More

    ಬಂಕರ್ ಕಾರ್ಯ ಸ್ಥಗಿತಕ್ಕೆ ಆಗ್ರಹ

    ಸಂಡೂರು: ತಾಲೂಕಿನ ನರಸಿಂಗಾಪುರ ಹಾಗೂ ರಣಜೀತ್‌ಪುರ ಸಮೀಪ ಗ್ರಾಪಂ ಪರವಾನಗಿ ಪಡೆಯದೆ ಆರ್‌ಐಪಿಎಲ್ ಕಂಪನಿ ಸ್ಥಾಪಿಸಿರುವ ಬಂಕರ್ ಮತ್ತು ಚಿಮಣಿ ಧೂಳಿನಿಂದ ಅಡಕೆ ಬೆಳೆ ನಾಶವಾಗುತ್ತಿದ್ದು ಕೂಡಲೇ ಬಂಕರ್ ನಿಲ್ಲಿಸಬೇಕೆಂದು ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ಗ್ರೇಡ್-2 ತಹಸೀಲ್ದಾರ್ ಕೆ.ಎಂ.ಶಿವಕುಮಾರ್‌ಗೆ ಬುಧವಾರ ಮನವಿ ಸಲ್ಲಿಸಿದರು.

    ಪಟ್ಟಣದ ತಹಸಿಲ್ ಕಚೇರಿ ಆವರಣದಲ್ಲಿ ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎಂಎಲ್‌ಕೆ ನಾಯ್ಡು , ಕಂಪನಿ ಸ್ಥಾಪನೆ ಸ್ಥಳದಲ್ಲಿ 11-15 ಕೊಳೆವೆಬಾವಿಗಳನ್ನು ಕೊರೆಸಿ ನೀರು ಎತ್ತುತ್ತಿರುವುದರಿಂದ ರೈತರ ಕೊಳವೆಬಾವಿಯಲ್ಲಿ ಅಂತರ್ಜಲ ಇಂಗುತ್ತಿದ್ದು ಕೃಷಿ ಕೈಬಿಡುವ ಅನಿವಾರ್ಯತೆ ಎದುರಾಗಿದೆ ಎಂದು ದೂರಿದರು.

    ರೈತ ಸಂಘದ ನರಸಿಂಗಾಪುರ ಗ್ರಾಮ ಘಟಕ ಅಧ್ಯಕ್ಷ ನೀಲಕಂಠ ದೇಸಾಯಿ ಮಾತನಾಡಿ, ಬಂಕರ್ ಮತ್ತು ಚಿಮಣಿ ಧೂಳು ಜನರ ಆರೋಗ್ಯದ ಮೇಲೆ ದುಷ್ಪರಿನಾಮ ಬೀರುತ್ತಿದೆ. ಕಂಪನಿ ಸ್ಥಳೀಯರಿಗೆ ಉದ್ಯೋಗ ಕೊಡುತ್ತಿಲ್ಲ. ಇದರ ಸರಕು ಸಾಗಣೆ ವಾಹನಗಳು ನರಸಿಂಗಾಪುರ ಸಾರ್ವಜನಿಕ ರಸ್ತೆಯಲ್ಲಿ ಬೇಕಾ ಬಿಟ್ಟಿಯಾಗಿ ಸಂಚರಿಸಿ ಟ್ರಾಫಿಕ್ ಜಾಮ್ ಉಂಟು ಮಾಡುತ್ತಿವೆ. ಸಮೀಪದ ಎನ್‌ಎಂಡಿಸಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
    ಪದಾಧಿಕಾರಿಗಳಾದ ಜಿ.ಕೆ.ರಮೇಶ್, ಬಸವಕುಮಾರ್, ಜಗದೀಶ್, ಆಂಜನೇಯ, ಮಂಜುನಾಥ, ತಾರಕೇಶ್, ಹುಲುಗಪ್ಪ, ರಮೇಶ್ ಕುಮಾರ್, ಮರುಳಸಿದ್ದೇಶ್ವರ, ದೇಸಾಯಿ, ರಾಮಸ್ವಾಮಿ, ನಾಗರಾಜ, ಬಾಬಯ್ಯ, ಯರ‌್ರಿಸ್ವಾಮಿ, ಹುಲುಗಪ್ಪ, ಗಾಳೆಪ್ಪ, ಗಂಗಣ್ಣ, ಜಿ.ಪರಮೇಶ್ವರಪ್ಪ, ರಣಜೀತ್‌ಪುರದ ಕಾಡಪ್ಪ ಇತರರಿದ್ದರು.
    (29-ಸಂಡೂರು-6)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts