More

    ಗಡಿ ಸಮಸ್ಯೆಗೆ ನೆಹರು ಕಾರಣ – ಸುಧೀರ ಮುನಗಂಟಿವಾರ್

    ವಿಜಯಪುರ: ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗ ಸಮಸ್ಯೆ ಹುಟ್ಟು ಹಾಕಿದ್ದು ಕಾಂಗ್ರೆಸ್. ಇದರ ಪಿತಾಮಹ ಪಂಡಿತ ಜವಾಹರಲಾಲ್ ನೆಹರು. ಗಡಿ ಸಮಸ್ಯೆ ಬಗೆಹರಿಸಲು ಸಭೆ ಕರೆಯಿರಿ ಎಂದು ಕೇಳಿದ್ದ ಮನವಿಗೆ ನೆಹರು ಅವರು ಇದು ಎರಡು ರಾಜ್ಯದ ಸೆಕ್ರೆಟರಿಗಳು ಬಗೆಹರಿಸುತ್ತಾರೆ ಎಂದು ಸಮಸ್ಯೆ ಪರಿಹರಿಸದೆ ಜಾರಿಕೊಂಡಿದ್ದರು ಎಂದು ಮಹಾರಾಷ್ಟ್ರದ ಅರಣ್ಯ ಮತ್ತು ಮೀನುಗಾರಿಕೆ ಸಚಿವ ಸುಧೀರ ಮುನಗಂಟಿವಾರ್ ಆರೋಪಿಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿವಾದವನ್ನು ಸೆಕ್ರೆಟರಿ ಹೇಗೆ ಬಗೆಹರಿಸಲು ಸಾಧ್ಯವಾಗುತ್ತದೆ? ಅದು ಗದ್ದುಗೆಯಲ್ಲಿ ಇರುವವರು ಮಾಡಬೇಕಾದ ಕೆಲಸ. ಸದ್ಯ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ. ಈ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದರು.

    ಕರ್ನಾಟಕ ಏಕೀಕರಣವಾದಾಗಿನಿಂದ ಈ ಸಮಸ್ಯೆ ಉದ್ಬವವಾಗಿದೆ. ಮಾತುಕತೆಯಿಂದ ಬಗೆಹರಿಸುವ ಸಮಸ್ಯೆಯನ್ನು ಅಂದು ಜವಾಹರಲಾಲ್ ನೆಹರು ಬಗೆಹರಿಸುವುದು ಬಿಟ್ಟಿರುವ ಪರಿಣಾಮ ಈ ಸಮಸ್ಯೆ ಇಷ್ಟು ದೊಡ್ಡದಾಗಿದೆ. ಇದು ಯಾವುದೇ ರಾಜಕೀಯ ಸಮಸ್ಯೆ ಅಲ್ಲ. ಎರಡು ರಾಜ್ಯಗಳ ನಡುವೆ ಇರುವ ವಿವಾದವನ್ನು ಕಾಂಗ್ರೆಸ್ ಇನ್ನೂ ಜೀವಂತವಾಗಿಟ್ಟಿದೆ ಎಂದರು.

    ಎಂಇಎಸ್ ಈ ವಿಷಯವನ್ನು ಪದೇ ಪದೇ ಕೆಣಕುತ್ತಿರುವುದು ಅವರ ಸ್ವತಂತ್ರೃದ ಹಕ್ಕು. ಅದನ್ನು ಯಾರು ಕೇಳಲು ಬರುವುದಿಲ್ಲ. ಅದರ ಮೇಲೆ ಮತಯಾಚನೆ ಮಾಡುತ್ತಿರುವುದು ಅದು ಸಂವಿಧಾನಿಕ ಅಧಿಕಾರವಾಗಿದೆಯೇ ಹೊರತು ಇದರಲ್ಲಿ ಮಹಾರಾಷ್ಟ್ರ ಸರ್ಕಾರ ಏನು ಮಾಡಬೇಕು. ಸುಪ್ರೀಂ ಕೋರ್ಟ್‌ನಲ್ಲಿ ವಿಷಯವಿರುವಾಗ ಅದರ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದರು.

    ಮೀಸಲಾತಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಡಾ. ಅಂಬೇಡ್ಕರ್ ಸಂವಿಧಾನವನ್ನು ಧರ್ಮದ ಆಧಾರದ ಮೇಲೆ ನೀಡಲು ಬರುವುದಿಲ್ಲ ಎಂದಿದ್ದರು. ಆದರೆ ಕಾಂಗ್ರೆಸ್ ಖುರ್ಚಿ ಆಸೆಗಾಗಿ ಅಲ್ಪಸಂಖ್ಯಾತರಿಗೆ ಶೇ. 4ರಷ್ಟು ಮೀಸಲಾತಿ ನೀಡಿತ್ತು. ಪ್ರಧಾನಿ ನರೇಂದ್ರ ಮೋದಿ ದೇಶದ ಯಾವುದೇ ಸಮಸ್ಯೆ ಬಗೆಹರಿಸದೇ ಸುಮ್ಮನಿರಲ್ಲ. ಜಮ್ಮು-ಕಾಶ್ಮೀರ ಮೇಲಿನ 370ನೇ ವಿಧಿಯಾಗಲಿ, ತಲಾಕ್ ವಿಷಯವಾಗಲಿ ಬಗೆಹರಿಸಿದ್ದಾರೆ ಎಂದರು.

    ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಸಾರ್ವಜನಿಕರಿಗೆ ದೊರೆಯುವ ಮೂಲ ಸಮಸ್ಯೆಗಳನ್ನು ನೀಡುತ್ತಲೇ ಬಂದಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯವಾಗಲು ಬರುವ ಮೇ 10 ರಂದು ನಡೆಯುವ ವಿಧಾನಸಭೆ ಚುನಾವಣೆ ಮತದಾನದಲ್ಲಿ ಬಿಜೆಪಿ ಕಮಲದ ಗುರುತಿಗೆ ಮತಹಾಕಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts