More

    ‘ಜೈಶ್ರೀರಾಮ್‌ ಎಂದರೆ ಕೋಪವೇಕೆ? ಅವರಿವರನ್ನ ಒಲಿಸೋ ಬದ್ಲು ಇದನ್ನೋದಿ ಕೂಲ್‌ ಆಗಿ’

    ಭೂಪಾಲ್: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತ್ಯುತ್ಸವ ಸಮಾರಂಭ ಕೊಲ್ಕತಾದಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಜೈಶ್ರೀರಾಮ್‌ ಎಂದು ಘೋಷಣೆ ಕೂಗಿದವರ ಮೇಲೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

    ಪ್ರಧಾನಿ ನರೇಂದ್ರ ಮೋದಿ ಅವರ ಅವರ ಸಮ್ಮುಖದಲ್ಲಿ ಕೂಗಿದ್ದ ಈ ಘೋಷಣೆ ವಿರುದ್ಧ ಕಿಡಿಕಾರಿ ಹಲವಾರು ಮಂದಿಯ ಅಸಮಾಧಾನಕ್ಕೆ ಗುರಿಯಾಗಿದ್ದ ಮಮತಾ ಬ್ಯಾನರ್ಜಿ. ಇದು ರಾಜಕೀಯ ಸಮಾರಂಭವಲ್ಲ, ಸರ್ಕಾರಿ ಕಾರ್ಯಕ್ರಮ, ಆ ರೀತಿ ಕೂಗಬೇಡಿ ಎಂದು ಮಮತಾ ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ರಾಜಕೀಯ ಸ್ವರೂಪದ ಪಡೆದು ಆರೋಪ-ಪ್ರತ್ಯಾರೋಪಗಳಿಗೆ ಎಡೆ ಮಾಡಿಕೊಟ್ಟಿದೆ.

    ಜೈಶ್ರೀರಾಮ್‌ ಎಂದರೆ ಪ್ರಧಾನಿ ಮೋದಿಯೊಬ್ಬರಿಗೇ ಸೇರಿದ್ದು ಎಂದು ಮಮತಾ ಬ್ಯಾನರ್ಜಿ ಅಂದುಕೊಂಡಂತಿದೆ. ಈ ರೀತಿ ಅಂದುಕೊಂಡು ಅವರೇ ತಮ್ಮ ಅಸ್ತಿತ್ವದ ಪರಿಚಯ ಮಾಡಿಕೊಡುತ್ತಿದ್ದಾರೆ ಎಂದು ಅನೇಕ ಮಂದಿ ಲೇವಡಿ ಮಾಡುತ್ತಿದ್ದಾರೆ. ಮಾತ್ರವಲ್ಲದೇ ಶ್ರೀರಾಮಚಂದ್ರ ಎನ್ನುವುದು ಒಂದು ಪಕ್ಷಕ್ಕೆ ಸೇರಿದ್ದು ಎಂದು ಮಮತಾ ತಿಳಿದುಕೊಂಡಿರುವುದು ಹಾಸ್ಯಾಸ್ಪದ ಎಂದು ಟೀಕೆ ಮಾಡಲಾಗುತ್ತಿದೆ.
    ಈ ಮಧ್ಯೆಯೇ, ಶ್ರೀರಾಮಚಂದ್ರ ಯಾರು ಎನ್ನುವುದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗೆ ತಿಳಿಸುವ ಅವಶ್ಯಕತೆ ಇದೆ ಎಂದು ಹೇಳಿರುವ ಮಧ್ಯ ಪ್ರದೇಶ ವಿಧಾನಸಭಾ ಹಂಗಾಮಿ ಸ್ಪೀಕರ್ ರಾಮೇಶ್ವರ್ ಶರ್ಮಾ ಮಮತಾ ಬ್ಯಾನರ್ಜಿಗೆ ರಾಮಾಯಣದ ಪ್ರತಿಯೊಂದನ್ನು ಕೋರಿಯರ್ ಮೂಲಕ ಕಳುಹಿಸಿದ್ದಾರೆ.

    ಬಾಂಗ್ಲಾದೇಶದ ಮುಸ್ಲಿಂರ ವೋಟ್ ಬ್ಯಾಂಕ್ ಮನವೊಲಿಸುವ ಕಾರಣದಿಂದ ಜೈ ಶ್ರೀರಾಮ್ ಘೋಷಣೆಗೆ ಮಮತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಟೀಕಿಸಿರುವ ಶರ್ಮಾ ಅವರು, ರಾಮಾಯಣ ಪ್ರತಿಯನ್ನು ಕಳುಹಿಸಿದ್ದಾರೆ.

    ಈ ದೇಶ ಭಗವಾನ್ ರಾಮನಿಗೆ ಸೇರಿದ್ದು, ರಾಮನನ್ನು ನಿರ್ಲಕ್ಷಿಸಿದ ಪ್ರತಿಯೊಬ್ಬರೂ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಕೂಡಾ ತಮ್ಮ ತಪ್ಪನ್ನು ಅರಿತುಕೊಂಡು ರಾಮಾಯಾಣವನ್ನು ಓದಲು ಪ್ರಾರಂಭಿಸುತ್ತಾರೆ ಎಂಬ ನಂಬಿಕೆಯಿಂದ ರಾಮಾಯಣ ಪ್ರತಿಯನ್ನು ಕಳುಹಿಸಿರುವುದಾಗಿ ಶರ್ಮಾ ಮಾಹಿತಿ ನೀಡಿದ್ದಾರೆ.

    ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಸಂವಿಧಾನದಲ್ಲಿ ಶ್ರೀರಾಮ ಉಲ್ಲೇಖಿಸಿದ್ದಾರೆ. ಗಾಂಧೀಜಿ ದೇಶವನ್ನು ರಾಮ ರಾಜ್ಯ ಮಾಡಲು ಸಂಕಲ್ಪ ತೊಡುವಂತೆ ಹೇಳುತ್ತಾರೆ. ಆದರೆ. ಮಮತಾ ಬ್ಯಾನರ್ಜಿ ಜೈ ಶ್ರೀರಾಮ್ ಘೋಷಣೆಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ ಎಂದರೆ ಆಶ್ಚರ್ಯ ಹಾಗೂ ನೋವಾಗಿದೆ ಎಂದಿದ್ದಾರೆ.

    ಲವರ್‌ ಜತೆ ಸಿಕ್ಕಿಬಿದ್ದು ರಾಜಸ್ಥಾನದಿಂದ ಓಡಿಹೋದವ ಗೊತ್ತಿಲ್ಲದೇ ಸೇರಿಬಿಟ್ಟ ಪಾಕಿಸ್ತಾನ!

    ಮಂಚದಲ್ಲಿ ಪತ್ನಿಗೇಕೆ ನಿರಾಸೆ ಎಂದು ಚಿಂತೆಗೊಂಡಿದ್ದ ನನಗೀಗ ಕಾರಣ ತಿಳಿದು ದಿಕ್ಕೇತೋಚದಾಗಿದೆ, ಏನು ಮಾಡಲಿ?

    ನನ್ನನ್ನು ತವರಿಗೆ ದಬ್ಬಿದ್ದು ವಾಪಸ್‌ ಕರೆಸಿಕೊಳ್ಳುತ್ತಿಲ್ಲ- ಕೇಸ್ ಹಾಕದೇ ಪತಿಯನ್ನು ಸೇರುವುದು ಹೇಗೆ?

    ಕುತಂತ್ರದಿಂದ ನುಸುಳಿದ್ದ ಪಾಕ್‌ನ ಗುಂಡಿಗೆ ಎದೆಯೊಡ್ಡಿದ್ದ ಯೋಧ ಹುತಾತ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts