More

    ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸೋನುಸೂದ್‌ ತಂಗಿ: ಪಂಜಾಬ್‌ನಿಂದ ಸ್ಪರ್ಧೆ- ಪಕ್ಷವಿನ್ನೂ ಸಸ್ಪೆನ್ಸ್‌

    ಚಂಡೀಗಢ: ಕರೊನಾ ಮೊದಲ ಹಂತದಿಂದ ಇಲ್ಲಿಯವರೆಗೂ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಜನಮನ ಗೆದ್ದಿರುವ ನಟ ಸೋನು ಸೂದ್‌ ರಾಜಕೀಯ ಪ್ರವೇಶಿಸುತ್ತಾರೆ ಎಂದೇ ಹೇಳಲಾಗುತ್ತಿತ್ತು. ಆದರೆ ಈಗ ಅವರ ಸಹೋದರಿ ಮಾಳವಿಕಾ ರಾಜಕೀಯ ಪ್ರವೇಶಿಸಿದ್ದಾರೆ.

    ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಚರಣ್‍ಜೀತ್ ಸಿಂಗ್ ಚನ್ನಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದರು. ಕೇಜ್ರಿವಾಲ್ ಅವರೊಂದಿಗಿನ ಭೇಟಿ ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿಯಾಗಿ ರಾಜಕೀಯ ಪ್ರವೇಶಿಸಲಿದ್ದಾರೆ ಎಂದು ಸುದ್ದಿ ಹರಡಿತ್ತು. ಆದರೆ ಅದರ ಬೆನ್ನಲ್ಲೇ ಇದೀಗ ಸಹೋದರಿಯ ಬಗ್ಗೆ ಸೂದ್‌ ಮಾತನಾಡಿದ್ದಾರೆ.

    ಪಂಜಾಬ್‌ನ ಚುನಾವಣೆಯಲ್ಲಿ ತಮ್ಮ ಸಹೋದರಿ ಸ್ಪರ್ಧಿಸಲಿದ್ದಾರೆ ಎಂದು ಸೋನು ಸೂದ್‌ ಖುದ್ದಾಗಿ ಮಾಹಿತಿ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಚಂಡೀಗಢದಿಂದ ಸುಮಾರು 170 ಕಿಮೀ ದೂರದಲ್ಲಿರುವ ಮೊಗಾ ಎಂಬಲ್ಲಿ ಈ ಪತ್ರಿಕಾಗೋಷ್ಠಿ ನಡೆದಿತ್ತು. ಅಲ್ಲಿ ಅವರು ತಮ್ಮ ಸಹೋದರಿ ಚುನಾವಣಾ ರಂಗಕ್ಕೆ ಇಳಿಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

    ‘2022ರಲ್ಲಿ ನಡೆಯಲಿರುವ ಪಂಜಾಬ್ ಚುನಾವಣೆಯಲ್ಲಿ ಸಹೋದರಿ ಮಾಳವಿಕಾ ಸ್ಪರ್ಧಿಸಲಿದ್ದಾರೆ’ ಎಂದಷ್ಟೇ ಹೇಳೀರುವ ಅವರು, ಯಾವ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿಲ್ಲ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ನಾವು ಯಾವುದೇ ರಾಜಕೀಯವನ್ನು ಚರ್ಚಿಸಿಲ್ಲ ಎಂದಷ್ಟೇ ಹೇಳಿದರು.

    ‘ಅರೆರೆ… ಕೈಗೆ ಇದೇನಾಯ್ತು?’ ಅಭಿಮಾನಿಗಳ ಪ್ರಶ್ನೆಗಳಿಗೆ ನಟಿ ರಶ್ಮಿಕಾ ಉತ್ತರಿಸಿದ್ದಾರೆ ನೋಡಿ…

    ‘ಪದ್ಮಶ್ರೀ’ ಪಡೆದ ಪಾಕ್‌ನ ಯೋಧ! 50 ವರ್ಷಗಳ ಹಿಂದೆಯೇ ಜಾರಿಯಾಗಿದೆ ಗಲ್ಲುಶಿಕ್ಷೆ: ಇವರ ಕಥೆಯೇ ರೋಚಕ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts