More

    ಮಮತಾ ಬ್ಯಾನರ್ಜಿ ಮೊದಲು ಅವರ ತಂದೆ ಯಾರೆಂದು ಕಂಡು ಹಿಡಿಯಲಿ: ಬಿಜೆಪಿ ಸಂಸದ

    ದುರ್ಗಾಪುರ್: ದೇಶದಲ್ಲಿ ದಿನದಿಂದ ದಿನಕ್ಕೆ ಲೋಕಸಬೆ ಚುನಾವಣೆಯ ಕಾವು ಹೆಚ್ಚುತ್ತಿದ್ದು ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಿವೆ. ಇತ್ತ ರಾಜಕೀಯ ಪಕ್ಷಗಳ ನಾಯಕರು ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದು, ಸರಣಿ ಸಭೆಗಳನ್ನು ಆಯೋಜಿಸುವ ಮೂಲಕ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.

    ಇದೀಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಮೇದಿನಿಪುರದ ಬಿಜೆಪಿ ಸಂಸದ ದಿಲೀಪ್​ ಘೋಷ್​ ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಟಿಎಂಸಿಯ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಪರ-ವಿರೋಧದ ಚರ್ಚಗೆ ಆಸ್ಪದ ಮಾಡಿಕೊಟ್ಟಿದೆ.

    ಇದನ್ನೂ ಓದಿ: ಪಾಕ್​ನಲ್ಲಿ ಆತ್ಮಾಹುತಿ ಬಾಂಬ್ ದಾಳಿ; 5 ಚೀನಿಯರ ಸಾವು

    ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣೆ ಸಮಯದಲ್ಲಿ ಗೋವಾಗೆ ಹೋಗುತ್ತಾರೆ, ಅಲ್ಲಿ ತಾನು ಗೋವಾದ ಪುತ್ರಿ ಎಂದು ಹೇಳುತ್ತಾರೆ. ತ್ರಿಪುರಾಗೂ ಹೋದಾಗಲೂ ಸಹ ಈ ಮಾತನ್ನು ಹೇಳುತ್ಥಾರೆ. ಮೊದಲಿಗೆ ಅವರ ತಂದೆ ಯಾರು ಎಂಬುದು ನಿರ್ಧಾರವಾಗಬೇಕು. ಸುಮ್ಮನೇ ಯಾರದ್ದೋ ಮಗಳು ಎಂದು ಹೇಳಿದರೆ ಅದು ಸರಿ ಹೋಗುವುದಿಲ್ಲ ಎಂದು ಹೇಳಿದ್ದಾರೆ.

    ಇತ್ತ ಬಿಜೆಪಿ ಸಂಸದನ ಹೇಳಿಕೆಗೆ ಕಿಡಿಕಾರಿರುವ ಟಿಎಂಸಿ ದಿಲೀಪ್ ಘೋಷ್ ಅವರನ್ನು ಅವರ ಕ್ಷೇತ್ರದಿಂದ ಹೊರ ಹಾಕಿ, ಬೇರೆಡೆ ಟಿಕೆಟ್​ ನೀಡಲಾಗಿದೆ. ಅದರ ಹತಾಷೆಯನ್ನು ಈ ರೀತಿ ಹೊರ ಹಾಕುತ್ತಿದ್ದಾರೆ. ಒಂದು ವಿಷಯ ಸ್ಪಷ್ಟವಾಗಿದೆ. ಘೋಷ್ ಅವರು ಬಂಗಾಳದ ಮಹಿಳೆಯರಿಗೆ ಯಾವುದೇ ಗೌರವವನ್ನು ಕೊಡುವುದಿಲ್ಲ. ಅದು ಹಿಂದೂ ಧರ್ಮದ ಪೂಜ್ಯ ದೇವತೆಯಾಗಿರಲಿ ಅಥವಾ ಭಾರತದ ಏಕೈಕ ಮಹಿಳಾ ಮುಖ್ಯಮಂತ್ರಿಯಾಗಿರಲಿ ಅವರು ಗೌರವಿಸಲ್ಲ ಎಂದು ಟಿಎಂಸಿ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts