More

    ಸರ್ಕಾರದಿಂದ ಭೂಮಿ ಪಡೆದು ಸುಮ್ಮನೆ ಕುಳಿತ ಸೊಸೈಟಿಗಳಿಗೆ ಶಾಕ್​- ಜಮೀನು ವಾಪಸ್​

    ಬೆಂಗಳೂರು: ಸಹಕಾರಿ ತತ್ವದಡಿ ವ್ಯವಸಾಯ ಮಾಡುವ ಉದ್ದೇಶದಿಂದ ಸರ್ಕಾರದಿಂದ ಭೂಮಿಯನ್ನು ಪಡೆದುಕೊಂಡ ಸೊಸೈಟಿಗಳು ಪ್ರಸ್ತುತ ಅಸ್ತಿತ್ವದಲ್ಲಿ ಇರದಿದ್ದರೆ ಆ ಭೂಮಿಯನ್ನು ವಾಪಾಸು ಪಡೆಯುವುದಾಗಿ ಕಂದಾಯ ಸಚಿವರು ಘೋಷಿಸಿದ್ದಾರೆ.

    ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಹೊಳಲ್ಕೆರೆ ಶಾಸಕ ಚಂದ್ರಪ್ಪ ತಮ್ಮ ಕ್ಷೇತ್ರದಲ್ಲಿನ ಪ್ರಕರಣಗಳ ಪ್ರಸ್ತಾಪಿಸಿದರು. ಸಾವಿರಾರು ಎಕರೆ ನೋಂದಾಯಿತ ಸೊಸೈಟಿ ಹೆಸರಿನಲ್ಲಿದ್ದು, ಸೊಸೈಟಿಯು ಅಸ್ತಿತ್ವ ಕಳೆದುಕೊಂಡಿರುವುದರಿಂದ ಹಾಗೂ ಜನರಿಗೆ ಯಾವುದೇ ಅನುಕೂಲವಾಗದಿರುವುದರಿಂದ ಆ ಜಮೀನನ್ನು ಕೂಡಲೇ ವಾಪಸ್ ಪಡೆದು ರೈತರಿಗೆ ಸಾಗುವಳಿ ಪತ್ರ ನೀಡಬೇಕೆಂದು ಆಗ್ರಹಿಸಿದರು.

    ಈ ಕೋರಿಕೆಗೆ ಒಪ್ಪಿ ತಲೆಯಾಡಿಸಿದ ಕಂದಾಯ ಸಚಿವ ಆರ್.ಅಶೋಕ್, ಹೊಳಲ್ಕೆರೆ ತಾಲೂಕಿನ ಗುಂಡೇರಿ ಕಾವಲು, ವನಕೆ ಕಾವಲು ಹಾಗೂ ತಾಳಿಕಟ್ಟೆ ಕಾವಲುಗಳಲ್ಲಿ ಸುಮಾರು 3873 ಎಕರೆ 27 ಗುಂಟೆ ಜಮೀನು ಇದೆ. ಅಸ್ತಿತ್ವ ಕಳೆದುಕೊಂಡಿರುವ ಸೊಸೈಟಿಯ ಬಗ್ಗೆ ಜಿಲ್ಲಾಧಿಕಾರಿಯಿಂದ ವರದಿ ಪಡೆದು ಜಮೀನು ವಾಪಸು ಪಡೆಯುವ ಬಗ್ಗೆ ನಿಯಮಾನುಸಾರ ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

    ಈ ವೇಳೆ ಚನ್ನಗಿರಿ, ಸಿಂಧನೂರು, ದೇವರ ಹಿಪ್ಪರಗಿ ಸೇರಿ ವಿವಿಧ ಕಡೆ ಇಂಥ ಪ್ರಕರಣಗಳಿವೆ, ಅಲ್ಲೂ ಕ್ರಮಕೈಗೊಳ್ಳಿ ಎಂದು ಕೆಲವು ಶಾಸಕರು ಒತ್ತಾಯಿಸಿದರು. ಇಂತಹ ಭೂಮಿ ಅನ್ಯಕಾರಣಕ್ಕೆ ಬಳಸುತ್ತಿದ್ದು, ಕೆಲವರು ವಾಣಿಜ್ಯ ಮಳಿಗೆಯನ್ನೂ ಕಟ್ಟಿದ್ದಾರೆ, ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

    ಬಳಿಕ ಉತ್ತರ ನೀಡಿದ ಸಚಿವ ಅಶೋಕ್, ಅಸ್ತಿತ್ವದಲ್ಲಿ ಇಲ್ಲದ ಸೊಸೈಟಿಗಳ ಬಳಿ ಇರುವ ಜಮೀನನ್ನು ವಾಪಾಸು ಪಡೆದುಕೊಂಡು ರೈತರಿಗೆ ಹಂಚಿಕೆ ಮಾಡಲು ಕ್ರಮಕೈಗೊಳ್ಳಲಾಗುವುದೆಂದರು.

    ಬಾಲ್ಡಿಯ ವಿಗ್​ ತೆಗೆಸಿದ್ರು… ಅಂಡರ್​ವೇರನ್ನೂ ಬಿಚ್ಚಿಸಿದರು… ಗುದನಾಳವನ್ನೂ ಪರೀಕ್ಷಿಸಿದರು…

    ದಂಡಪಿಂಡನಾಗಿ ಮನೆಯಲ್ಲಿರೋ ಗಂಡನಿಂದ ಸಾಕಾಗಿ ಹೋಗಿದೆ… ಕಾನೂನು ನೆರವು ಹೇಗೆ ಪಡೆಯಲಿ?

    ಆಟವಾಡುತ್ತ ಧಾನ್ಯದ ಡಬ್ಬದೊಳಗೆ ಹೊಕ್ಕ ಐದು ಕಂದಮ್ಮಗಳು ಹೊರಬಂದರು ಶವವಾಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts