More

    ಮಂಚದಲ್ಲಿ ಪತ್ನಿಗೇಕೆ ನಿರಾಸೆ ಎಂದು ಚಿಂತೆಗೊಂಡಿದ್ದ ನನಗೀಗ ಕಾರಣ ತಿಳಿದು ದಿಕ್ಕೇತೋಚದಾಗಿದೆ, ಏನು ಮಾಡಲಿ?

    ಮಂಚದಲ್ಲಿ ಪತ್ನಿಗೇಕೆ ನಿರಾಸೆ ಎಂದು ಚಿಂತೆಗೊಂಡಿದ್ದ ನನಗೀಗ ಕಾರಣ ತಿಳಿದು ದಿಕ್ಕೇತೋಚದಾಗಿದೆ, ಏನು ಮಾಡಲಿ? ಪ್ರಶ್ನೆ: ನಾನೊಬ್ಬ ಸಭ್ಯಯುವಕ. ವಯಸ್ಸು 30. ನನ್ನ ಮದುವೆಯಾಗಿ 2 ವರ್ಷವಾಗಿದೆ. ನನ್ನ ಹೆಂಡತಿಗೆ 25 ವರ್ಷ. ನನ್ನ ತಾಯಿಯೇ ಈ ಹುಡುಗಿಯನ್ನು ನೋಡಿ ಬಹಳ ಇಷ್ಟಪಟ್ಟು ಮದುವೆ ಮಾಡಿಸಿದರು. ಮೊದಲ ಆರುತಿಂಗಳು ಮಾತ್ರ ನನ್ನ ಹೆಂಡತಿ ನನ್ನೊಂದಿಗೆ ಚೆನ್ನಾಗಿದ್ದಳು. ನಂತರ ಯಾಕೋ ಅನ್ಯಮನಸ್ಕಳಾಗಿರುವಂತೆ ಕಾಣುತ್ತಿದ್ದಳು. ಪಾಪ ತಂದೆ ತಾಯಿಯರನ್ನು ಬಿಟ್ಟು ಬಂದಿದ್ದಾಳೆ ಎಂದು ನಾನೇ ಬಲವಂತದಿಂದ ಅವಳ ತೌರಿಗೆ ಕಳಿಸಿದೆ.

    ಎರಡು ದಿನವೂ ಇರದೇ ವಾಪಸ್ ಬಂದಳು. ನನ್ನ ಮೇಲಿನ ಪ್ರೀತಿಗಾಗಿ ಎಂದುಕೊಂಡೆ. ಆದರೆ ವಿಷಯವೇ ಬೇರೆ ಇತ್ತು. ಆಗಲೇ ಅವಳ ಅನ್ಯಮನಸ್ಕತೆ ಶುರುವಾದದ್ದು. ನನಗೇಕೋ ನನ್ನಲ್ಲಿಯೇ ಏನೋ ದೋಷವಿದೆ ಎನಿಸಿ ಬಹಳ ಸಹನೆಯಿಂದ ಅವಳಿಗೆ ಇಷ್ಟವಾಗುವ ಹಾಗೆ ನಡೆದುಕೊಳ್ಳಲು ಪ್ರಯತ್ನಿಸಿದೆ. ಮತ್ತೆ ಆರು ತಿಂಗಳು ಕಳೆದರೂ ನನ್ನ ಅವಳ ಸಂಬಂಧ ನಿಸ್ಸಾರವಾಗಿಯೇ ಮುಂದುವರೆಯಿತು. ಹಾಸಿಗೆಯಲ್ಲೂ ಅವಳ ನಿರಾಸಕ್ತಿ ನನಗೆ ಬೇಸರವನ್ನೇ ತರುತ್ತಿತ್ತು.

    ಇಂಥಾ ಸಮಯದಲ್ಲೇ ಒಂದು ಭಾನುವಾರ ಅವಳು ಸ್ನಾನಕ್ಕೆ ಹೋದಾಗ ಅವಳಿಗೊಂದು ಫೋನ್ ಬಂತು. ನಾನು ಎತ್ತುವ ಮೊದಲೇ ಕಟ್ ಆಯಿತು. ತಕ್ಷಣ ಒಂದು ಮೆಸೇಜ್ ಬಂತು. ಅದನ್ನು ಓದಿ ನನ್ನ ಕಣ್ಣು ಕತ್ತಲಿಟ್ಟಿತು. ನಾನು ಮೋಸಹೋಗಿದ್ದೇನೆ ಎನ್ನುವ ಅರಿವಾಯಿತು. ಅದು ಅವಳ ಪ್ರಿಯತಮ ಬರೆದದ್ದು. ಅವನು ಬರೆದದ್ದನ್ನು ಇಲ್ಲಿ ಹೇಳಲೂ ನನಗೆ ಅಸಹ್ಯವಾಗುತ್ತದೆ. ಆ ನಂತರ ನಾನು ಅವಳ ಆಸೆಯನ್ನೇ ಬಿಟ್ಟೆ. ನಾನೂ ಅವಳಿಗಿಂತಾ ಹೆಚ್ಚು ನಿರಾಸಕ್ತನಾದೆ. ಆ ಬಗ್ಗೆ ಅವಳು ಇದುವರೆವಿಗೂ ಯಾಕೆ ಏನು ಎಂದು ಕೇಳಿಲ್ಲ. ಹೆಸರಿಗೆ ಇಬ್ಬರೂ ಒಂದೇ ಮನೆಯಲ್ಲಿದ್ದೇವೆ. ನಾನು ಮನೆಯಲ್ಲಿ ಊಟ ತಿಂಡಿ ಏನನ್ನೂ ಮಾಡುತ್ತಿಲ್ಲ. ಒಮ್ಮೆ ಹೀಗೆ ಅವಳ ಫೋನಿನ ಮೆಸೇಜ್ ಅಚಾನಕವಾಗಿ ನೋಡಿದೆ. “ ಅವನು ಮನೆಯಲ್ಲಿ ಊಟ ಮಾಡುವುದಿಲ್ಲ. ನೀನು ಮಧ್ಯಾನ್ಹದ ಊಟಕ್ಕೆ ಬಾ. ಸಂಜೆಯವರೆಗೆ ಮಜಾ ಮಾಡೋಣ” ಎಂದು ಬರೆದಿದ್ದಳು. ಮತ್ತು ಅವನೊಂದಿಗೆ ಇರುವ ಎರಡು ಫೋಟೋಗಳನ್ನೂ ಹಾಕಿದ್ದಳು. ಆಗ ಗೊತ್ತಾಯಿತು ಅವನು ಮನೆಗೂ ಬರುತ್ತಾನೆ ಎಂದು. ಈಗ ನನಗೆ ಜೀವನವೇ ಬೇಸರವೆನಿಸುತ್ತಿದೆ. ನನಗೆ ಅವಳ ಗುಟ್ಟು ಗೊತ್ತಾಗಿರುವುದು ಅವಳಿಗೆ ತಿಳಿದಿಲ್ಲ. ಈಗ ಏನು ಮಾಡಲಿ ತಿಳಿಸಿ.

    ಉತ್ತರ: ನಿಮ್ಮ ಸಮಸ್ಯೆಗೆ ಎರಡು ನೇರ ದಾರಿಗಳಲ್ಲಿ ಪರಿಹಾರ ಕಂಡುಕೊಳ್ಳಬಹುದು. 1 ನಿಮ್ಮ ಹೆಂಡತಿಯ ಹತ್ತಿರ ಹೀಗೆ ಹೇಳಿ “ ಗಂಡ ಹೆಂಡತಿಯ ಸಂಬಂಧ ನಿರ್ಮಲವಾಗಿದ್ದರೆ ಮಾತ್ರ ಮುಂದುವರೆಯುತ್ತದೆ. ನೀನು ಹೀಗೆ ಎರಡು ದೋಣಿಗಳ ಮೇಲೆ ಒಂದೊಂದು ಕಾಲಿಟ್ಟು ಪ್ರಯಾಣ ಮಾಡಲಾಗುವುದಿಲ್ಲ. ನೀನು ಬೇಕಿದ್ದರೆ ನಿನ್ನ ಹಳೆಯ ಸ್ನೇಹಿತನ ಹತ್ತಿರವೇ ಹೊರಟುಹೋಗು” . ಇದಕ್ಕೆ ನಿಮ್ಮಹೆಂಡತಿ ಒಪ್ಪದಿದ್ದರೆ ನಿಮಗೆ ಎರಡನೇ ದಾರಿಯೂ ಇದೆ. ನಿಮ್ಮ ಹೆಂಡತಿಯ ತಂದೆ ಮತ್ತು ತಾಯಿಯನ್ನು ಕರೆಸಿ.

    ಎಲ್ಲ ವಿಚಾರವನ್ನೂ ತಿಳಿಸಿ. ಮತ್ತು ಈ ರೀತಿ ಹೇಳಿ “ ನಿಮ್ಮ ಮಗಳಿಗೆ ನಾನು ಗಂಡನಾಗಿ ಮುಂದುವರೆಯಬೇಕೆಂದು ನಿಮಗೆ ಇಷ್ಟವಿದ್ದಲ್ಲಿ ಅವಳು ನನ್ನೊಂದಿಗೆ ನಿಯತ್ತಾಗಿ ಬಾಳಬೇಕು. ನನ್ನ ಮನೆಯಲ್ಲಿ ನನ್ನ ಜೊತೆ ಸಂಸಾರ ಮಾಡುತ್ತಾ ತನ್ನ ಹಳೆಯ ಸ್ನೇಹಿತನಿಗೆ ಫೋನ್ ಮಾಡುವುದು ಮೆಸೇಜ್ ಮಾಡುವುದು ಗರತಿಯ ಲಕ್ಷಣವಲ್ಲ. ಹೀಗಾದರೆ ನಾನು ನಿಮ್ಮ ಮಗಳಿಗೆ ಡಿವೊರ್ಸ್ ಕೊಡಬೇಕಾಗುತ್ತದೆ”.

    ಇಂಥಾ ವಿಚಾರಗಳಲ್ಲಿ ದೊಡ್ಡವರ ಸಲಹೆ ಪಡೆಯಬೇಕು. ನೀವು ಈ ವಿಚಾರ ನಮ್ಮ ಮೂರುಜನಕ್ಕೆ ಮಾತ್ರ ಗೊತ್ತು ಎಂದು ಬರೆದಿದ್ದೀರಿ. ಇದು ತಪ್ಪು. ಮಾನಮರ್ಯಾದೆ ಎಂದು ನೀವು ಹೆದರುತ್ತಿದ್ದೀರಿ. ಆದರೆ ನಿಮ್ಮ ಹೆಂಡತಿಗೆ ಅದಿಲ್ಲವಲ್ಲ? ನೀವೊಬ್ಬರೇ ಯಾಕೆ ದುಗುಡ ಅನುಭವಿಸಬೇಕು? ತಪ್ಪು ಮಾಡುತ್ತಿರುವವರು ನಿಮ್ಮ ಹೆಂಡತಿ , ಶಿಕ್ಷೆ ನಿಮಗೆ ಮಾತ್ರವೇ? ಈ ವಿಚಾರಕ್ಕೆ ನಿಮ್ಮ ಹೆಂಡತಿಯ ಹೆತ್ತವರೂ ಉತ್ತರದಾಯಿತ್ವವನ್ನು ಹೊರಬೇಕು. ಅವರಿಗೆ ತಮ್ಮ ಮಗಳ ಕಲ್ಯಾಣಗುಣಗಳನ್ನು ತಿಳಿಸಿ. ಅವರೂ ತಮ್ಮ ಮಗಳು ಮಾಡುತ್ತಿರುವುದೇ ಸರಿ ಎಂದು ವಾದಿಸಿದರೆ ಅಂಥವರ ಸಂಬಂಧವೇ ಬೇಡವೆಂದು ನಿರ್ಧರಿಸಿ ವಿಚ್ಛೇದನ ಪಡೆದುಕೊಳ್ಳಿ.

    ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ಮೊದಲ ರಾತ್ರಿಯೇ ಪತ್ನಿಗೆ ಗುಟ್ಟು ಹೇಳಿದೆ- ಆಕೆ ಕ್ಷಮಿಸಿದರೂ ನನ್ನ ಮೇಲೆಯೇ ನನಗೆ ಅಸಹ್ಯ ಹುಟ್ಟಿದೆ…

    ಮದುವೆಯಾಗುವ ಆಸೆ- ಆದರೆ ಈ ಒಂದು ಸಮಸ್ಯೆಯಿಂದ ಕುಗ್ಗಿಹೋಗಿದ್ದೇನೆ: ಪ್ಲೀಸ್ ಪರಿಹಾರ ಹೇಳಿ

    ಗಂಡ ಹತ್ತಿರವೂ ಬರಲ್ಲ… ಕಾರಣವನ್ನೂ ಹೇಳಲ್ಲ… ಸತ್ತೇ ಹೋಗೋಣ ಅನ್ನಿಸುತ್ತಿದೆ ಮೇಡಂ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts