More

    ತೋಟ, ಹೊಳೆಗಳಲ್ಲಿ ಉಗ್ರರಿಂದ ಭೂಗತ ಬಂಕರ್​ನಿರ್ಮಾಣ! ಸ್ಫೋಟಕ ಮಾಹಿತಿ ಬಹಿರಂಗ

    ಶ್ರೀನಗರ: ಸೇನೆಯ ಹದ್ದಿನಗಣ್ಣಿನಿಂದ ತಪ್ಪಿಸಿಕೊಳ್ಳಲು ಉಗ್ರ ನುಸುಳುಕೋರರು ಕಾಶ್ಮೀರ ಗಡಿಯಲ್ಲಿ ಭೂಗತ ಬಂಕರ್‌ಗಳನ್ನು ನಿರ್ಮಿಸಿರುವ ಆತಂಕಕಾರಿ ವಿಷಯವನ್ನು ಭಾರತೀಯ ಸೇನೆ ಬಹಿರಂಗಪಡಿಸಿದೆ.

    ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ಉಗ್ರರು ಸೇನೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಹಸ್ಯವಾಗಿ ಭೂಗತ ಬಂಕರ್‌ಗಳ ಮೊರೆ ಹೋಗಿರುವುದು ತಿಳಿದುಬಂದಿದೆ. ಈ ಹಿಂದೆ ಸ್ಥಳೀಯರ ನಿವಾಸಗಳಲ್ಲಿ ಅಡಗಿಕೊಳ್ಳುತ್ತಿದ್ದ ಉಗ್ರರು, ಇದೀಗ ಈ ರೀತಿಯ ಭೂಗತ ಬಂಕರ್​ ನಿರ್ಮಾಣದ ಮೊರೆ ಹೋಗುತ್ತಿದ್ದಾರೆ.

    ರಾಂಬಿ ಅರಾ ನದಿಯ ಮಧ್ಯದಲ್ಲಿ ಕಬ್ಬಿಣದ ಬಂಕರ್‌ ನಿರ್ಮಿಸಿರುವ ಉಗ್ರರು ಅಲ್ಲಿಂದ ಭಾರತಕ್ಕೆ ನುಸುಳಲು ನೋಡಿದ್ದಾರೆ. ಪುಲ್ವಾಮಾ, ಶೋಪಿಯಾನ್‌ ಜಿಲ್ಲೆಗಳಲ್ಲಿ ಭೂಗತ ಬಂಕರ್‌ಗಳು ಸಾಕಷ್ಟು ಕಂಡುಬಂದಿವೆ. ಇವಷ್ಟೇ ಅಲ್ಲದೇ, ದಟ್ಟವಾದ ತೋಟಗಳು ಇಲ್ಲವೇ ಸಣ್ಣಹೊಳೆಗಳ ಬಳಿ ಭೂಗತ ಬಂಕರ್ ನಿರ್ಮಿಸಿಕೊಂಡು ಸೇನೆ ಮತ್ತು ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳುವ ಮಾರ್ಗ ಹುಡುಕುತ್ತಿರುವ ವಿಷಯ ಬಹಿರಂಗಗೊಂಡಿದೆ.

    ಇದನ್ನೂ ಓದಿ: ಲಡಾಖ್​ ಗಡಿಯಲ್ಲಿನ್ನು ಅವಳಿ ಡುಬ್ಬಗಳ ಒಂಟೆಗಳದ್ದೇ ಕಾರುಬಾರು: ಏಕೆ ಗೊತ್ತಾ?

    ಅದರಲ್ಲಿಯೂ ಸೇಬಿನ ತೋಟಗಳು, ನದಿಗಳ ಅಡಿಯಲ್ಲೂ ಇಂಥ ಬಂಕರ್‌ಗಳನ್ನು ನಿರ್ಮಿಸಲಾಗಿದೆ. ‘ಸೇಬಿನ ತೋಟಗಳ ಅಡಿಯಲ್ಲೂ ಇಂಥದ್ದೇ ಮಾದರಿಯ ಬಂಕರ್‌ಗಳನ್ನು ನಿರ್ಮಿಸಿದ್ದರು. ಇದಕ್ಕಾಗಿ ಉಗ್ರರು ಖಾಲಿ ಟಾರ್‌ ಬ್ಯಾರೆಲ್‌ಗ‌ಳನ್ನು ಬಳಸಿಕೊಂಡಿದ್ದರು’ ಎಂದು 44 ರಾಷ್ಟ್ರೀಯ ರೈಫ‌ಲ್ಸ್‌ ಮುಖ್ಯಸ್ಥ ಕ್ಯಾಪ್ಟನ್​ ಎ.ಕೆ. ಸಿಂಗ್‌ ತಿಳಿಸಿದ್ದಾರೆ. ಉಗ್ರರ ಈ ಹೊಸ ಟ್ರೆಂಡ್ ಬರೀ ಶೋಪಿಯಾನ್‌ಗೆ ಮಾತ್ರ ಸೀಮಿತವಾಗಿಲ್ಲ. ಪುಲ್ವಾಮಾ ಜಿಲ್ಲೆಯ ಸೇಬಿನ ತೋಟಗಳು, ದಟ್ಟಕಾಡುಗಳಲ್ಲೂ ಇಂಥ ಬಂಕರ್‌ಗಳಿವೆ ಎನ್ನುತ್ತಾರೆ ಅವರು.

    ಕೆಲ ಉಗ್ರರು ಮಳೆಗಾಲದಲ್ಲಿ ಮಾತ್ರ ಹರಿಯುವ ಹೊಳೆಯ ಮಧ್ಯದಲ್ಲೂ ಬಂಕರ್ ನಿರ್ಮಿಸಿಕೊಂಡಿದ್ದಾರೆ. ರಹಸ್ಯ ಬಂಕರ್‌ಗಳಲ್ಲಿ ಅಡಗಿರುವ ಉಗ್ರರನ್ನು ಪತ್ತೆ ಹಚ್ಚುವುದು ಸುಲಭದ ಕೆಲಸವಲ್ಲ. ಅಲ್ಲಿ ಉಗ್ರರು ಬಹಳ ದಿನಗಳವರೆಗೆ ಸುರಕ್ಷಿತವಾಗಿ ಅಡಗಿರುವ ಸಾಧ್ಯತೆಯೂ ಇದೆ ಎಂದು ಸೇನಾಧಿಕಾರಿಗಳು ಹೇಳುತ್ತಾರೆ.

    ಎ.ಕೆ. ಸಿಂಗ್‌ ನೇತೃತ್ವದ ತಂಡ ಈಗಾಗಲೇ 47 ಉಗ್ರರ ಕಾರ್ಯಾಚರಣೆಯನ್ನು ತಟಸ್ಥಗೊಳಿಸಿದೆ. ಏಳು ಉಗ್ರರು ಶರಣಾಗತಿ ಹೊಂದಿದ್ದಾರೆ.

    ಚೀನಾ ಔಷಧ ಕಂಪೆನಿಯಿಂದ ಸೋರಿಕೆ: ಪುರುಷರ ಕಾಡಲಿದೆ ಈ ಮಹಾಮಾರಿ ಬ್ಯಾಕ್ಟೀರಿಯಾ!

    ಅತ್ಯಾಚಾರ ಮಾಡಿದರೆ ವೃಷಣಕ್ಕೇ ಕತ್ತರಿ!​​ ಈ ದೇಶದಲ್ಲಿ ಬಂತು ಹೊಸ ಕಾನೂನು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts