂದ ಡಾ.ಅಂಬೇಡ್ಕರ್ ಅವರ 67ನೇ ಪರಿನಿಬ್ಬಾಣ ದಿನದ ಅಂಗವಾಗಿ ಆಯೋಜಿಸಿದ್ದ ‘ಸಂವಿಧಾನ ರಕ್ಷಣೆ ಕುರಿತ ಜಾಗೃತಿ ಅಭಿಯಾನ’ ವಿಚಾರ ಸಂಕಿರಣದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

    ಇಡೀ ವಿಶ್ವದಲ್ಲೇ ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವೆನ್ನುವ ಹಿರಿಮೆಯನ್ನು ಹೊಂದಿದ್ದು, ವಿವಿಧ ಭಾಷೆ, ಸಂಸ್ಕೃತಿ ಹಾಗೂ ಧರ್ಮದ ಜನರನ್ನು ಒಟ್ಟಾಗಿ ಕೊಂಡೊಯ್ಯುವ ಸಾಮರ್ಥ್ಯವನ್ನು ಭಾರತ ಸಂವಿಧಾನ ಹೊಂದಿದೆ. ಇನ್ನು ಕುಗ್ರಾಮವೊಂದರಲ್ಲಿ ಹುಟ್ಟಿದ್ದ ನಮ್ಮ ತಂದೆ ಆರ್.ಧ್ರುವನಾರಾಯಣ ಅವರು ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕೇವಲ 1 ಮತದ ಅಂತರದಿಂದ ಶಾಸಕರಾಗಿ ಆಯ್ಕೆಯಾಗಲು ಬಾಬಾ ಸಾಹೇಬರು ನೀಡಿರುವ ಸಂವಿಧಾನವೇ ಕಾರಣ. ಜನರು ಸಂವಿಧಾನದ ಮಹತ್ವವನ್ನು ಅರಿತುಕೊಂಡಲ್ಲಿ ದೇಶದ ಉತ್ತಮ ನಾಗರಿಕರಾಗಬಹುದು. ಈ ನಿಟ್ಟಿನಲ್ಲಿ ಸಂಬೇಡ್ಕರ್ ಸೇನೆಯಿಂದ ಆಯೋಜಿಸಿರುವ ವಿಚಾರ ಸಂಕಿರಣ ಪ್ರಯೋಜನ ಆಗಲಿದೆ ಎಂದರು.

    ತಿ.ನರಸೀಪುರ ನಳಂದ ಬುದ್ಧವಿಹಾರದ ಬೋಧಿರತ್ನ ಬಂತೇಜಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂದೇಶಗಳನ್ನು ಜನರಿಗೆ ತಿಳಿಸಿಕೊಡುವ ಜತೆಗೆ ಸಂವಿಧಾನ ರಕ್ಷಣೆಯ ಮಹತ್ವವನ್ನೂ ತಿಳಿಸಿಕೊಡಬೇಕಿದೆ. ಆ ಮೂಲಕ ದೇಶದ ಸಂವಿಧಾನವನ್ನು ಹೆಚ್ಚು ಬಲಯುತಗೊಳಿಸಬೇಕಿದೆ ಎಂದು ಹೇಳಿದರು. ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ನಾಗೇಂದ್ರ ಬಸವಟ್ಟಿಗೆ, ಚೆಲುವರಾಜು ಆನಂದಪುರ, ಸಿದ್ದರಾಜು ಹುಸ್ಕೂರು, ಮಹದೇವಸ್ವಾಮಿ ಶಂಕರಪುರ, ವೆಂಕಟೇಶ್ ಕಸುವಿನಹಳ್ಳಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts